ತಮಿಳುನಾಡಿಗಾಗಿ ಎಂತಹ ಅವಮಾನವನ್ನೂ ಸಹಿಸುತ್ತೇನೆ: ಕರ್ನಾಟಕ ಪ್ರವಾಸದ ಬಗ್ಗೆ ವಿಜಯ್ ಹೇಳಿದ್ದೇನು?

ಚೆನ್ನೈ: ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ತಮ್ಮ ಸರ್ಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ವಿಜಯ್ ಹೇಳಿದ್ದಾರೆ. ರಾಜ್ಯದ ಜನರ ಹಿತಾಸಕ್ತಿಗಾಗಿ ಅಗತ್ಯವಿದ್ದರೆ ಅವಮಾನವನ್ನೂ ಎದುರಿಸಲು ತಾವು ಸಿದ್ಧ ಎಂದು ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ವಿಜಯ್, ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕದೊಂದಿಗೆ ಮಾತುಕತೆ ನಡೆಸಲು ಮುಂದಾಗಿರುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ವಿಜಯ್, ಯಾವುದೇ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಪ್ರಜಾಪ್ರಭುತ್ವದ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

Cauvery dispute Ready to Face Humiliation CM Vijay Says State s Rights Will Never Be Compromised

ಶತ್ರು ರಾಷ್ಟ್ರಗಳೇ ಪರಸ್ಪರ ಎದುರು ಕುಳಿತು ಮಾತುಕತೆ ನಡೆಸುತ್ತವೆ. ಹಾಗಿರುವಾಗ ನೆರೆ ರಾಜ್ಯದೊಂದಿಗೆ ನಾವು ಏಕೆ ಮಾತನಾಡಬಾರದು?" ಎಂದು ಪ್ರಶ್ನಿಸಿದ್ದಾರೆ. ಕಾವೇರಿ ವಿಚಾರದಲ್ಲಿ ಕರ್ನಾಟಕದೊಂದಿಗೆ ನೇರ ಮಾತುಕತೆ ನಡೆಸುವ ಉದ್ದೇಶದಿಂದ ಕರ್ನಾಟಕಕ್ಕೆ ಭೇಟಿ ನೀಡುವ ಬಗ್ಗೆ ಅವರು ಈ ಹಿಂದೆ ಪ್ರಸ್ತಾಪಿಸಿದ್ದರು. ಆದರೆ ಈ ನಿರ್ಧಾರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು ಎಂದು ವಿಜಯ್ ತಿಳಿಸಿದ್ದಾರೆ.

ಕರ್ನಾಟಕಕ್ಕೆ ತೆರಳಿದರೆ ತಮ್ಮನ್ನು ಅವಮಾನಿಸಬಹುದು ಎಂದು ಹಲವರು ಎಚ್ಚರಿಕೆ ನೀಡಿದ್ದರು ಎಂದು ವಿಜಯ್ ಹೇಳಿದ್ದಾರೆ. "ನಾನು ಕರ್ನಾಟಕಕ್ಕೆ ಹೋದರೆ ಅವಮಾನ ಎದುರಿಸಬೇಕಾಗಬಹುದು ಎಂದು ಕೆಲವರು ಹೇಳಿದರು. ಆದರೆ ತಮಿಳುನಾಡಿನ ಜನರಿಗಾಗಿ ಯಾವುದೇ ರೀತಿಯ ಅವಮಾನವನ್ನಾದರೂ ಎದುರಿಸಲು ನಾನು ಸಿದ್ಧ ಎಂದು ಅವರಿಗೆ ತಿಳಿಸಿದೆ ಎಂದು ವಿಜಯ್ ಹೇಳಿದ್ದಾರೆ. ಆದರೆ ಹಲವು ಕಾರಣಗಳಿಂದ ತಮ್ಮ ಕರ್ನಾಟಕ ಪ್ರವಾಸ ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮ ನೇತೃತ್ವದ ಸರ್ಕಾರ ತಮಿಳುನಾಡಿನ ಹಕ್ಕುಗಳನ್ನು ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಡುವುದಿಲ್ಲ ಎಂದು ವಿಜಯ್ ಪುನರುಚ್ಚರಿಸಿದ್ದಾರೆ. ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಪ್ರಜಾಪ್ರಭುತ್ವದ ಮಾರ್ಗಗಳನ್ನು ಬಳಸಲಾಗುವುದು ಎಂದು ಅವರು ಹೇಳಿದ್ದಾರೆ. ಕಾವೇರಿ ವಿಷಯದ ಕುರಿತು ವಿರೋಧ ಪಕ್ಷದ ನಾಯಕರು ಕೆಲವು ವಿವರಗಳನ್ನು ಕೇಳಿದ್ದಾರೆ. ಕಾವೇರಿ ನೀರು ತಮಿಳುನಾಡಿನ ಜನರಿಗೆ ಭಾವನಾತ್ಮಕ ವಿಷಯವಾಗಿದೆ. ನಮ್ಮ ಸರ್ಕಾರಕ್ಕೆ ಇದರಲ್ಲಿ ರಾಜಕೀಯ ಮಾಡುವ ಉದ್ದೇಶವಿಲ್ಲ. ನಮಗೆ ಅದರ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಅದಕ್ಕಾಗಿಯೇ ನಾನು ಕರ್ನಾಟಕಕ್ಕೆ ಖುದ್ದಾಗಿ ಹೋಗಿ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಪ್ರಯತ್ನಿಸಲು ಯೋಚಿಸಿದೆ. ಇಷ್ಟು ಸುಗಮ ಅಂತರರಾಜ್ಯ ಪ್ರವಾಸದ ಬಗ್ಗೆ ಮೊದಲು ಯೋಚಿಸಿದ್ದು ನಾನೇ. ಕರ್ನಾಟಕಕ್ಕೆ ಹೋಗಿ ಖುದ್ದಾಗಿ ಮಾತುಕತೆ ನಡೆಸುವ ಮೂಲಕ ನಾವು ಈ ಸಮಸ್ಯೆಯನ್ನು ಸಕಾರಾತ್ಮಕ ರೀತಿಯಲ್ಲಿ ಪರಿಹರಿಸಬಹುದು ಎಂದು ನಾನು ಭಾವಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರು ಹೇಳಿದ್ದಾರೆ. ಇನ್ನೂ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಹಲವು ವರ್ಷಗಳಿಂದ ಮುಂದುವರಿದಿರುವ ಭಿನ್ನಾಭಿಪ್ರಾಯದ ನಡುವೆಯೇ ವಿಜಯ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+