Kabini Dam: 12,000 ಕ್ಯೂಸೆಕ್ ನೀರು ಸಾಲಲ್ಲ! ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ತಮಿಳುನಾಡು

ಚೆನ್ನೈ: ಕಬಿನಿ ಜಲಾಶಯದಿಂದ ನೀರು ಬಿಡುಗಡೆ ಬಳಿಕವೂ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆದ ಕಾವೇರಿ ನದಿ ನೀರು ವಿವಾದ ಸುಖಾಂತ್ಯವಾದಂತೆ ಕಾಣುತ್ತಿಲ್ಲ. ಕಾವೇರಿ, ಮೇಕೆದಾಟು ಯೋಜನೆ ವಿಚಾರದಲ್ಲಿ ಪ್ರತಿ ಬಾರಿ ಖ್ಯಾತೆ ತೆಗೆಯುವ ತಮಿಳುನಾಡು ಸರ್ಕಾರ ಇದೀಗ 12000 ಕ್ಯೂಸೆಕ್ ನೀರು ಸಾಲಲ್ಲ. ನಮ್ಮ ಪಾಲಿನ ನೀರು ಬಿಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪ್ರತಿ ದಿನ 3,500 ಟಿಎಂಸಿಯಂತೆ ಕಾವೇರಿ ನೀರನ್ನು ಮುಂದಿನ 15 ದಿನ ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿತ್ತು. ಅದಾದ ಬಳಿಕ ಸಾಕಷ್ಟು ಚರ್ಚೆಗಳು, ಆರೋಪ, ಆಕ್ಷೇಪಗಳು ಎದುರಾದವು. ಇತ್ತ ಕಬಿನಿ ಜಲಾಶಯ ತುಂಬುತ್ತಿದ್ದಂತೆ ತಮಿಳುನಾಡಿಗೆ ಕರ್ನಾಟಕದಿಂದ 12000 ಕ್ಯೂಸೆಕ್ ನೀರು ಹರಿಸಲಾಯಿತು. ಈ ನೀರು ಸಾಲಲ್ಲ ಎಂದು ತಮಿಳುನಾಡು ಕೊರ್ಟ್ ಮೆಟ್ಟಿಲೇರಿದೆ.

Cauvery

ವಿಜಯ್ ಸೂಚನೆ ಮೇರೆಗೆ ಕೋರ್ಟ್‌ಗೆ ಅರ್ಜಿ

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ದೀರ್ಘ ಕಾಲದಿಂದ ಬಾಕಿ ಇರುವ ನದಿ ನೀರು ಹಂಚಿಕೆ ಸಮಸ್ಯೆ ಪರಿಹಾರಗೊಳಿಸಲು ಮತ್ತು ನಿಗದಿತ ಅನುಪಾತದ ಹಂಚಿಕೆಯ ಆಧಾರದ ಮೇಲೆ ತಮಿಳುನಾಡಿನ ಕಾವೇರಿ ನೀರಿನ ಪಾಲನ್ನು ಬಿಡುಗಡೆ ಮಾಡುವಂತೆ ಸೂಚಿಸಲು ತಮಿಳುನಾಡು ಕೋರಿದೆ. ಮುಖ್ಯಮಂತ್ರಿ ವಿಜಯ್ ಅವರ ಸೂಚನೆಯ ಮೇರೆಗೆ ಅರ್ಜಿ ಸಲ್ಲಿಸಲಾಗಿದೆ ಎಂದು ವರದಿ ಆಗಿದೆ.

ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ಮುಂದಿನ ಹದಿನೈದು ದಿನಗಳ ಕಾಲ ಅಗತ್ಯ ನೀರು ಬಿಡುವಂತೆ ಸೂಚನೆ ನೀಡಿತ್ತು. ಕಡ್ಡಾಯ ಪ್ರಮಾಣದ ನೀರು ಬಿಡುಗಡೆಗೆ ಸೂಚನೆ ನೀಡಿದರೂ ಕರ್ನಾಟಕ ಸೂಚನೆ ಪಾಲಿಸಿಲ್ಲ. ಕಬಿನಿ ಡ್ಯಾಂ ತುಂಬಿ ಬಳಿಕ ಅಲ್ಲಿನ ಹೆಚ್ಚುವರಿ ನೀರನ್ನು ಮಾತ್ರವೇ ಬಿಡುಗಡೆ ಮಾಡುತ್ತಿದೆ ಎಂದು ತಮಿಳುನಾಡು ಸರ್ಕಾರ ದೂರಿದೆ.

ಕಾವೇರಿ ನೀರು ಬಿಡುಗಡೆ ವಿವಾದ ಭುಗಿಲೇಳುವ ಮೊದಲು ಡಿಎಂಕೆ ಪಕ್ಷದಿಂದ ಸುಪ್ರೀಂ ಕೋರ್ಟ್‌ಗೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು. ಇದೀಗ ತಮಿಳುನಾಡು ಸರ್ಕಾರದಿಂದಲೇ ಖದ್ದು ಅರ್ಜಿ ಸಲ್ಲಿಸಲಾಗಿದೆ.

ನೀರು ಬಿಡಲು ಕರ್ನಾಟಕ ಆಕ್ಷೇಪ

ಕರ್ನಾಟಕ ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ. ಮಳೆ ಕಡಿಮೆ ಆಗಿ ನಿರೀಕ್ಷಿತ ಮಟ್ಟದಲ್ಲಿ ಕೆಆರ್ ಎಸ್ ಡ್ಯಾಂನಲ್ಲಿ ನೀರು ಸಂಗ್ರಹವಾಗಿಲ್ಲ. ಮುಂದೆ ಮಳೆ ಆಗದಿದ್ದರೆ ಸಮಸ್ಯೆ ಆಗಲಿದೆ. ಇಂಥಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಸೂಚನೆ ನೀಡಿದ್ದಕ್ಕೆ ರಾಜ್ಯದಲ್ಲಿ ಪ್ರತಿಭಟನೆ, ಆಕ್ರೋಶಗಳು ಹೆಚ್ಚಾದವು. ಸರ್ಕಾರ ಸಹ ನೀರು ಬಿಡದಿದರಲು ನಿರ್ಧರಿಸಿತು. ಅಷ್ಟೊತ್ತಿಗಾಗಲೇ ತಮಿಳುನಾಡು ಸಿಎಂ ವಿಜಯ್ ಹಾಗೂ ಕರ್ನಾಟಕ ಸಿಎಂ ಜೊತೆ ಆಗಸ್ಟ್ 3ರಂದು ಸಮಾಲೋಚನೆ ನಡೆಸಲು ನಿಗದಿ ಆಗಿತ್ತು.

ಆದರೆ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಇಂದಿನ ಸನ್ನಿವೇಶದಲ್ಲಿ ನಾವು ಸಭೆ ನಡೆಸುವುದು, ತಾವು ಬೆಂಗಳೂರಿಗೆ ಬರುವುದು ಬೇಡ ಎಂದು ಸಿಎಂ ವಿಜಯ್ ಗೆ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+