• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ವಸ್ತುಗಳಿಗೆ ಬಹಿಷ್ಕಾರ: ಟಿಕ್‌ಟಾಕ್‌ನಿಂದ ಹೊರಬಂದ ನಟ ಮಿಲಿಂದ್ ಸೋಮನ್

|

ನವದೆಹಲಿ, ಮೇ 31: ಕೊರೊನಾವೈರಸ್ , ಭಾರತ ಗಡಿಯಲ್ಲಿ ವಿವಾದ ಸೇರಿದಂತೆ ನಾನಾ ಕಾರಣಗಳಿಂದ ಭಾರತದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಅಭಿಯಾನ ಆರಂಭವಾಗಿದೆ.

ಶಿಕ್ಷಣ ಹರಿಕಾರ ಎಂದೇ ಗುರುತಿಸಿಕೊಂಡಿರುವ ಸೊನಮ್ ವಾಂಗ್ಚುಕ್ ಮಹತ್ವದ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ನಟ ಮಿಲಿಂದ್ ಸೋಮನ್, ಚೀನಾ ಟಿಕ್‌ಟಾಕ್ ಅಪ್ಲಿಕೇಷನ್‌ನಿಂದ ಹೊರಬಂದಿದ್ದಾರೆ.

ಜೋರಾಯ್ತು ಟಿಕ್ ಟಾಕ್ ಬ್ಯಾನ್ ಸದ್ದು: ಇಳಿಕೆಯಾಯ್ತು ರೇಟಿಂಗ್

ಇತ್ತೀಚೆಗೆ ವಾಂಗ್ಚುಕ್ ಸಾಮಾಜಿಕ ಜಾಲತಾಗಳಲ್ಲಿ ವಿಡಿಯೋ ಮೂಲಕ ಭಾರತೀಯರಲ್ಲಿ ಮನವಿ ಮಾಡಿದ್ದರು. ಚೀನಾ ಪ್ರತಿ ದಿನ ಭಾರತಕ್ಕೆ ಸಂಕಷ್ಟ ತರುತ್ತಿದೆ. ನಮಗೆ ಚೀನಾ ಜನತೆಯಿಂದ ಸಮಸ್ಯೆ ಇಲ್ಲ, ಅಲ್ಲಿನ ಸರ್ಕಾರವೇ ಸಮಸ್ಯೆ ಎಂದಿದ್ದರು.

ಹಾಗೆಯೇ ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು, ಗ್ರಾಮ ಗ್ರಾಮಗಳಲ್ಲಿ ಜನರಲ್ಲಿ ಅರಿವು ಮೂಡಿಸಿ ಸಾಧ್ಯವಾದಷ್ಟು ಸ್ವದೇಶಿ ವಸ್ತುಗಳನ್ನೇ ಬಳಸಿ ಎಂದು ಕರೆ ನೀಡಿದ್ದಾರೆ.

ವಾಂಗ್ಚುಕ್ ಕರೆ ಬೆನ್ನಲ್ಲೇ ಖ್ಯಾತ ನಟ ಮಿಲಿಂದ್ ಸೋಮನ್ ಚೀನಾದ ಖ್ಯಾತ ಅಪ್ಲಿಕೇಷನ್ ಟಿಕ್‌ಟಾಕ್ ಡಿಲೀಟ್ ಮಾಡಿದ್ದಾರೆ.

ನಾನು ಇನ್ನುಮುಂದೆ ಟಿಕ್‌ಟಾಕ್ ಬಳಸುವುದಿಲ್ಲ, ಚೀನಾ ವಸ್ತು ಬಹುಷ್ಕರಿಸಿ ಎಂದ ವಾಂಗ್ಚುಕ್ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. #BoycottChineseProducts ಹೆಸರಿನಲ್ಲಿ ಆನ್‌ಲೈನ್ ಅಭಿಯಾನ ಆರಂಭವಾಗಿದೆ. ಈ ಅಭಿಯಾನದಲ್ಲಿ ಅರ್ಷದ್ ವಾರ್ಸಿ, ಕಾಮ್ಯಾ ಪಂಜಾಬಿ, ಮಿಲಿಂದ್ ಸೋಮನ್ ಹಾಗೂ ಇತರೆ ನಟರು ಭಾಗಿಯಾಗಲಿದ್ದಾರೆ.

English summary
The hashtags #BoycottChineseProducts and #BoycottChina started trending after educator and innovator Sonam Wangchuk, whose life inspired the Aamir Khan- starrer 3 Idiots, shared a video on YouTube urging all to avoid Chinese goods amid the growing tensions between India and China in Ladakh. Netizens and a string of known personalities alike have followed Wangchuk’s lead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X