
ಬಜೆಟ್‌ನಿಂದ ಮಧ್ಯಮ ವರ್ಗಕ್ಕೆ ನಿರಾಸೆ, ಟ್ವಿಟ್ಟರ್‌ನಲ್ಲಿ ಜೋಕ್‌ಗಳ ಸುರಿಮಳೆ
ನವದೆಹಲಿ, ಫೆಬ್ರವರಿ 02: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022ರ ಬಜೆಟ್ ಮಂಡಿಸುತ್ತಿದ್ದಂತೆಯೇ, ಟ್ವಿಟ್ಟರ್‌ನಲ್ಲಿ ಮೀಮ್ಸ್ ಹಾಗೂ ಜೋಕ್‌ಗಳ ಸುರಿಮಳೆ ಶುರುವಾಗಿದೆ.
ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಿಂದ ಮಧ್ಯಮದ ವರ್ಗದವರು ಅಸಮಾಧಾನಗೊಂಡಿದ್ದು, ತೆರಿಗೆದಾರರಿಗೆ ಕೂಡ ನಿರಾಸೆಯಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸಂಬಳ ಪಡೆಯುವ ವರ್ಗದವರಿಗೆ ತೆರಿಗೆಯಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಇದು ಮಧ್ಯಮದವರ್ಗದವರಿಗೆ ಅಸಮಾಧಾನ ಉಂಟುಮಾಡಿದೆ.
Digital Rupee: ಬಜೆಟ್ 2022: ಡಿಜಿಟಲ್ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ತೀರ್ಮಾನ
ಬಜೆಟ್ ಅಧಿವೇಶನ ಪ್ರಾರಂಭವಾಗಲು ಜನರು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಬಜೆಟ್ ಮಂಡನೆಯಾದ ನಂತರ ಅನೇಕರು ತಮ್ಮ ನಿರೀಕ್ಷೆಗಳು ಹುಸಿಯಾಗಿದ್ದಕ್ಕೆ ಟ್ವಿಟ್ಟರ್‌ನಲ್ಲಿ ಮೀಮ್ಗಳು, ಟ್ರೋಲ್ಗಳ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಈ ವರ್ಷದ ಪೇಪರ್‌ಲೆಸ್ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು 5G ತರಂಗಾಂತರದ ಹರಾಜು, ನಲ್ ಸೇ ಜಲ್ ಯೋಜನೆಗೆ ಹಣ ಹಂಚಿಕೆ ಮತ್ತು ಡಿಜಿಟಲ್ ಪೇಮೆಂಟ, ಡಿಜಿಟಲ್ ರೂಪಾಯಿ ಇನ್ನೂ ಅನೇಕ ಪ್ರಮುಖ ಅಂಶಗಳನ್ನು ಘೋಷಿಸಿದ್ದಾರೆ. ಆದರೂ ನೆಟ್ಟಿಗರು ತೆರಿಗೆ ವಿನಾಯಿತಿ ಮತ್ತು ಹೆಚ್ಚುವರಿ ಶುಲ್ಕವನ್ನು ಕಡಿಮೆ ಮಾಡುವ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಿದ್ದರು.
2022ರ ಕೇಂದ್ರ ಬಜೆಟ್ ಸಂಬಳದ ವರ್ಗಕ್ಕೆ ಯಾವುದೇ ತೆರಿಗೆ ರಿಯಾಯಿತಿಗಳನ್ನು ನೀಡದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ನಿರಾಸೆ ಸ್ಪಷ್ಟವಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಘೋಷಿಸಿದ್ದಾರೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಟ್ಯಾಗ್ ಅನ್ನು ಕಾಪಾಡಿಕೊಳ್ಳಲು, ನಿರ್ಮಲಾ ಸೀತಾರಾಮನ್ ನವೀಕರಿಸಿದ ರಿಟರ್ನ್ಸ್ ಫೈಲಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.
ಕ್ರಿಪ್ಟೋಅಸೆಟ್‌ಗಳು ಮತ್ತು ಡಿಜಿಟಲ್ ರೂಪಾಯಿಯ ಕುರಿತು ಕೆಲವು ಪ್ರಮುಖ ಪ್ರಕಟಣೆಗಳ ಜೊತೆಗೆ ಇಂದಿನ ಬಜೆಟ್ ಮಂಡನೆ ಭಾರತದ ಆರ್ಥಿಕ ಭವಿಷ್ಯಕ್ಕೆ ಸಂಬಂಧಿಸಿದ ಕೆಲವು ನಿರ್ಣಾಯಕ ಚರ್ಚೆಗಳನ್ನು ಹುಟ್ಟುಹಾಕಿದೆ.
