Get Updates
Get notified of breaking news, exclusive insights, and must-see stories!

BSNL 5G: ಬಹುನಿರೀಕ್ಷೆಯ BSNL 5ಜಿ ಸೇವೆ ಆರಂಭಕ್ಕೆ ದಿನಗಣನೆ: ಈ ರಾಜ್ಯಗಳಲ್ಲಿ ಮೊದಲು ಶುರು..

BSNL 5G Service Updates: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) 01 ಲಕ್ಷ ಟವರ್‌ಗಳನ್ನು ಸ್ಥಾಪಿಸಿದ ಬೆನ್ನಲ್ಲೆ ಹೊಸದಾಗಿ ಹೆಚ್ಚುವರಿ 01 ಲಕ್ಷ ಟವರ್ ನಿರ್ಮಾಣಕ್ಕೆ ಮುಂದಾಗಿದೆ. ಇದೀಗ ಭಾರತದ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ BSNL 5g ಸೇವೆ ಆರಂಭಿಸುವುದಾಗಿ ತಿಳಿಸಿದೆ. ಇದು ಯಾವಾಗ?, ಯಾವೆಲ್ಲ ರಾಜ್ಯಗಳಲ್ಲಿ ಸೇವೆ ಲಭ್ಯವಾಗಲಿದೆ? ಹೇಗೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.

BSNL ಸಂಸ್ಥೆಯು ಇದೇ ವರ್ಷ ಆರಂಭದಲ್ಲಿ 3g ಇಂಟರ್‌ನೆಟ್ ಸೇವೆಯಿಂದ 4g ಜಿ ಅಪ್‌ಗ್ರೇಡ್ ಆಯಿತು. ಅದಾಗುತ್ತಿದ್ದಂತೆ ಎದುರಾದ ಒಂದಷ್ಟು ತಾಂತ್ರಿಕ ಸಮಸ್ಯೆಗಳನ್ನು ನಿವಾರಣೆ ಮಾಡುವ ಜೊತೆಗೆ ಇದೀಗ 5gಗೆ ಅಪ್‌ಗ್ರೇಡ್ ಆಗುವ ಗುರಿ ಇಟ್ಟುಕೊಂಡಿದೆ. ಈ ಗುರಿಯನ್ನು ಇದೇ ವರ್ಷ ಸೆಪ್ಟಂಬರ್ ಹೊತ್ತಿಗೆ ದೆಹಲಿ ಸೇರಿದಂತೆ ದೇಶ ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ (ನಗರಗಳಲ್ಲಿ) ವೇಗದ ಇಂಟರ್‌ನೆಟ್ ಸೇವೆ ನೀಡಲು ಸಜ್ಜಾಗಿದೆ. ಅದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದು, 5g ಪ್ರಾಯೋಗಿಕ ಪರೀಕ್ಷಾ ಸೇವೆಯನ್ನು ಪೂರ್ಣಗೊಳಿಸಿದೆ.

BSNL Telecom Company to Launch 5G Services in Major Cities by September 2025

5g ಸೇವೆ ಪರೀಕ್ಷಾರ್ಥ ಸೇವೆ ಯಶಸ್ವಿ

ಹೌದು, ಇದೇ ವರ್ಷ ಸೆಪ್ಟೆಂಬರ್ ಇಲ್ಲವೇ ಅಕ್ಟೋಬರ್ ಆರಂಭದ ಹೊತ್ತಿಗೆ ದೇಶದ ಪ್ರಮುಖ ನಗರಗಳಲ್ಲಿ ಗಡುವಿನೊಳಗೆ 5g ಸೇವೆಯನ್ನು ಆರಂಭಿಸುವ ನಿರೀಕ್ಷೆ ಇದೆ. ಅದಕ್ಕಾಗಿ ಹಾಲಿ ಒಂದು 4g ಟವರ್‌ಗಳಲ್ಲಿ (ಸೈಟ್‌) 5G ತಂತ್ರಜ್ಞಾನದ ಪರೀಕ್ಷಾರ್ಥ ಪ್ರಯೋಗವನ್ನು ಸಹ ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.

ಯಾವೆಲ್ಲ ರಾಜ್ಯಗಳಲ್ಲಿ 5g ಸೇವೆ ಶುರು..

ಭಾರತದ ರಾಜಧಾನಿ ದೆಹಲಿ, ಹೈದರಾಬಾದ್ ಮತ್ತು ಚೆನ್ನೈ, ಜೈಪುರ, ಭೋಪಾಲ್, ಕೊಲ್ಕತ್ತಾ, ಲಕ್ನೋ, ಚಂಡೀಗಢ ಮತ್ತು ಪಾಟ್ನಾ ಸೇರಿದಂತೆ ಹೆಚ್ಚಿನ ರಾಜ್ಯ ರಾಜಧಾನಿಗಳಲ್ಲಿ 5G ಟವರ್‌ಗಳನ್ನು ಸಕ್ರಿಯಗೊಳಿಸಲಾಗುತ್ತಿದೆ. ಈಗಾಗಲೇ ಸ್ಥಾಪಿಸಲಾದ ಒಂದು ಲಕ್ಷ 4g ಸೈಟ್‌ಗಳಲ್ಲಿಯೇ 5g ಅಪ್‌ಗ್ರೇಡ್ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಅವುಗಳ ಪರೀಕ್ಷೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸ ಟವರ್‌ಗಳಿಗೂ ನೂತನ 5g ನೆಟ್‌ವರ್ಕ್ ತಂತ್ರಜ್ಞಾನ ಅಳವಡಿಕೆ ವಿಸ್ತರಣೆ ಮಾಡಿ ಆರಂಭಿಕ ಹಂತದ ವೇಗದ ಅಂತರ್ಜಾಲ ಸೇವೆ ನೀಡಲು ಸಂಸ್ಥೆ ಪಣ ತೊಟ್ಟಿದೆ.

