CBSE 10ನೇ ತರಗತಿ ಗಣಿತ ಪರೀಕ್ಷೆಗೆ ವಿದ್ಯಾರ್ಥಿಗಳ ಮಿಶ್ರ ಪ್ರತಿಕ್ರಿಯೆ: 'ಕೇಸ್ ಸ್ಟಡಿ' ವಿಭಾಗಕ್ಕೆ ಹೆಚ್ಚಿನ ಗಮನ ಅಗತ್ಯ
ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) ಮಂಗಳವಾರ, ಫೆಬ್ರವರಿ 17, 2026 ರಂದು ನಡೆಸಿದ 10ನೇ ತರಗತಿಯ ಗಣಿತ (Mathematics Standard ಮತ್ತು Basic) ಬೋರ್ಡ್ ಪರೀಕ್ಷೆಯು ದೇಶಾದ್ಯಂತ ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಶಿಕ್ಷಕರು ಹಾಗೂ ಶೈಕ್ಷಣಿಕ ತಜ್ಞರ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಪ್ರಶ್ನೆಪತ್ರಿಕೆಯು ಬಹುಪಾಲು ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮವನ್ನು ಆಧರಿಸಿದ್ದರೂ, ಪರೀಕ್ಷಾ ಕೊಠಡಿಯಲ್ಲಿ ಸಮಯ ನಿರ್ವಹಣೆ (Time Management) ಮಾಡುವುದು ಬಹಳ ನಿರ್ಣಾಯಕವಾಗಿತ್ತು.
ಎನ್‌ಸಿಇಆರ್‌ಟಿ ಆಧಾರಿತ ಮಾದರಿ
ಬೆಂಗಳೂರಿನ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯ ಶಿಕ್ಷಕರಾದ ವಾಮನರಾವ್ ಎಸ್ ಪಾಟೀಲ್ ಮತ್ತು ಬೆನಸಿರ್ ಪಿ.ಎ ಅವರ ಪ್ರಕಾರ, "ಇಂದು ನಡೆದ 10ನೇ ತರಗತಿಯ ಗಣಿತ ಪರೀಕ್ಷೆಯು ಸಾಧಾರಣ ಕಠಿಣತೆಯಿಂದ (Moderate) ಕೂಡಿತ್ತು. ಕಳೆದ ವರ್ಷದ ಪ್ರಶ್ನೆಪತ್ರಿಕೆಗೆ ಹೋಲಿಸಿದರೆ ಈ ಬಾರಿ ಪೇಪರ್ ಸಾಕಷ್ಟು ಸುಲಭವಾಗಿತ್ತು." ಪ್ರಶ್ನೆಗಳು ಸಂಪೂರ್ಣವಾಗಿ ಎನ್‌ಸಿಇಆರ್‌ಟಿ ಆಧಾರಿತವಾಗಿದ್ದ ಕಾರಣ, ಉತ್ತಮವಾಗಿ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಶಿವ್ ನಾಡಾರ್ ಶಾಲೆಯ ಗಣಿತ ವಿಭಾಗದ ಮುಖ್ಯಸ್ಥ ವರುಣ್ ಗೋಯಲ್ ಹೇಳುವಂತೆ, ಪ್ರಶ್ನೆಪತ್ರಿಕೆಯಲ್ಲಿ ಶೇಕಡಾ 70ರಷ್ಟು ಪ್ರಶ್ನೆಗಳು ನೇರವಾಗಿ ಪಠ್ಯಪುಸ್ತಕದ ಅಭ್ಯಾಸಗಳಿಂದಲೇ (Textbook Exercises) ಬಂದಿದ್ದವು. ಬೇಸಿಕ್ ಪ್ರೊಪೋರ್ಷನಾಲಿಟಿ ಥಿಯರಮ್ (BPT) ಮೇಲಿನ ಪ್ರಮೇಯಗಳು, ಚಕ್ರೀಯ ಚತುರ್ಭುಜಗಳ (Cyclic quadrilaterals) ಗುಣಲಕ್ಷಣಗಳು, ಸ್ಪರ್ಶಕಗಳು ಮತ್ತು ತ್ರಿಜ್ಯಗಳು, ಹಾಗೂ ಅಂಕಿ-ಅಂಶಗಳ ವಿಭಾಗದಿಂದ ಮಧ್ಯಾಂಕ (Median) ಮತ್ತು ಬಹುಲಕ (Mode) ಕಂಡುಹಿಡಿಯುವ ನೇರ ಪ್ರಶ್ನೆಗಳನ್ನು ಕೇಳಲಾಗಿತ್ತು. ತ್ರಿಕೋನಮಿತಿಯ (Trigonometry) ಅನ್ವಯಿಕ ಪ್ರಶ್ನೆಗಳು ಸಹ ವಿದ್ಯಾರ್ಥಿಗಳಿಗೆ ಪರಿಚಿತ ಮಾದರಿಯಲ್ಲೇ ಇದ್ದವು.
