7,000 ಸಾವಿರ ರೂ. ಪ್ರತಿ ತಿಂಗಳು ಮತ್ತು ಜಾಬ್ ಬರುವ ಭರ್ಜರಿ ಸ್ಕೀಮ್ ಪರಿಚಯಿಸಿದ ಕೇಂದ್ರ ಸರ್ಕಾರ!
Bima Sakhi Schemem: ಕೇಂದ್ರ ಬಿಜೆಪಿ ಸರ್ಕಾರವು ದೇಶದಲ್ಲಿ ಮಹಿಳೆಯರ ಕೈಯಲ್ಲಿ ನಾಲ್ಕು ಕಾಸು ಸೇರುವಂತೆ ಮಾಡುವ ಉದ್ದೇಶದಿಂದ ಮಹತ್ವದ ಯೋಜನೆಯೊಂದನ್ನು ಪರಿಚಯಿಸಲು ಮುಂದಾಗಿದೆ. ಈ ಯೋಜನೆಯಿಂದಾಗಿ ಮಹಿಳೆಯರು ಹಣಕಾಸಿನ ಸಹಾಯವನ್ನೂ ಪಡೆಯಲಿದ್ದಾರೆ. ಬಿಜೆಪಿ ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಇದರ ಬೆನ್ನಲ್ಲೇ ಮಹತ್ವದ ಯೋಜನೆಯನ್ನು ಪರಿಚಯಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಬಿಮಾ ಸಖಿ ಯೋಜನೆಯನ್ನು ಪರಿಚಯಿಸುತ್ತಿದೆ. ಈ ಯೋಜನೆಯ ಭಾಗವಾದರೆ ಪ್ರತಿ ತಿಂಗಳೂ ಮಹಿಳೆಯರಿಗೆ ದುಡ್ಡು ಬರಲಿದೆ. ಹಾಗಾದರೆ ಏನಿದು ಯೋಜನೆ, ಯಾರೆಲ್ಲ ಅರ್ಹರು ಎನ್ನುವ ವಿವರ ಇಲ್ಲಿದೆ.
ಕೇಂದ್ರ ಸರ್ಕಾರ ಹಾಗೂ ಎಲ್‌ಐಸಿಯ ಸಹಯೋಗದಲ್ಲಿ ಬಿಮಾ ಸಖಿ ಯೋಜನೆಯನ್ನು ಪರಿಚಯಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯ ಮೂಲಕ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಸ್ವಾಲಂಬಿಗಳನ್ನಾಗಿ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಈ ಯೋಜನೆಯ ಭಾಗವಾಗುವವರು ವಾರ್ಷಿಕ ಸ್ಟೈಫಂಡ್ (ವೇತನ ರೂಪದಲ್ಲಿ ಹಣ) ಪಡೆಯಲಿದ್ದಾರೆ. ಪ್ರಾರಂಭಿಕ ಮೊದಲ ವರ್ಷದಲ್ಲಿ ಸ್ಟೈಫಂಡ್ ತಿಂಗಳಿಗೆ 7,000 ಸ್ಟೈಫಂಡ್ ಸಿಗಲಿದೆ. ಮುಂದುವರಿದು ಎರಡನೇ ವರ್ಷದಲ್ಲಿ 6,000 ರೂಪಾಯಿ ಹಾಗೂ ಮೂರನೇ ವರ್ಷದಲ್ಲಿ 5,000 ಸಾವಿರ ರೂಪಾಯಿ ಸಿಗಲಿದೆ. ಅಲ್ಲದೇ ಮಹಿಳೆಯರು ಮುಂದುವರಿದು ಉದ್ಯೋಗಾವಕಾಶವನ್ನೂ ಗಳಿಸಲಿದ್ದಾರೆ.
ಯಾರೆಲ್ಲ ಈ ಯೋಜನೆಗೆ ಅರ್ಹರು ?
ಬಿಮಾ ಸಖಿ ಯೋಜನೆಯು 3 ವರ್ಷಗಳ ಸ್ಟೈಪೆಂಡರಿ ಯೋಜನೆಯಾಗಿದೆ. ಇದಕ್ಕೆ ಅರ್ಜಿ ಸಲ್ಲಿಸುವವರ ವಯಸ್ಸು 18 ವರ್ಷಗಳಾಗಿರಬೇಕು. ವಿದ್ಯಾಭ್ಯಾಸ ಎಸ್‌ಎಸ್‌ಎಲ್‌ಸಿ ಪೂರೈಸಿರಬೇಕು. ಇನ್ನು ಸ್ಟೈಪೆಂಡರಿ ಅವಧಿಯ ನಂತರ ನಿಯಮಗಳ ಪ್ರಕಾರ, ಏಜೆನ್ಸಿಯು ಕಮಿಷನ್‌ನೊಂದಿಗೆ ಮುಂದುವರಿಯಲಿದೆ. ಅಲ್ಲದೇ ಇದನ್ನು ಎಲ್‌ಐಸಿಯ ಸಹಯೋಗದೊಂದಿಗೆ ಮಾಡಲಾಗುತ್ತಿದ್ದು, ಎಲ್‌ಐಸಿಯು ತನ್ನ ಏಜೆಂಟರಿಗೆ ಷರತ್ತುಗಳಿಗೆ ಒಳಪಟ್ಟು ಕೆಲಸದ ಅವಕಾಶಗಳನ್ನು ಸಹ ನೀಡಲಿದೆ. ಇನ್ನು ಕೆಲವು ನಿರ್ದಿಷ್ಟ ಮಾನದಂಡಗಳನ್ನು ಪೂರೈಸುವ ಆಧಾರದ ಮೇಲೆ ಸ್ಟೈಪಂಡರಿ ಯೋಜನೆ ನಿರ್ಧಾರಿತವಾಗಲಿದೆ.
ಭಾರತೀಯ ಜೀವ ವಿಮಾ ನಿಗಮದ (LIC)ಯಿಂದ ಬಿಮಾ ಸಖಿ ಎನ್ನುವ ಯೋಜನೆಯನ್ನು ಪರಿಚಯಿಸಲಾಗುತ್ತಿದ್ದು, ಕನಿಷ್ಠ 10ನೇ ತರಗತಿ ವಿದ್ಯಾಭ್ಯಾಸ ಪೂರೈಸಿರುವ ಮಹಿಳೆಯರು ಹಾಗೂ 18 ರಿಂದ 70 ವರ್ಷ ವಯಸ್ಸಿನ ಮಹಿಳೆಯರಿಗೆ ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಿರುವುದಾಗಿ ಹೇಳಲಾಗಿದೆ.
ದೇಶದಲ್ಲಿ ಆರ್ಥಿಕತೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಜೀವ ವಿಮೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದ್ದು, ಇದರ ಮೂಲಕ ಮಹಿಳೆಯರು ಮೂರು ವರ್ಷಗಳ ಕಾಲ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯ ಅವಧಿಯಲ್ಲಿ ಅವರಿಗೆ ಆರ್ಥಿಕ ನೆರವು ಸಹ ಸಿಗಲಿದೆ. ಅಲ್ಲದೇ ಟ್ರೈನಿಂಗ್ ಮುಗಿದ ಮೇಲೆ ಮಹಿಳೆಯರು ಎಲ್‌ಐಸಿ ಏಜೆಂಟ್ ಆಗಿಯೂ ಕೆಲಸ ಮಡುವುದಕ್ಕೆ ಅವಕಾಶ ಇದೆ.
ಹೆಚ್ಚಿನ ಮಾಹಿತಿಗಾಗಿ: ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನೀವು ಹತ್ತಿರದ ಎಲ್‌ಐಸಿ ಕಚೇರಿ ಅಥವಾ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್ www.licindia.in ಗೆ ಭೇಟಿ ನೀಡಬಹುದಾಗಿದೆ.
ಇನ್ನು ಕೇಂದ್ರ ಸರ್ಕಾರವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆಯನ್ನು ಪರಿಚಯಿಸಿದೆ. ಹರಿಯಾಣದಲ್ಲಿ ಇಂದು ಉದ್ಘಾಟನೆಯಾಗಲಿದ್ದು, ಹಂತ ಹಂತವಾಗಿ ದೇಶದಾದ್ಯಂತ ಈ ಯೋಜನೆಯು ವಿಸ್ತರಣೆ ಆಗಲಿದೆ.












Click it and Unblock the Notifications