ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಭೀಕರ ರೈಲು ಅಪಘಾತ: 2 ರೈಲುಗಳ ನಡುವೆ ಡಿಕ್ಕಿ, 6 ಜನ ಸಾವು
ಭಾರತವು ಮಂಗಳವಾರ ಮತ್ತೊಂದು ರೈಲು ದುರಂತಕ್ಕೆ ಸಾಕ್ಷಿಯಾಗಿದೆ. ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗದಲ್ಲಿ ಬಸ್ ಅಪಘಾತ ಹಾಗೂ ಭೀಕರ ರಸ್ತೆ ಅಪಘಾತಗಳು ವರದಿಯಾಗುತ್ತಿವೆ. ಇದೀಗ ಮಂಗಳವಾರ ಸಂಜೆ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ದೊಡ್ಡದೊಂದು ರೈಲು ಅಪಘಾತ ಸಂಭವಿಸಿದ್ದು. ಈ ಭೀಕರ ರೈಲು ದುರಂತದಲ್ಲಿ 6 ಜನ ಮೃತಪಟ್ಟಿದ್ದು, ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಛತ್ತೀಸ್‌ಗಢದ ಬಿಲಾಸ್‌ಪುರ ಪ್ರದೇಶದಲ್ಲಿ ಗೂಡ್ಸ್ ರೈಲು ಹಾಗೂ ಪ್ಯಾಸೆಂಜರ್ ರೈಲಿನ ನಡುವೆ ಡಿಕ್ಕಿಯಾಗಿದ್ದು, ಭಾರೀ ದೊಡ್ಡ ಅವಘಡ ಸಂಭವಿಸಿದೆ. ಈ ರೈಲು ದುರಂತದಲ್ಲಿ ಸ್ಥಳದಲ್ಲೇ 6 ಜನ ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬಿಲಾಸ್ಪುರ ರೈಲು ಅಪಘಾತ ಸುದ್ದಿ ಕೇಳಿದ ಬೆನ್ನಲ್ಲೇ ಸ್ಥಳೀಯ ಅಧಿಕಾರಿಗಳು ಹಾಗೂ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಛತ್ತೀಸ್‌ಗಢದ ಬಿಲಾಸ್ಪುರ ಜಿಲ್ಲೆಯಲ್ಲಿ ರಕ್ಷಣಾ ಮತ್ತು ವೈದ್ಯಕೀಯ ತಂಡದ ಸದಸ್ಯರು ದೌಡಾಯಿಸಿದ್ದಾರೆ. ಮಂಗಳವಾರ ಛತ್ತೀಸ್‌ಗಢದ ಬಿಲಾಸ್ಪುರ ರೈಲು ನಿಲ್ದಾಣದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 6 ಜನ ಮೃತಪಟ್ಟಿರುವುದಾಗಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ರೈಲು ಅಪಘಾತ ಸಂಭವಿಸಿದ್ದು ಹೇಗೆ: ಇನ್ನು ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಮಂಗಳವಾರ ಸಂಜೆ ವೇಳೆಗೆ MEMU ರೈಲು (ಪ್ರಯಾಣಿಕ ರೈಲು) ಸರಕು ರೈಲಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ತೀವ್ರತೆಯು ಗಂಭೀರವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.












Click it and Unblock the Notifications