ಗಾಜಿಯಾಬಾದ್‌ನ ಸಿಲ್ವರ್‌ಲೈನ್ ಪ್ರೆಸ್ಟೀಜ್ ಶಾಲೆಯ ಶಿಕ್ಷಕಿ ಶಿಲ್ಪಿ ಜೈನ್, "80 ಅಂಕಗಳ ಮೂರು ಗಂಟೆಗಳ ಈ ಪರೀಕ್ಷೆಯು ಸಿಬಿಎಸ್ಇ ಬಿಡುಗಡೆ ಮಾಡಿದ್ದ ಸ್ಯಾಂಪಲ್ ಪೇಪರ್ ಮಾದರಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿದೆ. ಎಲ್ಲಾ ಸೆಟ್‌ಗಳ ಪ್ರಶ್ನೆಪತ್ರಿಕೆಗಳು ಸುಲಭವಾಗಿದ್ದವು" ಎಂದು ವಿಶ್ಲೇಷಿಸಿದ್ದಾರೆ.
ಪ್ರಶ್ನೆ ಪತ್ರಿಕೆಯ ರಚನೆ ಹಾಗೂ ವಿಭಾಗವಾರು ವಿಶ್ಲೇಷಣೆ:
ಗುರ್‌ಗಾಂವ್‌ನ ಕೆಐಐಟಿ (KIIT) ವರ್ಲ್ಡ್ ಸ್ಕೂಲ್‌ನ ಪ್ರಬ್ಲೀನ್ ಕೌರ್ ಅವರ ಪ್ರಕಾರ, ಗಣಿತ ಬೇಸಿಕ್ (Basic) ಪತ್ರಿಕೆಯು 'ಮಧ್ಯಮದಿಂದ ಕಠಿಣ' ಮಟ್ಟದಲ್ಲಿತ್ತು. ಪಶ್ನೆ ಪತ್ರಿಕೆಯ ರಚನೆ ಹೀಗಿತ್ತು: ಒಟ್ಟು 5 ವಿಭಾಗಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು.
1. ವಿಭಾಗ A (Section A) ನಲ್ಲಿ ತಲಾ 1 ಅಂಕದ 18 ಬಹುಆಯ್ಕೆ ಪ್ರಶ್ನೆಗಳು ಮತ್ತು 2 ಅಸರ್ಷನ್-ರೀಸನ್ ಪ್ರಶ್ನೆಗಳಿದ್ದವು.
2. ವಿಭಾಗ B (Section B) ನಲ್ಲಿ ತಲಾ 2 ಅಂಕದ 6 ಅತಿ ಸಣ್ಣ ಉತ್ತರಗಳ ಪ್ರಶ್ನೆಗಳಿದ್ದವು.
3. ವಿಭಾಗ C ನಲ್ಲಿ ತಲಾ 3 ಅಂಕದ 6 ಸಣ್ಣ ಉತ್ತರಗಳ ಪ್ರಶ್ನೆಗಳಿದ್ದವು.
4. ವಿಭಾಗ D ನಲ್ಲಿ ತಲಾ 5 ಅಂಕದ 4 ದೀರ್ಘ ಉತ್ತರಗಳ ಪ್ರಶ್ನೆಗಳಿದ್ದವು.
5. ವಿಭಾಗ E ನಲ್ಲಿ ತಲಾ 4 ಅಂಕದ 3 ಕೇಸ್-ಬೇಸ್ಡ್ (ಅನ್ವಯಿಕ) ಪ್ರಶ್ನೆಗಳನ್ನು ಕೇಳಲಾಗಿತ್ತು.
ಎಂಸಿಕ್ಯೂ (MCQ) ವಿಭಾಗವು ಸಂಪೂರ್ಣವಾಗಿ ಕಾನ್ಸೆಪ್ಟ್ ಆಧಾರಿತವಾಗಿದ್ದು, ಸರಾಸರಿ ವಿದ್ಯಾರ್ಥಿಗಳಿಗೆ ಇದು ಕೊಂಚ ಕಠಿಣವೆನಿಸಿದೆ.
