Snake Fair: ಜನರ ಕತ್ತಿನಲ್ಲಿ, ಕೈಯಲ್ಲಿ, ಬಾಯಲ್ಲಿ ಭುಸುಗುಡುವ ನಾಗ, ಈ ಗ್ರಾಮದಲ್ಲಿ ನಡೆಯುತ್ತೆ ಹಾವುಗಳ ಜಾತ್ರೆ!
ದೇಶದಲ್ಲಿ ಸುಮಾರು 300 ಜಾತಿಯ ಹಾವುಗಳು ಕಂಡುಬರುತ್ತವೆ. ಇವುಗಳಲ್ಲಿ 60 ಜಾತಿಗಳು ಮಾತ್ರ ವಿಷಕಾರಿಯಾಗಿದೆ. ಆದರೂ ಯಾವುದೇ ಜಾತಿಯ ಹಾವುಗಳನ್ನು ಕಂಡರೂ ನಾವು ಇಂದಿಗೂ ಮಾರುದ್ದು ದೂರ ನಿಲ್ಲುತ್ತೇವೆ. ಆದರೆ ಭಾರತದ ಈ ಹಳ್ಳಿಯಲ್ಲಿ ಮಾತ್ರ ಹಾವಿನ ಜಾತ್ರೆ ನಡೆಯುತ್ತದೆ. ಅಚ್ಚರಿ ಎನಿಸಿದರೂ ಇದು ನಿಜವೇ...
ಇಡೀ ವಿಶ್ವದಲ್ಲಿ ಹಾವು ಕಡಿತದಿಂದ ಭಾರತದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ಆದರೂ ಹಾವುಗಳನ್ನು ಕಂಡರೆ ಭಯ ಪಡೆದ ಗ್ರಾಮಗಳು ನಮ್ಮ ದೇಶದಲ್ಲಿವೆ. ಬಿಹಾರದ ಸಮಸ್ತಿಪುರದ ಸಿಂಘಿಯಾ ಘಾಟ್ ಗ್ರಾಮವು ಪ್ರತಿ ವರ್ಷ ನಾಗ ಪಂಚಮಿಯ ಸಂದರ್ಭದಲ್ಲಿ ವಿಶಿಷ್ಟವಾದ ಮತ್ತು ಅದ್ಭುತವಾದ ಹಾವಿನ ಜಾತ್ರೆಯನ್ನು ಆಯೋಜಿಸುತ್ತದೆ.

ಹೌದು... ಈ ಜಾತ್ರೆಯಲ್ಲಿ ನೂರಾರು ಜನರು ಭಾಗವಹಿಸುತ್ತಾರೆ. ಇದನ್ನು ನೋಡಲು ದೂರದೂರುಗಳಿಂದ ಜನರು ಆಗಮಿಸುತ್ತಾರೆ. ಈ ಜಾತ್ರೆಯ ವಿಶೇಷತೆ ಅಂದರೆ ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ, ಕುತ್ತಿಗೆಯಲ್ಲಿ, ಬಾಯಿಯಲ್ಲೂ ಹಾವುಗಳಿರುತ್ತವೆ. ಈ ಜಾತ್ರೆಯು ಹಾವುಗಳ ಬಗ್ಗೆ ಜನರ ನಂಬಿಕೆ ಮತ್ತು ಗೌರವವನ್ನು ತೋರಿಸುತ್ತದೆ.
ಈ ಜಾತ್ರೆ ನದಿಯಿಂದ ಪ್ರಾರಂಭವಾಗುತ್ತದೆ. ಸ್ಥಳೀಯ ಅರ್ಚಕ ನದಿಯಲ್ಲಿ ಸ್ನಾನ ಮಾಡಿ ಹಾವುಗಳನ್ನು ಹೊರತೆಗೆಯುತ್ತಾನೆ. ಈ ದೃಶ್ಯವು ತುಂಬಾ ರೋಮಾಂಚನಕಾರಿ ಮತ್ತು ಅದ್ಭುತವಾಗಿರುತ್ತದೆ. ಜನರು ಈ ಹಾವುಗಳನ್ನು ಕೊರಳಿಗೆ ಸುತ್ತಿಕೊಂಡು ಜಾತ್ರೆಯುದ್ದಕ್ಕೂ ಸಂಚರಿಸುತ್ತಾರೆ. ಈ ಜಾತ್ರೆಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಹಾವುಗಳೊಂದಿಗೆ ಆಟವಾಡಿ ಪೂಜಿಸುತ್ತಾರೆ.
