• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ವಿರುದ್ಧ ‘ಹೈಡ್ರೋಜನ್ ಬಾಂಬ್’ ಪ್ರಯೋಗಿಸಲಿದೆ ಭಾರತ..!

|

ಮಾತುಕತೆಗೆ ನಡೆಸಿ ಸಾಕಾಯ್ತು, ತಂಟೆಗೆ ಬರಬೇಡಿ ಅಂತಾ ಎಚ್ಚರಿಕೆ ನೀಡಿದ್ದೂ ಆಯ್ತು. ಖತರ್ನಾಕ್ ಚೀನಿ ಗ್ಯಾಂಗ್ ಮಾತ್ರ ಭಾರತದ ಸೌಮ್ಯ ಸ್ವಭಾವ ಒಪ್ಪುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಚೀನಾಗೆ ಠಕ್ಕರ್ ಕೊಡಲು ಭಾರತ ಸಜ್ಜಾಗಿದೆ. ಚೀನಾ ವಿರುದ್ಧ 'ಹೈಡ್ರೋಜನ್ ಬಾಂಬ್' ಪ್ರಯೋಗಿಸಲು ಭಾರತ ಮುಂದಾಗಿದೆ. ಆದರೆ ನೀವು ಅಂದುಕೊಂಡಂತೆ ಇದು 'ನ್ಯೂಕ್ಲಿಯರ್ ಬಾಂಬ್' ಅಲ್ಲ. ಬದಲಾಗಿ ಹೇಗೆ ಚೀನಾ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಡ್ಯಾಂ ಕಟ್ಟುತ್ತಿದೆಯೋ ಹಾಗೇ ಭಾರತ ಕೂಡ ಡ್ಯಾಂ ಕಟ್ಟಲು ಮುಂದಾಗಿದೆ.

   China ವಿರುದ್ಧ ಹೈಡ್ರೋಜನ್ ಬಾಂಬ್ ಹಾಕಲು ಭಾರತ ಸಿದ್ಧ | Oneindia Kannada

   ಚೀನಾದಿಂದ ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಬೃಹತ್ ಅಣೆಕಟ್ಟು ನಿರ್ಮಾಣ: ಭಾರತಕ್ಕೆ ಆತಂಕ

   ಈ ಮೂಲಕ ಚೀನಾಗೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಲು ಭಾರತ ಮುಂದಾಗಿದೆ. ಇದೀಗ ಬ್ರಹ್ಮಪುತ್ರ ನದಿ ಮೇಲ್ದಂಡೆಯಲ್ಲಿ ಚೀನಾ ಅಣೆಕಟ್ಟು ನಿರ್ಮಿಸುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಮುಂದೆ ಚೀನಿ ಗ್ಯಾಂಗ್‌ನಿಂದ ಎದುರಾಗಬಹುದಾದ ಅಪಾಯಗಳನ್ನು ತಡೆಯಲು ಅರುಣಾಚಲ ಪ್ರದೇಶದಲ್ಲಿ ಭಾರತ ಇದೇ ನದಿಗೆ ಡ್ಯಾಂ ಕಟ್ಟಲು ಮುಂದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದಹಾಗೆ ಭಾರತದ ಉದ್ದೇಶಿತ ಡ್ಯಾಂ 10 ಗಿಗಾವ್ಯಾಟ್‌ (GW) ಜಲವಿದ್ಯುತ್ ಸಾಮರ್ಥ್ಯ ಹೊಂದಿರಲಿದೆ.

   ಚೀನಾದಿಂದ ಖತರ್ನಾಕ್ ಪ್ಲಾನ್..?

   ಚೀನಾದಿಂದ ಖತರ್ನಾಕ್ ಪ್ಲಾನ್..?

   ಚೀನಾ ಇದೀಗ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿದೆ ಎನ್ನಲಾಗಿರುವ ಯೋಜನೆಯಿಂದ ಭಾರತಕ್ಕೆ ಕಂಟಕ ಕಾದಿವೆ. ಚೀನಾದಲ್ಲಿ ಯರ್ಲುಂಗ್ ತ್ಸಾಂಗ್ಬೊ ಎಂದು ಕರೆಯುವ ಬ್ರಹ್ಮಪುತ್ರ ಟಿಬೆಟ್‌ನಿಂದ ಅರುಣಾಚಲಕ್ಕೆ ಮತ್ತು ಅಸ್ಸಾಂ ಮೂಲಕವಾಗಿ ಬಾಂಗ್ಲಾದೇಶದ ಕಡೆಗೆ ಹರಿಯುತ್ತದೆ. ಚೀನಾದ ಈ ಅಣೆಕಟ್ಟು ಯೋಜನೆಯಿಂದ ದಿಢೀರ್‌ ಪ್ರವಾಹ ಅಥವಾ ನೀರಿನ ಕೃತಕ ಅಭಾವ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ಕಾರಣಕ್ಕೆ ಚೀನಾಗೆ ತಿರುಗೇಟು ನೀಡಲು ಭಾರತ ಸಜ್ಜಾಗಿದೆ. ಚೀನಾ ಅಣೆಕಟ್ಟು ಯೋಜನೆ ಅಪಾಯಕ್ಕೆ ಬ್ರೇಕ್ ಹಾಕಲು ಅರುಣಾಚಲ ಪ್ರದೇಶದಲ್ಲಿ ದೊಡ್ಡ ಅಣೆಕಟ್ಟು ಬೇಕಾಗಿದ್ದು, ಈ ಪ್ರಸ್ತಾಪ ಪರಿಶೀಲನೆಯಲ್ಲಿದೆ.

   ‘ವಾಟರ್ ವಾರ್‌’ಗೆ ರಣಕಹಳೆ..?

   ‘ವಾಟರ್ ವಾರ್‌’ಗೆ ರಣಕಹಳೆ..?

   ಈಗಾಗಲೇ ಭಾರತದ ಗಡಿ ಆಕ್ರಮಿಸಿಕೊಳ್ಳಲು ಚೀನಾ ಹೊಂಚು ಹಾಕಿ ಕುಳಿತಿದೆ. ಗಡಿಯಲ್ಲಿ ಚೀನಾ ವಿರುದ್ಧ ಭಾರತ ಹೋರಾಡುತ್ತಿರುವಾಗಲೇ ಚೀನಾ ನದಿ ನೀರಿನ ಮೇಲೂ ಕಣ್ಣಿಟ್ಟಿದೆ. ಇದರಿಂದ ಮುಂದಿನ ದಿನಗಳಲ್ಲಿ ಎರಡೂ ದೇಶಗಳ ನಡುವೆ ಜಲಯುದ್ಧ ನಡೆದರೂ ಆಶ್ಚರ್ಯಪಡಬೇಕಿಲ್ಲ ಎಂದು ತಜ್ಞರು ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ ಅದೆಷ್ಟೇ ಬುದ್ಧಿ ಹೇಳಿದರೂ ಚೀನಾ ಆ ಬುದ್ಧಿ ಮಾತನ್ನ ಕೇಳುವಂತೆ ಕಾಣುತ್ತಿಲ್ಲ. ಹೀಗಾಗಿ ಮುಂದಿನ ಪರಿಸ್ಥಿತಿಯನ್ನು ಎದುರಿಸಲು ಭಾರತ ಸಜ್ಜಾಗುತ್ತಿದೆ.

   ಭಾರತಕ್ಕೆ ಸಿಗುತ್ತಾ ಬೆಂಬಲ..?

   ಭಾರತಕ್ಕೆ ಸಿಗುತ್ತಾ ಬೆಂಬಲ..?

   ‘ಡ್ರ್ಯಾಗನ್' ತನ್ನ ಸುತ್ತಲೂ ಸಮಾನ ವಿರೋಧಿಗಳನ್ನು ಇಟ್ಟುಕೊಂಡಿದೆ. ಹೀಗಾಗಿಯೇ ಚೀನಾ ವಿರುದ್ಧ ಈಗ ಭಾರತ ಕೈಗೊಂಡಿರುವ ಕ್ರಮಕ್ಕೆ ಇತರ ರಾಷ್ಟ್ರಗಳು ಬೆಂಬಲ ನೀಡುವ ಸಾಧ್ಯತೆಯೂ ದಟ್ಟವಾಗಿದೆ. ಅದರಲ್ಲೂ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳು ಚೀನಿ ಗ್ಯಾಂಗ್ ವಿರುದ್ಧ ಭಾರತಕ್ಕೆ ಬೆನ್ನೆಲುಬಾಗಿ ನಿಲ್ಲುವ ಸಾಧ್ಯತೆ ಇದೆ. ಇನ್ನುಳಿದಂತೆ ಆಸ್ಟ್ರೇಲಿಯಾ ಮತ್ತು ಜಪಾನ್ ಕೂಡ ಭಾರತವನ್ನ ಈ ವಿಚಾರದಲ್ಲಿ ಬೆಂಬಲಿಸಬಹುದು.

   ಚೀನಾ ಅಣೆಕಟ್ಟಿನಿಂದ ಭಾರತದಲ್ಲಿ ಪ್ರವಾಹ ಭೀತಿ?

    ಭಾರತದ ದಿಟ್ಟ ನಡೆಗೆ ಅಮೆರಿಕ ಬೆಂಬಲ ?

   ಭಾರತದ ದಿಟ್ಟ ನಡೆಗೆ ಅಮೆರಿಕ ಬೆಂಬಲ ?

   ಶಕ್ತಿಶಾಲಿ ರಾಷ್ಟ್ರಗಳು ಭಾರತಕ್ಕೆ ಬೆಂಬಲ ನಿಡಿದರೆ ಚೀನಾ ವಿರುದ್ಧ ತೊಡೆ ತಟ್ಟುವುದು ಸುಲಭ. ಹಾಗೇ ಚೀನಾ ಜಾಗತಿಕ ಮಟ್ಟದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖಭಂಗ ಅನುಭವಿಸಿದರೂ ಆಶ್ಚರ್ಯ ಇಲ್ಲ. ಸದ್ಯ ಅಮೆರಿಕದಲ್ಲೂ ಭಾರಿ ಬದಲಾವಣೆಗಳು ಸಂಭವಿಸುತ್ತಿದ್ದು, ನೂತನ ಅಧ್ಯಕ್ಷ ಬೈಡನ್ ಚೀನಿಯರಿಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ. ಈ ಹೊತ್ತಲ್ಲೇ ಭಾರತದ ದಿಟ್ಟ ನಡೆಗೆ ಅಮೆರಿಕ ಬೆಂಬಲ ನೀಡುವ ಸಾಧ್ಯತೆ ಇದೆ.

   English summary
   India plans to give counter to China, which is building dam for Brahmaputra. India planning to build a dam for Brahmaputra river in Arunachal Pradesh.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X