BSNL Telecom Company to Launch 5G Services in Major Cities by September 2025

ಒಂದು ಕಡೆ ಹೆಚ್ಚುವರಿ ಟವರ್ ಸ್ಥಾಪನೆ, ಮತ್ತೊಂದೆಡೆ 4g ನೆಟ್‌ವರ್ಕ್‌ ಸರಿಯಾಗಿ ನಿರ್ವಹಿಸುವ ಜವಾಬ್ದಾರಿ ಜೊತೆಗೆ 5gಗೆ ಅಪ್‌ಗ್ರೇಡ್, ಆರಂಭಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ. ಎಲ್ಲವು ಅಂದುಕೊಂಡಂತೆ ಆದರೆ ಇತರ ಕಂಪನಿಗಳ ವೇಗಕ್ಕೆ ಸರಿಸಮಾನವಾಗಿ ಕಡಿಮೆ ಬೆಲೆಯಲ್ಲಿ ಬಿಎಸ್‌ಎನ್‌ಎಲ್ ಅತ್ಯುತ್ತಮ ಸೇವೆ ನೀಡುವ ಭರವಸೆ ಮೂಡಿಸಿದೆ.

70,000 ಟವರ್‌ಗಳಲ್ಲಿ ವೇಗ ಸೇವೆ ಸಕ್ರಿಯ

ಕಳೆದ ವರ್ಷ 2024 ಡಿಸೆಂಬರ್ ಮೊದಲು ಹಂತ ಹಂತವಾಗಿ ನಾಲ್ಕು ಮೆಟ್ರೋ ನಗರಗಳಲ್ಲಿ 4g ಜಾರಿಗೆ ತರಲಾಗಿತ್ತು. ನಂತರ ಎಲ್ಲ ಸೈಟ್‌ಗಳಲ್ಲಿ (ಜೂನ್ 2025 ವೇಳೆಗೆ) ವಿಸ್ತರಣೆ ಮಾಡಲಾಯಿತು. ಕಳೆದ ಮೇ ತಿಂಗಳಲ್ಲಿ BSNL 93,000 ಕ್ಕೂ ಹೆಚ್ಚು 4G ಟವರ್‌ ಹೊಂದಿದೆ. ಅದರಲ್ಲಿ 70,000 ಕ್ಕೂ ಹೆಚ್ಚು ಟವರ್‌ಗಳಲ್ಲಿ ಸಮರ್ಪಕ ಕಾರ್ಯ ನಿರ್ವಹಣೆ ಆಗುತ್ತಿದೆ ಎಂದು BSNL ಹೇಳಿಕೊಂಡಿದೆ. ಅದರ ಬೆನ್ನಲ್ಲೆ ಹೆಚ್ಚುವರಿ ಟವರ್ ನಿರ್ಮಾಣಕ್ಕೆ ಒಪ್ಪಿಗೆ ಪಡೆಯಲಾಗಿದೆ ಎಂದು ರಾಜ್ಯ ಸಂವಹನ ಸಚಿವ ಪೆಮ್ಮಸಾನಿ ಚಂದ್ರಶೇಖರ್ ಹೇಳಿದ್ದಾರೆ.

BSNL ನೆಟ್‌ವರ್ಕ್‌ ಸಮಸ್ಯೆ: ಪರಿಹಾರ ಭರವಸೆ

ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್+ಐಡಿಯಾ ವರ್ಷಗಳ ನಂತರ BSNL 4G ಸೇವೆ ಆರಂಭ ಕೊಂಚ ವಿಲಂಬವಾಯಿತು. ಈಗಾಗಲೇ BSNL ವಿರುದ್ಧ ಗ್ರಾಹಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಧ್ವನಿ ಕರೆಯಲ್ಲಿನ ಸಮಸ್ಯೆ, ಕರೆಗಳು ಸಮರ್ಪಕವಾಗಿಲ್ಲ. ನೆಟ್‌ವರ್ಕ್ ಸಿಗುತ್ತಿಲ್ಲ. 4gಗಿಂತ ಮೊದಲು 3g ನೆಟ್‌ವರ್ಕ್ ಎಷ್ಟೋ ಪಾಲು ಉತ್ತಮ ಎಂಬಂತಾಗಿದೆ ಎಂದು ಗ್ರಾಹಕರು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವು ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು BSNL ಹೇಳಿಕೊಂಡಿದೆ. ಆದರೂ ಎಲ್ಲ ಸಮಸ್ಯೆಗಳು ಪರಿಹಾರವಾಗಿಲ್ಲ ಎಂಬುದು ಸತ್ಯ. ಮುಂದೆ 5g ಸೇವೆ ವೇಳೆ ಇಂತಹ ತಪ್ಪುಗಳನ್ನು ಮಾಡದಂತೆ ಗ್ರಾಹಕರು ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಸಂಸ್ಥೆ ಗ್ರಾಹಕ ಸ್ನೇಹಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕಡಿಮೆ ಬೆಲೆಗೆ ಹೆಚ್ಚಿನ ಸೇವೆ ನೀಡುವ ಮೂಲಕ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಟಕ್ಕರ್ ನೀಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+