ಶಾಲಾ ಬ್ಯಾಗ್‌ನಲ್ಲೇ ಚಾಪೆ ಆವಿಷ್ಕಾರ: 9ನೇ ತರಗತಿ ವಿದ್ಯಾರ್ಥಿನಿ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ, ಜಪಾನ್ ಪ್ರವಾಸದ ಅವಕಾಶ

ಸರ್ಕಾರಿ ಶಾಲೆಗಳಲ್ಲಿ ಬೆಂಚ್‌ಗಳಿಲ್ಲದೆ ನೆಲದ ಮೇಲೆಯೇ ಕುಳಿತುಕೊಳ್ಳುವ ವಿದ್ಯಾರ್ಥಿಗಳ ಕಷ್ಟವನ್ನರಿತು 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಅತ್ಯಂತ ಸರಳ, ನಾವೀನ್ಯತೆಯ ಪರಿಹಾರ ಒದಗಿಸಿದ್ದಾರೆ. ಇದೀಗ ಈ ಮಹತ್ವದ ಕಾರ್ಯಕ್ಕೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಶಾಲಾ ಮಕ್ಕಳ ದೈನಂದಿನ ಸಮಸ್ಯೆಗೆ ಅತ್ಯಂತ ಸರಳ ಹಾಗೂ ನಾವೀನ್ಯತೆಯ ಪರಿಹಾರ ಕಂಡುಕೊಂಡ ಬಿಹಾರದ ಸುಪೌಲ್ ಜಿಲ್ಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರಿಯಾ ಕುಮಾರಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅವರು ತಯಾರಿಸಿದ 'Carpet with School bag' (ವಾಟರ್‌ಪ್ರೂಫ್ ಬ್ಯಾಗ್ ಮತ್ತು ಚಾಪೆ) ಆವಿಷ್ಕಾರಕ್ಕೆ 'ಬಾಲ ವೈಜ್ಞಾನಿಕ' ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇನ್ನೂ ಈ ಸಾಧನೆಯಿಂದಾಗಿ ಅವರು ಜಪಾನ್‌ಗೆ ಭೇಟಿ ನೀಡಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಕಲಿಯುವ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ.

Bihar Girl Priya Kumari Wins National Award for Innovative School Bag Gets Japan Trip Huge Viral

ಯಾರು ಈ ಪ್ರಿಯಾ ಕುಮಾರಿ?

ಪ್ರಿಯಾ ಕುಮಾರಿ ಬಿಹಾರದ ಸುಪೌಲ್ ಜಿಲ್ಲೆಯ ಕಿಸನ್‌ಪುರ ಬ್ಲಾಕ್‌ನ ಫುಲ್ಕಹಾ ಗ್ರಾಮದ ನಿವಾಸಿ. ಅವರು ಅಲ್ಲಿನ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಿಯಾ ಅವರ ತಂದೆ ಶಿವಶಂಕರ್ ಮಂಡಲ್ ಹಾಗೂ ತಾಯಿ ಸಂಜೀತಾ ಕುಮಾರಿ ಇಬ್ಬರೂ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ಇಡೀ ದೇಶದ ಗಮನ ಸೆಳೆದ ಪ್ರಿಯಾ

ಗ್ರಾಮೀಣ ಭಾಗದ ಮತ್ತು ಹಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಡೆಸ್ಕ್ ಅಥವಾ ಬೆಂಚ್‌ಗಳ ಕೊರತೆ ಇರುತ್ತದೆ. ಇದರಿಂದ ಮಕ್ಕಳು ಧೂಳಿನಿಂದ ಕೂಡಿದ ನೆಲದ ಮೇಲೆಯೇ ಕುಳಿತುಕೊಳ್ಳಬೇಕಾದ ಸ್ಥಿತಿ ಇರುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಿಯಾ ತಮ್ಮ ಮಾರ್ಗದರ್ಶಕ ಶಿಕ್ಷಕ ಮಹೇಶ್ವರಿ ಪ್ರಸಾದ್ ಅವರ ನೆರವಿನಿಂದ ಈ ವಿಶೇಷ ಬ್ಯಾಗ್ ಅನ್ನು ತಯಾರಿಸಿ ಇಡೀ ದೇಶದ ಗಮನ ಸೆಳೆದಿದ್ದಾರೆ.

ಇವು ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿವೆ?

* ಇದು ಸಂಪೂರ್ಣವಾಗಿ ವಾಟರ್‌ಪ್ರೂಫ್ ಬ್ಯಾಗ್ ಆಗಿದ್ದು, ಮಳೆಗಾಲದಲ್ಲೂ ಪುಸ್ತಕಗಳು ಒದ್ದೆಯಾಗದಂತೆ ರಕ್ಷಿಸುತ್ತದೆ.