ಗುವಾಹಟಿಯ ಮಾಡರ್ನ್ ಇಂಗ್ಲಿಷ್ ಶಾಲೆಯ ನಿಲುತ್ಪಲ್ ಬೋರಾ ಅವರು ಹೇಳುವಂತೆ, ಮ.ಸಾ.ಅ (HCF), ಲ.ಸಾ.ಅ (LCM), ಸಮಾಂತರ ಶ್ರೇಢಿಗಳು (AP) ಮತ್ತು ಸಂಭವನೀಯತೆ (Probability) ವಿಭಾಗದ ಬಹುಆಯ್ಕೆಯ ಪ್ರಶ್ನೆಗಳು ಸುಲಭವಾಗಿದ್ದವು. ಆದರೆ ಸಮರ್ಥನೆ ಮತ್ತು ಕಾರಣ (Assertion-Reasoning) ಪ್ರಶ್ನೆಗಳು ಸ್ವಲ್ಪ ಟ್ರಿಕ್ಕಿ ಆಗಿದ್ದವು. ವಿಭಾಗ ಸಿ ಮತ್ತು ಡಿ ಗಳಲ್ಲಿ ವೃತ್ತಗಳು, ತ್ರಿಭುಜಗಳು, ಅಭಾಗಲಬ್ಧ ಸಂಖ್ಯೆಗಳು ಮತ್ತು ರೇಖಾತ್ಮಕ ಸಮೀಕರಣಗಳಿಂದ ಹಿಂದಿನ ವರ್ಷಗಳ ಮಾದರಿಯ ಪ್ರಶ್ನೆಗಳನ್ನು (PYQs) ಕೇಳಲಾಗಿತ್ತು. ವಿಭಾಗ ಬಿ ಮತ್ತು ಸಿ ಸಾಕಷ್ಟು ಸುಲಭವಾಗಿದ್ದವು ಎಂದು ಲಕ್ನೋದ ಸೇಠ್ ಆನಂದ್‌ರಾಮ್ ಜೈಪುರಿಯಾ ಶಾಲೆಯ ಕರಣ್ ಪಾಲ್ ಅಭಿಪ್ರಾಯಪಟ್ಟಿದ್ದಾರೆ.
ವಿಭಾಗ ಡಿ ದೀರ್ಘ ಉತ್ತರಗಳನ್ನು ಹೊಂದಿದ್ದು, ವಿಷಯದ ಆಳವಾದ ಜ್ಞಾನವನ್ನು ನಿರೀಕ್ಷಿಸಿತ್ತು. ವಿಶೇಷವಾಗಿ ಕೊನೆಯ ಎರಡು ಪ್ರಶ್ನೆಗಳು ಸ್ವಲ್ಪ ಕಠಿಣವಾಗಿದ್ದವು. ಇನ್ನು, ಸಮಾಂತರ ಶ್ರೇಢಿಗಳು (Arithmetic Progressions), ಮೇಲ್ಮೈ ವಿಸ್ತೀರ್ಣ (Surface Area) ಮತ್ತು ತ್ರಿಕೋನಮಿತಿಯ (Trigonometry) ಅನ್ವಯಿಕ ಪ್ರಶ್ನೆಗಳು (Case Studies) ವಿದ್ಯಾರ್ಥಿಗಳ ನೈಜ ಜೀವನದ ಲೆಕ್ಕಾಚಾರದ ಕೌಶಲ್ಯಗಳನ್ನು ಪರೀಕ್ಷಿಸುವಂತಿದ್ದವು.
ಬುಲಂದ್‌ಶಹರ್‌ನ ವಿದ್ಯಾಜ್ಞಾನ್ ಶಾಲೆಯ ಶಿಕ್ಷಕ ಶಶಿಕಾಂತ್ ಪ್ರಸಾದ್ ಅವರ ಪ್ರಕಾರ, ಗಣಿತ ಪರೀಕ್ಷೆಯು ಸ್ವಲ್ಪ ಕಠಿಣವಾಗಿತ್ತು. ಪ್ರಶ್ನೆಪತ್ರಿಕೆ ತುಂಬಾ ದೊಡ್ಡದಾಗಿದ್ದರಿಂದ (Lengthy), ವಿದ್ಯಾರ್ಥಿಗಳಿಗೆ ಸಮಯದ ಅಭಾವ ಉಂಟಾಯಿತು. ಅದರಲ್ಲೂ ಸೆಟ್ 1ರ 'ವೃತ್ತಗಳು' (Circles) ಪಾಠದ 35ನೇ ಪ್ರಶ್ನೆ ಸವಾಲಾಗಿತ್ತು. ವಿದ್ಯಾರ್ಥಿಗಳ ಪ್ರತಿಕ್ರಿಯೆಗಳು ಕೂಡ ಮಿಶ್ರವಾಗಿದ್ದು, ಅಭಿಮನ್ಯು ಪರೀಕ್ಷೆ ಕಷ್ಟವಾಗಿತ್ತು ಎಂದರೆ, ಅದಿತಿ ತಮಗೆ ಸೆಟ್ 3 ಬಂದಿದ್ದರಿಂದ ಪರೀಕ್ಷೆ ಚೆನ್ನಾಗಿ ನಡೆದಿದೆ ಎಂದು ತಿಳಿಸಿದ್ದಾರೆ.
ಸ್ಟ್ಯಾಂಡರ್ಡ್ ಪೇಪರ್ ಸುಲಭ, ಬೇಸಿಕ್ ಪೇಪರ್ ಟ್ರಿಕ್ಕಿ
"ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ 10ನೇ ತರಗತಿಯ ಸ್ಟ್ಯಾಂಡರ್ಡ್ ಗಣಿತ ಪೇಪರ್ ಸುಲಭವಾಗಿತ್ತು. ಆದರೆ ನಮ್ಮ ಆಶ್ಚರ್ಯಕ್ಕೆ, ಸ್ಟ್ಯಾಂಡರ್ಡ್‌ಗಿಂತ ಗಣಿತ ಬೇಸಿಕ್ ಪ್ರಶ್ನೆಪತ್ರಿಕೆಯೇ ಹೆಚ್ಚು ಟ್ರಿಕ್ಕಿ ಆಗಿತ್ತು" ಎಂದು ಮಾನವ್ ರಚನಾ ಇಂಟರ್‌ನ್ಯಾಷನಲ್ ಶಾಲೆಯ ಶಿಕ್ಷಕರು ಹೇಳಿದ್ದಾರೆ.
CBSE 10ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ: ಮೊದಲ ಬೋರ್ಡ್ ಪರೀಕ್ಷೆಗೆ ಹಾಜರಾತಿ ಕಡ್ಡಾಯ
ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಎದುರಿಸಿದ ಅತಿ ದೊಡ್ಡ ಸವಾಲೆಂದರೆ ಅದು ಎಂಸಿಕ್ಯೂ (MCQ) ವಿಭಾಗ. ಇದು ಕೇವಲ ಒಂದು ಅಂಕದ ಪ್ರಶ್ನೆಗಳಾಗಿದ್ದರೂ, ಬಹುಪಾಲು ಪ್ರಶ್ನೆಗಳು ಲೆಕ್ಕಾಚಾರ ಬೇಡುವಂತಹ (Calculative) ಆಗಿದ್ದವು. ಒಟ್ಟಾರೆಯಾಗಿ, ಎನ್‌ಸಿಇಆರ್‌ಟಿ ಪಠ್ಯವನ್ನು ಚೆನ್ನಾಗಿ ಓದಿಕೊಂಡ, ಹಿಂದಿನ ವರ್ಷದ ಪ್ರಶ್ನೆಗಳನ್ನು ಬಿಡಿಸಿ ಅಭ್ಯಾಸ ಮಾಡಿದ ಮತ್ತು ಪರೀಕ್ಷೆಯಲ್ಲಿ ಸಮಯವನ್ನು ಜಾಣ್ಮೆಯಿಂದ ನಿರ್ವಹಿಸಿದ ವಿದ್ಯಾರ್ಥಿಗಳಿಗೆ ಈ ಪೇಪರ್ ಸುಲಭವಾಗಿತ್ತು. ಮುಂಬರುವ ದಿನಗಳಲ್ಲಿ ತಜ್ಞರಿಂದ ಇನ್ನಷ್ಟು ವಿಸ್ತೃತ ವಿಶ್ಲೇಷಣೆಗಳು ಹೊರಬೀಳುವ ನಿರೀಕ್ಷೆಯಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications