Budget 2024: ನೀಲಿ ಸೀರೆಯಲ್ಲಿ ನಿರ್ಮಲಾ ಸೀತಾರಾಮನ್, ಏನಿದರ ವಿಶೇಷತೆ ತಿಳಿಯಿರಿ!
ನವದೆಹಲಿ, ಫೆಬ್ರವರಿ 01: ಪ್ರಧಾನಿ ನರೇಂದ್ರ ಮೋದಿ ಸರ್ಕಾರ-2.0 ಅವಧಿಯ ಕೊನೆಯ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡುತ್ತಿದ್ದಾರೆ. ಸಂಪೂರ್ಣ ದೇಶದ ಗಮನ ಈಗ ಕೇಂದ್ರ ಬಜೆಟ್ ಮೇಲಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ದಿನದ ಕೇಂದ್ರ ಬಿಂದುವಾಗಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಬಳಿಕ ದೇಶದ ಬಜೆಟ್ ಮಂಡಿಸಿದ ಎರಡನೇ ಮಹಿಳೆ ಎನ್ನುವ ಹೆಗ್ಗಳಿಕೆ ಪಾತ್ರರಾಗಿರುವ ನಿರ್ಮಲಾ ಸೀತಾರಾಮನ್ ಅವರು ಸ್ವಾತಂತ್ರ್ಯ ಭಾರತದಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ಮೊದಲ ಮಹಿಳಾ ಹಣಕಾಸು ಸಚಿವೆಯಾಗಿದ್ದಾರೆ. ಐದು ಬಾರಿ ಪೂರ್ಣ ಬಜೆಟ್ ಮತ್ತು ಒಂದು ಮಧ್ಯಂತರ ಮಂಡಿಸಿದ ದಾಖಲೆ ಬರೆದಿರುವ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ವಿಶೇಷ ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದಾರೆ.

ಸಂಸತ್ತಿನಲ್ಲಿ ನಿಂತು ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ದೇಶವೇ ಹೆಮ್ಮೆ ವ್ಯಕ್ತಪಡಿಸುತ್ತಿದ್ದು. ಇಂದು ಅವರು ಹೇಗೆ ಕಾಣುತ್ತಿದ್ದಾರೆ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಕಳೆದ ಬಜೆಟ್ನಲ್ಲಿ ಕರ್ನಾಟಕದ ಇಳಕಲ್ ಸೀರೆಯಲ್ಲಿ ಮಿಂಚಿದ್ದ ನಿರ್ಮಲಾ ಸೀತಾರಾಮನ್ ಇಂದು ಯಾವ ಬಣ್ಣದ ಸೀರೆ ತೊಡುತ್ತಾರೆ ಎಂಬ ಕುತೂಹಲ ಹಲವರಲ್ಲಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ನಿರ್ಮಲಾ ಸೀತಾರಾಮನ್ ನೀಲಿ ಮತ್ತು ಕ್ರೀಮ್ ಬಣ್ಣದ ಛಾಯೆ ಇರುವ ಸೀರೆ ತೊಟ್ಟಿದ್ದಾರೆ.
ಇಂದು ದೇಶದ ಗಮನ ಸೆಳೆಯುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ತೊಟ್ಟಿರುವ ನೀಲಿ ಬಣ್ಣದ ಸೀತೆ ತುಸ್ಸಾರ್ ರೇಷ್ಮೆಯದ್ದಾಗಿದ್ದು, ಪಶ್ಚಿಮ ಬಂಗಾಳ, ಬಿಹಾರ, ಝಾರ್ಖಂಡ್, ಒಡಿಶಾ ಪ್ರದೇಶಗಳಲ್ಲಿ ಸಿಗುವ ರೇಷ್ಮೆಯಿಂದ ಈ ಸೀರೆ ನೇಯಲಾಗುತ್ತದೆ ಎನ್ನಲಾಗಿದೆ.

ನಿರ್ಮಲಾ ಸೀತಾರಾಮನ್‌ಗೆ ಸೀರೆ ಉಡುಗೊರೆ ನೀಡಿದ್ದ ಪ್ರಹ್ಲಾದ್ ಜೋಶಿ
ಇನ್ನು 2023-2024ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಧಾರವಾಡ ಜಿಲ್ಲೆಯ ನವಲಗುಂದದ ಕಸೂತಿ ಕಲೆ ಇರುವ ಕೆಂಪು (ಮರೂನ್) ಬಣ್ಣದ ಸೀರೆಯುಟ್ಟಿದ್ದರು. ಜಿಲ್ಲೆಯ ಸಂಸದರು, ಕೇಂದ್ರ ಸಚಿವರು ಆಗಿರುವ ಪ್ರಹ್ಲಾದ್ ಜೋಶಿ, ನವಲಗುಂದ ಕಸೂತಿ ಕಲೆ ಬಗ್ಗೆ, ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮ ಒಂದರಲ್ಲಿ ವಿವರಿಸಿ, ಕೆಲವು ಸೀರೆಗಳನ್ನು ಜಿಲ್ಲೆಯ ಪರವಾಗಿ ಉಡುಗೊರೆಯಾಗಿ ನೀಡಿದ್ದರು.












Click it and Unblock the Notifications