* ಬ್ಯಾಗ್‌ನೊಂದಿಗೆ ಒಂದು ಮಡಚಬಹುದಾದ ಚಾಪೆಯನ್ನು ಜೋಡಿಸಲಾಗಿದೆ. ಬೆಂಚ್‌ಗಳಿಲ್ಲದ ತರಗತಿಯಲ್ಲಿ ಇದನ್ನು ಸುಲಭವಾಗಿ ತೆರೆದು ನೆಲದ ಮೇಲೆ ಹಾಸಿ ಕುಳಿತುಕೊಳ್ಳಬಹುದು.

* ತರಗತಿ ಮುಗಿದ ನಂತರ ಚಾಪೆಯನ್ನು ಮಡಚಿ ಸುಲಭವಾಗಿ ಬ್ಯಾಗ್‌ನೊಳಗೆ ಇಡಬಹುದು. ಇದು ವಿದ್ಯಾರ್ಥಿಗಳ ನೈರ್ಮಲ್ಯ ಮತ್ತು ಆರಾಮದಾಯಕ ಕಲಿಕೆಗೆ ನೆರವಾಗುತ್ತದೆ.

ರಾಷ್ಟ್ರೀಯ ಗೌರವದೊಂದಿಗೆ ಜಪಾನ್ ಪ್ರವಾಸದ ಅವಕಾಶ

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ 'ಇನ್‌ಸ್ಪೈರ್ ಅವಾರ್ಡ್ಸ್ - ಮಾನಕ್' (INSPIRE Awards - MANAK) ಯೋಜನೆಯಡಿ ನಡೆದ 12ನೇ ರಾಷ್ಟ್ರೀಯ ಮಟ್ಟದ ಪ್ರದರ್ಶನ ಮತ್ತು ಯೋಜನಾ ಸ್ಪರ್ಧೆಯಲ್ಲಿ ಸಾವಿರಾರು ಬಾಲ ವಿಜ್ಞಾನಿಗಳು ಭಾಗವಹಿಸಿದ್ದರು. ಇದರಲ್ಲಿ ಪ್ರಿಯಾ ಅವರ 'ಕಾರ್ಪೆಟ್ ವಿತ್ ಸ್ಕೂಲ್ ಬ್ಯಾಗ್' ಅತ್ಯುತ್ತಮ ನಾವೀನ್ಯತೆಗಳಲ್ಲಿ ಒಂದಾಗಿ ಆಯ್ಕೆಯಾಗಿದ್ದು, ರಾಷ್ಟ್ರೀಯ ಪ್ರಶಸ್ತಿ ಪಡೆದ 62 ಬಾಲ ವಿಜ್ಞಾನಿಗಳಲ್ಲಿ ಪ್ರಿಯಾ ಕೂಡ ಒಬ್ಬರಾಗಿದ್ದಾರೆ.

ಈ ರಾಷ್ಟ್ರೀಯ ಪ್ರಶಸ್ತಿಯ ಫಲವಾಗಿ ಪ್ರಿಯಾ ಕುಮಾರಿ ಅವರಿಗೆ ಜಪಾನ್‌ಗೆ ತೆರಳಿ ಅಲ್ಲಿನ ಉನ್ನತ ತಂತ್ರಜ್ಞಾನ, ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳನ್ನು ಹತ್ತಿರದಿಂದ ತಿಳಿಯುವ ಹಾಗೂ ಅನುಭವ ಪಡೆಯುವ ಅಪರೂಪದ ಅವಕಾಶ ಸಿಕ್ಕಿದೆ. ಗ್ರಾಮೀಣ ಭಾಗದ ಸಮಸ್ಯೆಗೆ ಸರಳ ಪರಿಹಾರ ಕಂಡುಕೊಂಡ ಪ್ರಿಯಾ ಅವರ ಈ ಸಾಧನೆಗೆ ಬಿಹಾರ ಶಿಕ್ಷಣ ಯೋಜನೆ ಮಂಡಳಿ ಸೇರಿದಂತೆ ಇಡೀ ದೇಶವೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ, ಇಂತಹ ಇನ್ನೂ ಹೆಚ್ಚೆಚ್ಚು ಪ್ರತಿಭೆಗಳು ಉದಯಿಸಲಿ. ಇದರಿಂದ ದೇಶಕ್ಕೆ ದೊಡ್ಡ ಮಟ್ಟದ ಹೆಸರು ಬರಲಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಒಟ್ಟಿನಲ್ಲಿ ಇವರ ಈ ಸಾಧನೆ ಪ್ರೇರಣದಾಯಕವಾಗಿದೆ ಎಂದು ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+