ನಾಗರ ಜಾತ್ರೆ ಯಾವಾಗ ಆರಂಭವಾಯಿತು..?
ಸುಮಾರು 300 ವರ್ಷಗಳಿಂದ ಈ ಜಾತ್ರೆಯನ್ನು ಆಯೋಜಿಸಲಾಗುತ್ತಿದ್ದು, ಈ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ಈ ಜಾತ್ರೆಯಲ್ಲಿ ಭಾಗವಹಿಸುವ ಜನರು ಹಾವುಗಳನ್ನು ಪೂಜಿಸುವುದರಿಂದ ತಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಈ ಜಾತ್ರೆಯ ಮತ್ತೊಂದು ಆಕರ್ಷಣೆ ಅಂದರೆ ಇಲ್ಲಿ ಹಾವುಗಳೊಂದಿಗೆ ವಿವಿಧ ರೀತಿಯ ಆಟಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಇದು ನೋಡುಗರಿಗೆ ಮನರಂಜನೆಯನ್ನು ನೀಡುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಇತ್ತೀಚೆಗೆ ಈ ಜಾತ್ರೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವೈರಲ್ ವಿಡಿಯೋಗಳಲ್ಲಿ ಹಾವುಗಳೊಂದಿಗೆ ಆಟವಾಡಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಕಂಡು ಬಂದಿದೆ. ಈ ವಿಡಿಯೊವನ್ನು @prateek_bihari ಎಂಬ ಬಳಕೆದಾರರಿಂದ ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ.
ಈ ವಿಡಿಯೋವನ್ನು ಇದುವರೆಗೆ 5 ಕೋಟಿ 24 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 1.8 ದಶಲಕ್ಷಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. 1.5 ಮಿಲಿಯನ್ ಜನರು ಇದನ್ನು ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋಗೆ ಬಳಕೆದಾರರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಜನರ ಪ್ರತಿಕ್ರಿಯೆ ಏನು?
ಈ ವಿಡಿಯೋಗಳಿಗೆ ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್ ಮಾಡುವಾಗ ಒಬ್ಬ ಬಳಕೆದಾರ ಹೀಗೆ ಬರೆದಿದ್ದಾರೆ- 'ಅವರೆಲ್ಲರಿಗೂ ತಲಾ ಒಂದೊಂದು ನಾಗರಹಾವು ನೀಡಬೇಕು' ಎಂದು ಹಾಸ್ಯ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿ, "ಇದು ನಿಜವಾಗಿಯೂ ವಿಚಿತ್ರವಾದ ಜಾತ್ರೆ" ಎಂದು ಅಚ್ಚರಿಗೊಂಡಿದ್ದಾರೆ. ಇನ್ನೊಬ್ಬ ಬಳಕೆದಾರ 'ಬಿಹಾರದಲ್ಲಿ ಏನು ಬೇಕಾದರೂ ಆಗಬಹುದು' ಎಂದಿದ್ದಾರೆ.
ನಾಗರಹಾವು
ನಾಗರಹಾವು ಎಲಪಿದೇ ವರ್ಗಕ್ಕೆ ಸೇರುವ ವಿಷಪೂರಿತ ಹಾವುವಾಗಿದೆ. ಇದು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇಲಿ, ಮೊಲ, ಕಪ್ಪೆ, ಪಕ್ಷಿ ಮರಿಗಳನ್ನು ತಿನ್ನುವ ನಾಗರಹಾವಿನ ಇದರ ವಿಷ ಶಕ್ತಿಶಾಲಿ ನ್ಯೂರೋಟಾಕ್ಸಿನ್‍ಗಳನ್ನೊಳಗೊಂಡಿದೆ. ಈ ವಿಷ ಸ್ನಾಯು ಮತ್ತು ಉಸಿರು ಅಥವಾ ಹೃದಯಾಘಾತದ ಮೇಲೆ ಹೆಚ್ಚು ಪರಿಣಾಮವುಂಟುಮಾಡುತ್ತದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications