Onion: ಗಗನದತ್ತ ಈರುಳ್ಳಿ ಬೆಲೆ, ಬೆಲೆ ನಿಯಂತ್ರಣಕ್ಕೆ ಕೇಂದ್ರ ಬಫರ್‌ ಸ್ಟಾಕ್ ಈರುಳ್ಳಿ ಮಾರುಕಟ್ಟೆಯತ್ತ

ನವದೆಹಲಿ, ಆಗಸ್ಟ್ 11: ಕರ್ನಾಟಕದಲ್ಲಿ ಇತ್ತೀಚೆಗೆ ಟೊಮೆಟೋ ಬೆಲೆ ಗಗನಕ್ಕೇರಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿತ್ತು. ಅದರ ಬೆನ್ನಲ್ಲೆ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಾಗುತ್ತಿದೆ. ಈ ಸಂಬಂಧ ಬೆಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ತನ್ನಲ್ಲಿನ ಬಫರ್ ಸ್ಟಾಕ್‌ನಿಂದ ಪ್ರಧಾನ ತರಕಾರಿ ಈರುಳ್ಳಿ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಆರಂಭಿಸಿದೆ.

ದೂರದೃಷ್ಟಿಯ ಕೇಂದ್ರ ಸರ್ಕಾರ ಪ್ರಸ್ತಕ ವರ್ಷ 2023-24ರ ಋತುವಿನಲ್ಲಿ 3 ಲಕ್ಷ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್ ಆಗಿ ನಿರ್ವಹಿಸಲು ಈ ಮೊದಲೇ ತೀರ್ಮಾನಿಸಿತ್ತು. ಕಳೆದ ವರ್ಷ ಅಂದರೆ 2022-23ರಲ್ಲಿ ಸರ್ಕಾರವು 2.51 ಲಕ್ಷ ಟನ್ ಈರುಳ್ಳಿಯನ್ನು ಸರ್ಕಾರ ಬೆಲೆ ಏರಿಕೆ ಸಂರ್ಭದಲ್ಲಿ ಬಫರ್ ಸ್ಟಾಕ್ ಆಗಿ ನಿರ್ವಹಿಸಿತ್ತು.

Central Govt Start Releasing Buffer Stock Onion To Markets For Control rein prices

ಯಾವಾಗ ಮಾರುಕಟ್ಟೆಗಳಿಗೆ ಈರುಳ್ಳಿ ಪೂರಕೆ ಕಡಿಮೆ ಆಗುತ್ತದೆಯೋ ಆಗ ಅದರ ದರಗಳು ಗಣನೀಯವಾಗಿ ಹೆಚ್ಚಾಗುತ್ತದೆ. ಯಾವುದೇ ಅಗತ್ಯತೆಗಳನ್ನು ಪೂರೈಸಲು ಮತ್ತು ಬೆಲೆ ಸ್ಥಿರೀಕರಣಕ್ಕಾಗಿ ಬಫರ್ ಸ್ಟಾಕ್ ಅನ್ನು ಸರ್ಕಾರ ನಿರ್ವಹಿಸುತ್ತಾ ಬಂದಿದೆ.

ಈರುಳ್ಳಿ ತ್ವರಿತ ವಿಲೇವಾರಿಗೆ ವಿಧಾನ ಅಂತಿಮ

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು, ಗುರುವಾರ ಸರ್ಕಾರದ ಕೃಷಿ ಮಾರುಕಟ್ಟೆ ಏಜೆನ್ಸಿಗಳ ವ್ಯವಸ್ಥಾಪಕ ನಿರ್ದೇಶಕರರು, ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (NAFED) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NCCF) ಅವರು ಈರುಳ್ಳಿ ವಿಲೇವಾರಿ ವಿಧಾನಗಳನ್ನು ಅಂತಿಮಗೊಳಿಸಿದ್ದಾರೆ. ಇನ್ನೇನು ಮಾರುಕಟ್ಟೆಗಳಿಗೆ ಸಮರ್ಪಕವಾಗಿ ಈರುಳ್ಳಿ ಪೂರೈಕೆ ಆಗಲಿದೆ. ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Central Govt Start Releasing Buffer Stock Onion To Markets For Control rein prices

ಭಾರತ ದೇಶಾದ್ಯಂತ ಸರಾಸರಿಗಿಂತ ಚಿಲ್ಲರೆ ಬೆಲೆ ಮಾರಾಟ ಹೆಚ್ಚಿರುವ ರಾಜ್ಯಗಳು ಅಥವಾ ಪ್ರದೇಶಗಳಲ್ಲಿ ಪ್ರಮುಖ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಹಿಂದಿನ ತಿಂಗಳು ಮತ್ತು ವರ್ಷದಲ್ಲಿ ಬೆಲೆಗಳ ಹೆಚ್ಚಳದ ದರಗಳು ಮಿತಿ ಮಟ್ಟಕ್ಕಿಂತ ಹೆಚ್ಚಿವೆ.

