Cauvery Water Dispute: ಕಾವೇರಿ ನೀರು ಹಂಚಿಕೆ ವಾದ-ವಿವಾದ ಆಲಿಸಿದ ಸುಪ್ರೀಂ ಕೋರ್ಟ್: ವಿಚಾರಣೆ ಮುಂದೂಡಿಕೆ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಇಂದು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ತಮಿಳನಾಡಿನ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಮಹತ್ವದ ವಾದ, ವಿವಾದ ಆಲಿಸಿದ ಕೋರ್ಟ್ ತಮಿಳುನಾಡಿಗೆ ಈಗಾಗಲೇ ಒಂದಷ್ಟು ನೀರು ಬಿಟ್ಟರೂ ಮತ್ತೇನು ಸಮಸ್ಯೆ ಎಂದು ಪ್ರಶ್ನೆ ಕೇಳಿದೆ. ಕರ್ನಾಟಕ ಮತ್ತು ತಮಿಳುನಾಡು ಎರಡು ಕಡೆಗಿನ ವಾದ ಆಲಿಸಿದ ನ್ಯಾಯಪೀಠ 1200 ಕ್ಯೂಸೆಕ್ ನೀರು ಬಿಡಬೇಕೆಂಬ ಆದೇಶ ಎತ್ತಿ ಹಿಡಿದಿದೆ. ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ (ಆಗಸ್ಟ್ 24ಕ್ಕೆ) ಮುಂದೂಡಿದೆ. ಈ ಮೂಲಕ ಕರ್ನಾಟಕಕ್ಕೆ ಮತ್ತೆ ಸಂಕಷ್ಟ ಎದುರಾಗಲಿದೆ.

ಸುಪ್ರೀಂ ಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ವಾದ ಮಾಡಿದ ತಮಿಳನಾಡು, ಕೆ ಆರ್ ಎಸ್, ಕಬಿನಿ, ಹಾರಂಗಿ, ಹೇಮಾವತಿ ಡ್ಯಾಂಗಳಲ್ಲಿ 70ಕ್ಕೂ ಅಧಿಕ ಟಿಎಂಸಿ ನೀರಿನ ಸಂಗ್ರಹವಾಗಿದೆ. ಹೀಗಿದ್ದರೂ ಕರ್ನಾಟಕ ಕಾವೇರಿ ನೀರು ನಿರ್ವಹಣೆ ಸಮಿತಿ (CWMA) ಆದೇಶವನ್ನು ಪಾಲಿಸುತ್ತಿಲ್ಲ. ಈವರೆಗೆ ಸುಮಾರು 14 ಟಿಎಂಸಿ ಅಷ್ಟು ಮಾತ್ರವೇ ನೀರು ಸಿಕ್ಕಿದೆ ಎಂದು ತಿಳಿಸಿತು.

Cauvery Water Dispute

ಇದಕ್ಕೆ ಪ್ರತ್ಯುತ್ತರ ನೀಡಿದ ಕರ್ನಾಟಕ ಸಮಿತಿ (CWMA) ಆದೇಶಕ್ಕೂ ಮುನ್ನವೇ ಅಪಾರ ನೀರು ಬಿಡುಗಡೆ ಮಾಡಿದ್ದೇವೆ. ರಾಜ್ಯದಲ್ಲಿ ಮಳೆ ಕಡಿಮೆ ಹಿನ್ನೆಲೆಯ ನೀರಿನ ಕೊರತೆ ಇದೆ. ಹೀಗಿದ್ದರೂ ಅಗತ್ಯದಷ್ಟು ನೀರು ಹರಿಸಿದ್ದೇವೆ ಎಂದು ಕರ್ನಾಟಕ ತಿಳಿಸಿತು.

ವಾದ ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ನಿತ್ಯ 1200ಕ್ಯುಸೆಕ್ ನೀರು ಬಿಡಬೇಕು ಎಂಬ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ (CWMA) ಆದೇಶ ಎತ್ತಿ ಹಿಡಿದಿದೆ. ಆದೇಶ ಪಾಲಿಸುವಂತೆ ಕರ್ನಾಟಕಕ್ಕೆ ಸೂಚನೆ ಹಸ ನೀಡಿದೆ. ಕರ್ಳಿನಾಟಕ ನೀರು ಬಿಡಲು ಯತ್ನಿಸುತ್ತಿದೆ. ಬಿಳಿಗುಂಡ್ಲುವಿನಲ್ಲಿ ನೀರು ಬಿಡಲು ಇನ್ನಷ್ಟು ಸಮಯ ಬೇಕಿದೆ ಎಂದು ಕರ್ನಾಟಕ ಕೋರಿದೆ. ವಾದ ವಿವಾದ ಆಲಿಸಿದ ಸುಪ್ರೀಂ ಕೋರ್ಟ್‌ ಅರ್ಜಿ ವಿಚಾರಣೆ ಒಂದು ವಾರಕ್ಕೆ ಮುಂದೂಡಿತು.

