Maharashtra election: ದಾವೂದ್ ಇಬ್ರಾಹಿಂ ಗ್ಯಾಂಗ್ ಸಂಪರ್ಕ ಇದ್ದವನಿಗೆ ಟಿಕೆಟ್ ಕೊಡ್ತಾ ಬಿಜೆಪಿ ಮೈತ್ರಿಪಕ್ಷ!
ಮಹಾರಾಷ್ಟ್ರ ಚುನಾವಣೆಗೆ ಇನ್ನು ಎರಡು ವಾರಗಳು ಮಾತ್ರ ಬಾಕಿ ಉಳಿದಿದೆ. ಮಹಾರಾಷ್ಟ್ರ ಚುನಾವಣೆ ಸಮೀಪಿಸುತ್ತಿರುವಾಗಲೇ ಹಲವು ರಾಜಕೀಯ ಹೈಡ್ರಾಮಾಗಳು ಹಾಗೂ ಕುತೂಹಲಕಾರಿ ರಾಜಕೀಯ ಬೆಳವಣಿಗೆಗಳು ನಡೆದಿವೆ. ಮಹಾರಾಷ್ಟ್ರದಲ್ಲಿರುವ ಮೈತ್ರಿ ಪಕ್ಷಗಳ ನಡುವೆಯೇ ಭಾರೀ ಪೈಪೋಟಿ ನಡೆದಿದೆ. ಇದೀಗ ಮಹಾಯುತಿ ಮೈತ್ರಿ ಪಕ್ಷದಲ್ಲೇ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಬಿಜೆಪಿಯು ತನ್ನ ಮಿತ್ರ ಪಕ್ಷ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್‌ಪವಾರ್ ಬಣ)ದಿಂದ ಅಂತರ ಕಾಪಾಡಿಕೊಂಡಿದೆ.
ನವೆಂಬರ್ 20ಕ್ಕೆ ಮಹಾರಾಷ್ಟ್ರ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದು. ಚುನಾವಣಾ ಪ್ರಚಾರ ಅಖಾಡ ರಂಗೇರಿದೆ. ಚುನಾವಣೆಯಲ್ಲಿ ಮಹಾಯುತಿ ಹಾಗೂ ಮಹಾ ವಿಕಾಸ್ ಅಘಾಡಿ ಮೈತ್ರಿ ಪಕ್ಷಗಳು ಸೆಣೆಸುತ್ತಿವೆ. ಆದರೆ, ಈ ಮೈತ್ರಿ ಪಕ್ಷಗಳ ನಡುವೆಯೇ ಭಾರೀ ಭಿನ್ನಾಭಿಪ್ರಾಯಗಳು ಇರುವುದು ಇದೀಗ ಚುನಾವಣೆ ಸಮಯದಲ್ಲಿ ಬಹಿರಂಗವಾಗುತ್ತಿವೆ.

ಇದೀಗ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಮಂಖುರ್ದ್ - ಶಿವಾಜಿನಗರ ಕ್ಷೇತ್ರದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಭ್ಯರ್ಥಿ ನವಾಬ್ ಮಲಿಕ್ ಪರ ನಾನಾಗಲಿ ಅಥವಾ ನನ್ನ ಪಕ್ಷ (ಬಿಜೆಪಿ)ಯಿಂದಾಗಲಿ ಯಾರೂ ಸಹ ಪ್ರಚಾರ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಹಾಗೂ ಶಿವಸೇನಾ (ಏಕನಾಥ್ ಶಿಂಧೆ ಬಣ) ಅಧಿಕಾರದಲ್ಲಿ ಇದೆ. ಈ ಪಕ್ಷಗಳು ಈ ಬಾರಿಯ ಮಹಾರಾಷ್ಟ್ರ ಚುನಾವಣೆಯಲ್ಲೂ ಹೊಂದಾಣಿಕೆ ಮಾಡಿಕೊಂಡು, ಸೀಟು ಹಂಚಿಕೊಂಡಿವೆ. ಆದರೆ, ಬಿಜೆಪಿ ಇದೀಗ ಎನ್‌ಸಿಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದಿದೆ.
ಬಿಜೆಪಿಯು ನವಾಬ್ ಮಲಿಕ್‌ಗೆ ಟಿಕೆಟ್ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಬಿಜೆಪಿಯ ಮುಂಬೈ ಘಟಕದ ಮುಖ್ಯಸ್ಥರಾದ ಆಶಿಶ್ ಶೇಲಾರ್ ಅವರು ಎನ್‌ಸಿಪಿ ಬಣದ ಮುಖ್ಯಸ್ಥ ಅಜಿತ್ ಪವಾರ್ ಅವರು ನವಾಬ್ ಮಲಿಕ್‌ಗೆ ಟಿಕೆಟ್ ನೀಡಬಾರದಿತ್ತು ಎಂದಿದ್ದರು.
ದಾವೊದ್‌ನೊಂದಿಗೆ ಸಂಪರ್ಕ ಆರೋಪ: ಎನ್‌ಸಿಪಿಯ ಅಭ್ಯರ್ಥಿಯ ಬಗ್ಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣವೂ ಇದೆ. ಇದೀಗ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ನವಾಬ್ ಮಲಿಕ್‌ಗೆ ಟಿಕೆಟ್ ನೀಡುರುವುದಕ್ಕೆ ವಿರೋಧಿಸಲು ಮುಖ್ಯ ಕಾರಣ ನವಾಬ್ ಈ ಹಿಂದೆ ಮಲಿಕ್ ದಾವೂದ್ ಇಬ್ರಾಹಿಂ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನುವ ಆರೋಪ. ಹೀಗಾಗಿ, ನಾವು ಈಗಾಗಲೇ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಾವು ಯಾವುದೇ ಕಾರಣಕ್ಕೂ ನವಾಬ್ ಪರವಾಗಿ ಪ್ರಚಾರ ನಡೆಸುವುದಿಲ್ಲ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಮಹಾರಾಷ್ಟ್ರ ಚುನಾವಣೆ: ಮಹಾರಾಷ್ಟ್ರ ಚುನಾವಣೆ ಇದೇ ತಿಂಗಳು 20ರಂದು ನಡೆಯಲಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ 288 ವಿಧಾನಸಭಾ ಕ್ಷೇತ್ರಗಳಿದ್ದು, 145 ಮ್ಯಾಜಿಕ್ ನಂಬರ್ ಆಗಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳಾಗಿ ಸ್ಪರ್ಧೆಗೆ ಇಳಿದಿವೆ. ಇಲ್ಲಿನ ಎರಡು ಪ್ರಮುಖ ಪಕ್ಷಗಳು ಇಬ್ಭಾಗವಾಗಿ ವಿಭಜನೆಯಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.












Click it and Unblock the Notifications