ಆನ್‌ಲೈನ್‌ನಲ್ಲೂ ಚಿಲ್ಲರೆ ಮಾರಾಟಕ್ಕೆ ಶೋಧ

ಇ-ಹರಾಜಿನ ಮೂಲಕ ವಿಲೇವಾರಿ ಮತ್ತು ಇ-ಕಾಮರ್ಸ್ ವೇದಿಕೆಗಳಲ್ಲಿ ಈರುಳ್ಳಿ ಚಿಲ್ಲರೆ ಮಾರಾಟವನ್ನು ಸಹ ಪರಿಶೋಧಿಸಲಾಗುತ್ತಿದೆ ಎಂದು ಆಹಾರ ಸಚಿವಾಲಯವು ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಈರುಳ್ಳಿ ಲಭ್ಯವಾಗುವಂತೆ ಸರ್ಕಾರ ಮಾಡುತ್ತಿದೆ. ಈ ಸಂಬಂಧ ವಿಲೇವಾರಿ ಪ್ರಮಾಣ ಮತ್ತು ವೇಗ ಹೆಚ್ಚಿಸಲಾಗಿದೆ. ಬೆಲೆ ಹಾಗೂ ಲಭ್ಯತೆಯ ಆಧಾರದಲ್ಲಿ ಮಾಪನಾಂಕ ಮಾಡಲಾಗುತ್ತದೆ. ಮಾರುಕಟ್ಟೆ ಜೊತೆ ಜೊತೆಗೆ ಆಯಾ ರಾಜ್ಯಗಳಲ್ಲಿನ ಗ್ರಾಹಕ ಸಹಕಾರ ಸಂಘ ಹಾಗೂ ನಿಗಮಗಳಿಗೆ ಚಿಲ್ಲರೆ ಮಾರಾಟ ಮಳಿಗೆಗಳಿಗೆ ರಿಯಾಯಿತಿ ದರದಲ್ಲಿ ಮಾರಲು ಸಹ ನಿರ್ಧರಿಸಲಾಗಿದೆ.

ಗ್ರಾಹಕರಿಗೆ ಕೈಗೆಟುವಂತೆ ಮಾಡಲು ಕ್ರಮ

ಈ ಹಿಂದಿನ 4 ವರ್ಷಗಳಲ್ಲಿ ಈರುಳ್ಳಿ ಬಫರ್ ಸ್ಟಾಕ್ ಗಾತ್ರವು ಸುಮಾರು ಮೂರು ಪಟ್ಟು ಏರಿಕೆ ಆಗಿದೆ. 2020-21ರಲ್ಲಿ ಒಂದು ಲಕ್ಷ ಮೆಟ್ರಿಕ್‌ ಟನ್‌ನಿಂದ 2023-24ರಲ್ಲಿ 3 ಲಕ್ಷ ಮೆಟ್ರಿಕ್‌ ಟನ್‌ ಏರಿಕೆ ಮಾಡಲಾಗಿದೆ. ಈರುಳ್ಳಿ ಬಫರ್ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಈರುಳ್ಳಿ ಲಭ್ಯವಾಗುವಂತೆ ಮತ್ತು ಬೆಲೆ ಸ್ಥಿರತೆ ಕಾಪಾಡಲು ಮುಖ್ಯ ಪಾತ್ರ ವಹಿಸಿದೆ.

ಏಪ್ರಿಲ್ ನಿಂದ ಜೂನ್ ಅವಧಿ ವೇಳೆ ಕಟಾವು ಮಾಡಿದ ರಾಬಿ ಬೆಳೆಯಾದ ಈರುಳ್ಳಿ ಪ್ರಮಾಣ ಭಾರತದ ಉತ್ಪಾದನೆಯ 65 ರಷ್ಟಿದೆ. ಇದು ಅಕ್ಟೋಬರ್-ನವೆಂಬರ್‌ನಲ್ಲಿ ಅವಧಿಯಲ್ಲಿನ ಖಾರಿಫ್ ಬೆಳೆ ಕಟಾವಿನ ವರೆಗೆ ಗ್ರಾಹಕರಿಗೆ ಬೇಕಾಗುವಷ್ಟು ಬೇಡಿಕೆಯನ್ನು ಪೂರೈಸಲಿದೆ ಎಂದು ಕೇಂದ್ರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+