Budget 2025: ಮಧ್ಯಮ ವರ್ಗದವರಿಗೆ ಭರ್ಜರಿ ಗುಡ್‌ನ್ಯೂಸ್‌, ಯಾವೆಲ್ಲ ವಸ್ತುಗಳ ಬೆಲೆ ಇಳಿಕೆ!

ಕೇಂದ್ರ ಬಿಜೆಪಿ ಸರ್ಕಾರದ 2025ನೇ ಸಾಲಿನ ಆರ್ಥಿಕ ಬಜೆಟ್ ಮಂಡನೆಯಾಗಿದ್ದು. ಈ ಬಾರಿಯ ಬಜೆಟ್‌ನಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಬಂಪರ್‌ ಕೊಡುಗೆಗಳನ್ನು ನೀಡಲಾಗಿದೆ. ಮಧ್ಯಮವರ್ಗದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ 3.0 ಬಜೆಟ್‌ನಲ್ಲಿ ಹಲವು ವಸ್ತುಗಳ ಬೆಲೆಯನ್ನು ಇಳಿಕೆ ಮಾಡುವ ಮೂಲಕ ಬಂಪರ್‌ ಕೊಡುಗೆ ನೀಡಲಾಗಿದೆ. ಪ್ರತಿ ಬಾರಿಯೂ ಬಜೆಟ್‌ ಮಂಡನೆ ಮಾಡುವ ಸಂದರ್ಭದಲ್ಲೂ ಕೆಲವೊಂದು ವಸ್ತಗಳ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಈ ಬಾರಿಯೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೆಲವೊಂದು ವಸ್ತುಗಳ ಮೇಲೆ ಬೆಲೆ ಏರಿಕೆ ಅಥವಾ ತೆರಿಗೆಯನ್ನು ವಿಧಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಜನ ಸಾಮಾನ್ಯರು ಅತ್ಯಗತ್ಯವಾಗಿ ಬಳಸುವ ಹಾಗೂ ಕೆಲವು ಪ್ರಮುಖ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಿದ್ದಾರೆ. ಅದರ ವಿವರ ಇಲ್ಲಿದೆ.

ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಮಹಿಳೆ, ಬಡವರು, ರೈತರು ಹಾಗೂ ಯುವಕರನ್ನು ಕೇಂದ್ರೀಕರಿಸಿಕೊಂಡು ಬಜೆಟ್‌ ಮಂಡನೆ ಮಾಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಹಲವು ವಿಶೇಷ ಅಂಶಗಳಿದ್ದು. ಮಧ್ಯಮ ವರ್ಗದವರು ಖುಷಿಯಾಗುವ ಅಂಶಗಳು ಸಹ ಇದರಲ್ಲಿ ಸೇರಿವೆ.

ಸಾಮಾನ್ಯವಾಗಿ ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರ ಮಂಡಿಸುತ್ತಿದ್ದ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಆದ್ಯತೆ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಎನ್ನುವಂತೆ ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗದವರನ್ನು ಕೇಂದ್ರೀಕರಿಸಿಕೊಂಡು ಹಲವು ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ.

Budget 2025 Key Price Changes Benefiting the Middle Class

ಯಾವೆಲ್ಲ ವಸ್ತುಗಳ ಬೆಲೆ ಇಳಿಕೆ: ಈ ಬಾರಿಯ ಬಜೆಟ್‌ನಲ್ಲಿ ಸ್ವದೇಶಿ ಬಟ್ಟೆಗಳು, ಎಲೆಕ್ಟ್ರಿಕ್‌ ಕಾರುಗಳು, ಚರ್ಮದ ಉತ್ಪನ್ನಗಳು, ಎಲ್‌ಇಡಿ ಟಿವಿ ಬೆಲೆ, ಕ್ಯಾನ್ಸರ್‌ ಔಷಧಿ, ಮೊಬೈಲ್‌ ಹಾಗೂ ಮೊಬೈಲ್‌ ಬಿಡಿಭಾಗಗಳ ಬೆಲೆ ಇಳಿಕೆ ಮಾಡಲಾಗಿದೆ. ಅಲ್ಲದೆ ಹಲವು ಉತ್ಪನ್ನಗಳ ಬೆಲೆ ಇಳಿಕೆ ಮಾಡುವ ಮೂಲಕ ಮಧ್ಯಮ ವರ್ಗದವರಿಗೆ ಗುಡ್‌ನ್ಯೂಸ್‌ ಕೊಡಲಾಗಿದೆ.

ಈ ಬಜೆಟ್‌ನಲ್ಲಿ ಮತ್ತೊಂದು ಗುಡ್‌ನ್ಯೂಸ್‌ ಎಂದರೆ ವಿವಿಧ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವುದು ಮಾತ್ರವಲ್ಲ. ಯಾವುದೇ ಪ್ರಮುಖ ವಸ್ತುಗಳ ಬೆಲೆಯನ್ನು ಸಹ ಭಾರೀ ಹೆಚ್ಚಳ ಮಾಡಿಲ್ಲ. ಇದೂ ಸಹ ಬಡವರು ಹಾಗೂ ಮಧ್ಯಮ ವರ್ಗದವರು ಸಮಾಧಾನಪಡುವಂತೆ ಆಗಿದೆ.

ಟ್ವೀಟ್ ಮಾಡಿ ಸಂತೋಷ ಹಂಚಿಕೊಂಡ ಬಿಜೆಪಿ

ಇನ್ನು ಕೇಂದ್ರ ಬಜೆಟ್‌ನ ಬಗ್ಗೆ ರಾಜ್ಯ ಬಿಜೆಪಿಯು ಸಂತೋಷ ಹಂಚಿಕೊಂಡಿದ್ದು. ಈ ಸಂಬಂಧ ಸೋಷಿಯಲ್‌ ಮೀಡಿಯಾದಲ್ಲಿ ಟ್ವೀಟ್ ಮಾಡಿದೆ. #ViksitBharatBudget2025 ನಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ.

ಎಲ್‌ಇಡಿ ಟಿವಿ, ಎಲೆಕ್ಟ್ರಿಕ್‌ ವಾಹನಗಳು, ಮೊಬೈಲ್‌ ಫೋನ್, ಕ್ಯಾನ್ಸರ್‌ ಔಷಧ,ಚರ್ಮದ ಉತ್ಪನ್ನಗಳು ಹಾಗೂ ಸ್ವದೇಶಿ ಬಟ್ಟೆಗಳ ಬೆಲೆಯನ್ನು ಇಳಿಕೆ ಮಾಡುವ ಮೂಲಕ ಬಂಪರ್‌ ಕೊಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜನ ಪರ ವಿಕಸಿತ ಬಜೆಟ್‌ ಮಂಡಿಸಿದ್ದಾರೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+