ತಮಿಳುನಾಡು ಅರ್ಜಿ ಸಲ್ಲಿಕೆ: ಆಗಸ್ಟ್ 12 ವಿಚಾರಣೆ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ ಆದೇಶವನ್ನು ಕರ್ನಾಟಕ ಪಾಲಿಸಬೇಕು, ನಮ್ಮ ಪಾಲಿನ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶಿಸುವಂತೆ ಕೋರಿ ತಮಿಳುನಾಡಿನ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ಆಗಸ್ಟ್ 12ರಂದು ನಡೆದಿತ್ತು. ಅಂದು ವಾದ ಮಂಡಿಸಿದ್ದ ಕರ್ನಾಟಕ ತಮಿಳನಾಡು ಅರ್ಜಿ ಪ್ರಶ್ನಿಸಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿತ್ತು. ಅದರಂತೆ ಅರ್ಜಿಗಳ ವಿಚಾರಣೆ ಇಂದು ನಡೆಯಿತು.

ತಮಿಳುನಾಡು ಸರ್ಕಾರ ಮತ್ತು ಟಿವಿಕೆ ಸಲ್ಲಿಸಿದ ಅರ್ಜಿಗಳ ವಿಚಾರಣೆ ಆಗಸ್ಟ್ 12ರಂದು ನಡೆದಿತ್ತು. ಅಂದು ನ್ಯಾ.ವಿಕ್ರಮ್ ನಾಥ್, ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ತಮಿಳನಾಡು, ಕರ್ನಾಟಕವು CWMC ಆದೇಶ ಪಾಲಿಸುತ್ತಿಲ್ಲ. ಜುಲೈ 28ರಂದು ಸಮಿತಿಯು ಪ್ರತಿ ದಿನ 3500 ಕ್ಯೂಸೆಕ್‌ನಂತೆ ಮುಂದಿನ 15 ದಿನ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿತ್ತು. ಆದರೆ ಜುಲೈ 29ರಿಂದ ಆಗಸ್ಟ್ 2ರವರೆಗೆ ಬಿಳಗೊಂಡ್ಲುವಿನಲ್ಲಿ ಕರ್ನಾಟಕ ಗರಿಷ್ಠ 550 ಕ್ಯೂಸೆಕ್ ಮಾತ್ರವೇ ನೀರು ಹರಿಸಿದೆ ಎಂದು ತಿಳಿಸಿತು.

ಇನ್ನೂ ಆಗಸ್ಟ್ 3ರ ಹೊತ್ತಿಗೆ ಕರ್ನಾಟಕದಲ್ಲಿ ಕೆ ಆರ್ ಎಸ್ ಮತ್ತು ಹೇವಾವತಿ, ಕಬಿನಿ, ಹಾರಂಗಿ ಡ್ಯಾಂಗಳಲ್ಲಿ ಬರೋಬ್ಬ77.53 ಟಿಎಂಸಿ ನೀರಿದೆ. ಇದರ ಆಧಾರದಲ್ಲಿ ಕರ್ನಾಟಕವು ತಮಿಳುನಾಡಿಗೆ ನಮ್ಮ ಪಾಲಿನ ನೀರು ಬೀಡಬೇಕು. ಈ ಸಂಬಂಧ ನ್ಯಾಯಾಲಯ ಕರ್ನಾಟಕಕ್ಕೆ ನಿರ್ದೇಶಿಸಬೇಕೆಂದು ತಿಳಿಸಿತ್ತು. ಇದಕ್ಕೆ ಕರ್ನಾಟಕವು ಆದೇಶ ಉಲ್ಲಂಘನೆ ಮಾಡಿಲ್ಲ ಎಂದು ಕರ್ನಾಟಕದಲ್ಲಿನ ನೀರಿನ ವಾಸ್ತವ ತಿಳಿಸಿ ತಮಿಳನಾಡು ಅರ್ಜಿಗೆ ಪ್ರತ್ಯುತ್ತರ ನೀಡಿತ್ತು.

ವಾದ ವಿವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 17ರಂದು ನಡೆಸುವುದಾಗಿ ತಿಳಿಸಿ ವಿಚಾರಣೆ ಮುಂಡೂಡಿತು. ಇದರಿಂದ ಕರ್ನಾಟಕಕ್ಕೆ ಮತ್ತಷ್ಟು ಪ್ರಬಲವಾಗಿ ವಾದ ಮಾಡಲು ಅವಕಾಶ ಸಿಕ್ಕಂತಾಯಿತು. ಆದರೆ ಇಂದಿನ ವಿಚಾರಣೆಯಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+