ವಿಡಿಯೋ: ಪೊಲೀಸ್ ಮೇಲೆ ನಿರ್ದಯ ಹಲ್ಲೆ ನಡೆಸಿದ ಬಿಜೆಪಿ ಕೌನ್ಸಿಲರ್
ಮೀರಟ್ (ಉತ್ತರ ಪ್ರದೇಶ), ಅಕ್ಟೋಬರ್ 20: ತನ್ನ ಹೊಟೆಲ್‌ಗೆ ಬಂದ ಪೊಲೀಸ್ ಇನ್ಸ್ಪಟೆಕ್ಟರ್ ಒಬ್ಬರನ್ನು ಬಿಜೆಪಿ ಜನಪ್ರತಿನಿದಿ ಓರ್ವ ಮನಸೋ ಇಚ್ಛೆ ಥಳಿಸಿದ್ದಾನೆ. ಇದರ ವಿಡಿಯೋ ಈಗ ವೈರಲ್ ಆಗಿದೆ.
ಮೀರಟ್‌ನಲ್ಲಿ ಬಿಜೆಪಿಯ ಕೌನ್ಸಿಲರ್ ಮನೀಷ್ ಎಂಬುವನ ಹೊಟೆಲ್‌ಗೆ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಮಹಿಳಾ ವಕೀಲರೊಂದಿಗೆ ಬಂದಿದ್ದಾರೆ. ಊಟ ತಡವಾಗಿ ತಂದಿದ್ದಕ್ಕೆ ಹೊಟೆಲ್‌ನ ಸಿಬ್ಬಂದಿ ಒಬ್ಬನೊಂದಿಗೆ ಇನ್ಸ್ಪೆಕ್ಟರ್ ವಾಗ್ವಾದ ನಡೆಸಿದ್ದಾರೆ. ಇದರಿಂದ ಕೆರಳಿದ ಬಿಜೆಪಿ ನಾಯಕ ಮದ್ಯ ಪ್ರವೇಶಿಸಿ ಸಮವಸ್ತ್ರದಲ್ಲಿದ್ದ ಇನ್ಸ್ಪೆಕ್ಟರ್‌ನಿಗೆ ಮನಸೋ ಇಚ್ಛೆ ಥಳಿಸಿದ್ದಾನೆ.
#WATCH: BJP Councillor Manish thrashes a Sub-Inspector who came to his (Manish's) hotel with a lady lawyer and got into an argument with a waiter. The councillor has been arrested. (19.10.18) (Note- Strong Language) pic.twitter.com/aouSxyztSa
— ANI UP (@ANINewsUP) October 20, 2018
ಬಿಜೆಪಿ ಮುಖಂಡ ಮನೀಷ್ ಇನ್ಸ್ಪೆಕ್ಟರ್‌ನಿಗೆ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ಸ್ಪೆಕ್ಟರ್ ಜೊತೆ ಬಂದ ಮಹಿಳೆಯ ಮೇಲೂ ಆತ ದೌರ್ಜನ್ಯ ಎಸಗಿದ್ದಾನೆ ಅದು ಸಹ ವಿಡಿಯೋದಲ್ಲಿ ದಾಖಲಾಗಿದೆ.

ಇನ್ಸ್ಪೆಕ್ಟರ್ ಅನ್ನು ಥಳಿಸಿದ ಮನೀಷ್‌ನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಆತನ ಮೇಲೆ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ, ಮಹಿಳೆಯ ಮೇಲೆ ಹಲ್ಲೆ ಮತ್ತು ದೌರ್ಜನ್ಯ, ಅವಾಚ್ಯ ಶಬ್ದಗಳಿಂದ ನಿಂದನೆ ಮಂತಾದ ಪ್ರಕರಣಗಳನ್ನು ದಾಖಲಿಸಲಾಗಿದೆ.












Click it and Unblock the Notifications