Budget 2025: ಮಿತ್ರ ಪಕ್ಷಗಳ ರಾಜ್ಯ ಬಿಹಾರ್‌ - ಆಂಧ್ರ ಪ್ರದೇಶಕ್ಕೆ ಮತ್ತೆ ಬಂಪರ್!

ಈ ಬಾರಿಯೂ ಬಜೆಟ್‌ನಲ್ಲಿ ಎನ್‌ಡಿಎ ಮಿತ್ರ ಪಕ್ಷಗಳ ರಾಜ್ಯಗಳಿಗೆ ಬಂಪರ್ ಸಿಕ್ಕಿದೆ. ಕಳೆದ ಎರಡು ಅವಧಿಯಿಂದಲೂ ಸ್ವತಂತ್ರವಾಗಿ ಆಡಳಿತ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ನೃತೃತ್ವದ ಸರ್ಕಾರವು ಈ ಬಾರಿ ಸಮ್ಮಿಶ್ರ ಸರ್ಕಾರವನ್ನು ನಡೆಸುತ್ತಿದೆ. ಸಮ್ಮಿಶ್ರ ಸರ್ಕಾರದ ಭಾಗವಾಗಿ ಬಿಹಾರದ ಜನತಾ ದಳ ಸಂಯುಕ್ತ (ಜೆಡಿಯು) ಪಕ್ಷ ಹಾಗೂ ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷ (ಟಿಡಿಪಿ) ಇವೆ. ಕಳೆದ ಬಾರಿಯ ಕೇಂದ್ರ ಸರ್ಕಾರದ ಬಜೆಟ್‌ನಲ್ಲೂ ಈ ಪಕ್ಷಗಳಿಗೆ ಭರ್ಜರಿ ಬಂಪರ್‌ ಸಿಕ್ಕಿತ್ತು. ಈ ಬಾರಿಯೂ ಅದೇ ಪುನರಾವರ್ತನೆಯಾಗಿದೆ. ಹೌದು ಕೇಂದ್ರ ಬಿಜೆಪಿ ಸರ್ಕಾರದ ಆಧಾರಸ್ತಂಭಗಳಾಗಿ ಈ ಪಕ್ಷಗಳು ಇವೆ. ಈ ಬಾರಿ ನಿರೀಕ್ಷೆಯಂತೆಯೇ ಈ ಎರಡೂ ರಾಜ್ಯಗಳಿಗೆ ಭರ್ಜರಿ ಗಿಫ್ಟ್‌ಗಳನ್ನೇ ಕೊಡಲಾಗಿದೆ.

ಬಿಹಾರ ರಾಜ್ಯಕ್ಕೆ ಬಂಪರ್‌ ಕೊಡುಗೆ ನೀಡಲಾಗಿದೆ. ಐಐಟಿ ಪಾಟ್ನಾ ಸೇರಿದಂತೆ ಒಟ್ಟು 5 ಐಐಟಿ ಅಭಿವೃದ್ಧಿಗಳ ಅನುದಾನ ಮೀಸಲಿರಿಸಲಾಗಿದೆ. ಈ ಮೂಲಕ ಮೈತ್ರಿ ಪಕ್ಷಗಳಿಗೆ ಭರ್ಜರಿ ಕೊಡುಗೆ ಕೊಡುವುದನ್ನು ಶುರು ಮಾಡಲಾಗಿದೆ. ಅಲ್ಲದೆ ಮುಂದುವರಿದು ಗ್ರೀನ್‌ ಫೀಲ್ಡ್‌ ವಿಮಾನ ನಿಲ್ದಾಣ ಮಂಜೂರು ಮಾಡಲಾಗಿದೆ. ಬಿಹಾರದ 500 ಹೆಕ್ಟೇರ್‌ ಜಮೀನಿಗೆ ನೀರಾವರಿ ಯೋಜನೆಯನ್ನು ಅಭಿವೃದ್ಧಿ ಮಾಡುವುದಾಗಿ ಹೇಳಲಾಗಿದೆ.

Budget 2025 Another Bumper for Allied States of Bihar and Andhra Pradesh

ವಿರೋಧ ಪಕ್ಷಗಳಿಂದ ವಿರೋಧ: ಇನ್ನು ಕೇಂದ್ರ ಬಿಜೆಪಿ ಸರ್ಕಾರವು ಮಿತ್ರಪಕ್ಷಗಳಿರುವ ರಾಜ್ಯಗಳಿಗೆ ಬಂಪರ್‌ ಕೊಡುತ್ತಿರುವ ಘೋಷಣೆಗಳನ್ನು ಕೊಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ವಿರೋಧ ಪಕ್ಷಗಳು ಇರುವ ರಾಜ್ಯಗಳಿಗೆ ಬಂಪರ್‌ ಕೊಡುತ್ತಿರುವುದು ವಿರೋಧ ಪಕ್ಷಗಳ ರಾಜ್ಯದ ಸಂಸದರ ಕಣ್ಣು ಕೆಂಪಗಾಗಿಸಿದೆ.

ಬಿಹಾರದಲ್ಲಿ ಮಕಾನಾ ಮಂಡಳಿ ಮತ್ತು ಆಹಾರ ಸಂಸ್ಥೆ

ಇನ್ನು ಬಿಹಾರಕ್ಕೆ ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಗುಡ್‌ನ್ಯೂಸ್‌ ಕೊಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಹಾರದಲ್ಲಿ ವಿಶೇಷ ಮಕಾನಾ ಮಂಡಳಿಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಬಿಹಾರದಲ್ಲಿ ಮಕಾನ ಉತ್ಪಾದನೆ. ಮಾರುಕಟ್ಟೆ ವ್ಯವಸ್ಥೆ ಅಭಿವೃದ್ಧಿಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಅಭಿವೃದ್ಧಿಗೂ ಆದ್ಯತೆ ಕೊಡಲಾಗಿದೆ. ಸಂಗ್ರಹ ಹಾಗೂ ಸಂಸ್ಕರಣೆಗೆ ಉತ್ತೇಜನ ನೀಡಲಾಗಿದೆ.

ಆಂಧ್ರ ಪ್ರದೇಶಕ್ಕೂ ಬಂಪರ್: ಇನ್ನು ಕೇಂದ್ರ ಸರ್ಕಾರವು ಬಜೆಟ್‌ ಮಂಡನೆ ಮಾಡುವುದಕ್ಕೆ ಮುಂಚೆಯೇ ಆಂಧ್ರ ಪ್ರದೇಶಕ್ಕೆ ಬಂಪರ್‌ ಗಿಫ್ಟ್‌ ಕೊಟ್ಟಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ರಾಷ್ಟ್ರೀಯ ಉಕ್ಕು ಕಾರ್ಖಾನೆ (RINL) / ವೈಜಾಗ್ ಸ್ಟೀಲ್ ಪುನಶ್ಚೇತನಕ್ಕೆ ಬರೋಬ್ಬರಿ 11,400 ಕೋಟಿ ರೂಪಾಯಿ ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ.

ಭಾರತವು 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿದೆ. ಈ ಮೂಲಕ ಎರಡು ಮಿತ್ರ ಪಕ್ಷಗಳಿಗೂ ಹಾಗೂ ಮಿತ್ರ ಪಕ್ಷ ರಾಜ್ಯಗಳಿಗೆ ಬಂಪರ್‌ ಕೊಡುಗೆಯನ್ನು ಕೊಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+