#NirmalaSitharaman #Budget2022 #cryptocurrency
— Hemant (@Sportscasmm) February 1, 2022
When you get into crypto and government suddenly introduces a tax of 30%: pic.twitter.com/BKBqA1QOm3
ಲೋಕಸಭೆಯಲ್ಲಿ ಬಜೆಟ್ ಮಂಡನೆಯಾಗುತ್ತಿದ್ದಂತೆ ಮೈಕ್ರೊ ಬ್ಲಾಗಿಂಗ್ ತಾಣದಲ್ಲಿ ಮೀಮ್ ಗಳು, ಪೋಸ್ಟ್ ಗಳ ಮಹಾಪೂರವೇ ಹರಿದು ಬಂದಿದೆ. #Budget2022 ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
36. Featured in @StoryPicker
— 𝙰𝚔𝚍𝚊𝚜 𝙷𝚊𝚢𝚊𝚝 (@Akdas_Hayat) February 1, 2022
37. Featured in @ScoopWhoop pic.twitter.com/mPaG4SxYdI
ಡಿಜಿಟಲ್ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಬ್ಲಾಕ್‌ಚೈನ್ ಟೆಕ್ನಾಲಜಿ ಮೂಲಕ ಡಿಜಿಟಲ್ ರೂಪಾಯಿ ವಿತರಣೆಗೆ ನಿರ್ಧರಿಸಿದೆ.
2022-23ರಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಡಿಜಿಟಲ್ ಹಣ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆರ್‌ಬಿಐ ತನ್ನದೇ ಆದ ವರ್ಚ್ಯುವಲ್ ಕರೆನ್ಸಿ ಆವೃತ್ತಿಯನ್ನು ಹೊರತರುವ ಪ್ರಕ್ರಿಯೆಯಲ್ಲಿದೆ ಎಂದು ಅವರು ಹೇಳಿದ್ದಾರೆ.
30 % tax on #cryptocurrency 🤷#Budget2022 pic.twitter.com/KUmPtKR1R3
— Garv 🚜 (ਗਰਵਿਤ) (@imgarvmalik) February 1, 2022
ಈ ಬಾರಿಯ ಬಜೆಟ್‌ನಲ್ಲಿ ಬಂಡವಾಳ ವೆಚ್ಚವನ್ನು ಶೇ 35.4ರಷ್ಟು ಹೆಚ್ಚಿಸಲಾಗಿದೆ. ದೇಶದ ರಾಷ್ಟ್ರೀಯ ಆಸ್ತಿ ಹೆಚ್ಚಿಸುವ ಉದ್ದೇಶಕ್ಕೆ ಈ ನಿಧಿ ಬಳಕೆಯಾಗಲಿದೆ. ಒಟ್ಟು ಜಿಡಿಪಿಯ ಶೇ 2.9ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. 2022-2023ರ ಆರ್ಥಿಕ ವರ್ಷದಲ್ಲಿ ಭಾರತ ಸರ್ಕಾರವು 10.9 ಲಕ್ಷ ಕೋಟಿ ರೂ. ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಬಳಸಲು ನಿರ್ಧರಿಸಿದೆ.
ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ ಜಾರಿಗೊಳಿಸಲಾಗುವುದು. ಇಂಧನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗುವುದು. 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರ ನಿರ್ಧಾರ ಮಾಡಿದೆ.
ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅಪ್ಡೇಟೆಡ್ ರಿಟರ್ನ್ ಫೈಲ್ ಮಾಡಬಹುದು. ಆ ಅಸೆಸ್ಮೆಂಟ್ನಿಂದ ಎರಡು ವರ್ಷದೊಳಗೆ ಮಾಡಬಹುದು. ದೇಶದಲ್ಲಿ ಹೊಸ ರಿಟರ್ನ್ಸ್ ಪರಿಚಯ ಮಾಡಲು ಕೇಂದ್ರ ತೀರ್ಮಾನಿಸಿದೆ. ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆಗೆ ಹೊಸ ನೀತಿ ಜಾರಿಮಾಡಲಾಗುವುದು. ತೆರಿಗೆ ಸಲ್ಲಿಕೆ ವೇಳೆ ಸಮಸ್ಯೆ ಕಂಡು ಬಂದರೆ 2 ವರ್ಷದೊಳಗೆ ತಪ್ಪು ಸರಿಪಡಿಸುವುದಕ್ಕೆ ಅವಕಾಶ ನೀಡಲಾಗಿದೆ.
ಸಹಕಾರ ಸಂಘಗಳ ಮೇಲಿನ ಸರ್ಚಾರ್ಜ್ ಇಳಿಕೆ ಮಾಡಲಾಗಿದೆ. ಶೇಕಡಾ 12ರಿಂದ ಶೇಕಡಾ 7ಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿದ್ದು, ಸಹಕಾರ ಸಂಘಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 10 ಕೋಟಿಯೊಳಗಿನ ಆದಾಯದ ಸಹಕಾರ ಸಂಘಗಳಿಗೆ ಇದು ಅನ್ವಯವಾಗುತ್ತದೆ. ಕೋ- ಆಪರೇಟಿವ್ ಸೊಸೈಟಿಗಳಿಗೂ ಇನ್ನು ಮುಂದೆ ಶೇ 15ರ ತೆರಿಗೆ. ತೆರಿಗೆ ಪದ್ಧತಿಯಲ್ಲಿ ಇರುವ ಹಲವು ಸಂಕೀರ್ಣ ಅಂಶಗಳನ್ನು ಸರಳಗೊಳಸಲಿ ಸರ್ಕಾರ ಮುಂದಾಗಿದೆ.