Bihar Exit Poll Results: ಬಿಹಾರದಲ್ಲಿ ಬಿರುಸಿನ ಮತದಾನ, ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಹೀಗಿದೆ
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ನವೆಂಬರ್ 14ರಂದು ಚುನಾವಣಾ ಫಲಿತಾಂಶಗಳನ್ನು ಘೋಷಿಸುವ ನಿರೀಕ್ಷೆಯಿದೆ. ನವೆಂಬರ್ 6ರಂದು ಮೊದಲ ಹಂತದಲ್ಲಿ 18 ಜಿಲ್ಲೆಗಳ 121 ಕ್ಷೇತ್ರಗಳಲ್ಲಿ ಶೇ 65.08ರಷ್ಟು ಮತದಾನ ನಡೆದಿತ್ತು. ನವೆಂಬರ್ 11ರಂದು ಮಂಗಳವಾರ ಎರಡನೇ ಹಂತದಲ್ಲಿ 20 ಜಿಲ್ಲೆಗಳ ಉಳಿದ 122 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಚುನಾವಣೆಗೆ ತೆರೆ ಬೀಳುತ್ತಿದ್ದಂತೆ ಹಿನ್ನೆಲೆ ಚುನಾವಣೋತ್ತರ ಸಮೀಕ್ಷೆಗಳ (ಎಕ್ಸಿಟ್ ಪೋಲ್) ಫಲಿತಾಂಶಗಳು ಬಿಹಾರದಲ್ಲಿ ಪಟ್ಟಕ್ಕೇರುವುದು ಯಾರು? ಎಂದು ಭವಿಷ್ಯ ನುಡಿದಿವೆ.
ಸಿವೋಟರ್, ಆಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸೇರಿದಂತೆ ಇತರರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬುದರ ಕುರಿತು ಸಮೀಕ್ಷೆ ನಡೆಸಿದ್ದಾರೆ. ಮೊದಲ ಹಂತದಲ್ಲಿ ನಡೆದ ಮತದಾನವು ಬಿಹಾರ ರಾಜ್ಯದ ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ ದಾಖಲಾದ ಅತ್ಯಧಿಕ ಮತದಾನ ಎನ್ನಲಾಗಿದೆ. ಈ ಬಾರಿ ಮೊದಲಿಗಿಂತಲೂ ಹೆಚ್ಚಿನ ಮಂದಿ ಮತ ಹಾಕಲು ಮುಂದೆ ಬಂದಿದ್ದಾರೆ. ಇಂದು ಎರಡನೇ ಹಂತದ ಮತದಾನ ಮುಗಿದ ನಂತರ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬರಲಿದೆ. ಸಂಜೆ 6.30ರ ನಂತರ ಈ ಭವಿಷ್ಯವಾಣಿಗಳು ಹೊರಬರುವ ಸಾಧ್ಯತೆಯಿದೆ.
ಬಿಹಾರ ಚುನಾವಣೆ ಐತಿಹಾಸಿಕ: ಚುನಾವಣಾ ಆಯುಕ್ತ

ಮಹಾಘಟಬಂಧನ್ ಸರ್ಕಾರ ರಚನೆ ಖಚಿತ


ಎನ್‌ಡಿಎಗೆ ಪೂರ್ಣ ಬಹುಮತ: ಟೈಮ್ಸ್ ನೌ ಜೆವಿಸಿ

















Click it and Unblock the Notifications