ಬಿಹಾರ ಮೂರನೇ ಹಂತದ ಸಮರ, ಲಾಲೂ, ನಿತೀಶ್ ಮತದಾನ
ಪಾಟ್ನಾ, ಅ.28: ಬಿಹಾರ ವಿಧಾನಸಭೆಯ ಮೂರನೇ ಹಂತದ ಮತದಾನ ಬುಧವಾರ ಆರಂಭಗೊಂಡಿದೆ. ಬೆಳಗ್ಗೆ 7 ಗಂಟೆಯಿಂದ 32 ಕ್ಷೇತ್ರಗಳಲ್ಲಿ ಮತದಾನ ಜಾರಿಯಲ್ಲಿದೆ.50 ಕ್ಷೇತ್ರಗಳಲ್ಲಿ ಹೈ ಫ್ರೊಫೈಲ್ ನಾಯಕರಾದ ಲಾಲೂ, ನಿತೀಶ್ ಸೇರಿದಂತೆ 808 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆಯಾಗುತ್ತಿದೆ. ಫಲಿತಾಂಶಕ್ಕಾಗಿ ನವೆಂಬರ್ 8(ಭಾನುವಾರ) ರ ತನಕ ಕಾಯಬೇಕಾಗಿದೆ.
ಮೂರನೇ ಹಂತದ ಮತದಾನದಲ್ಲಿ 11 ಗಂಟೆ ವೇಳೆಗೆ ಶೇ 20ರಷ್ಟು ಮಾತ್ರ ಮತದಾನವಾಗಿದೆ.
ಬಿಹಾರ ವಿಧಾನಸಭೆಯ ಮೊದಲ ಹಂತದ ಮತದಾನ ಅಕ್ಟೋಬರ್ 12ರಂದು 49 ಕ್ಷೇತ್ರದಲ್ಲಿ ನಡೆಯಿತು. ಸುಮಾರು ಶೇ 57ರಷ್ಟು ಮತದಾನವಾಗಿತ್ತು. ಅಕ್ಟೋಬರ್ 16ರಂದು ನಡೆದ ಎರಡನೇ ಹಂತದ ಮತದಾನದಲ್ಲಿ ಶೇ 55ರಷ್ಟು ಮತದಾನವಾಗಿತ್ತು. ಒಟ್ಟು 81 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ. [ನಿತೀಶ್ ಕಿವಿಯಲ್ಲಿ ಮಂತ್ರವಾದಿ ಹೇಳಿದ್ದೇನು?]
243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಶಾಸಕರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಾಗಿದೆ. ಒಟ್ಟು ಐದು ಹಂತಗಳಲ್ಲಿ ಬಿಹಾರದಲ್ಲಿ ಚುನಾವಣಾ ಸಮರ ನಡೆಯಲಿದೆ.

ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಿರೀಕ್ಷೆ ಇದೆ. ಅದರೆ, ಇತ್ತೀಚೆಗೆ ಮಹಾ ಮೈತ್ರಿಕೂಟದಿಂದ ಸಮಾಜವಾದಿ ಪಕ್ಷ ಹಿಂದೆ ಸರಿದಿರುವುದು ಎನ್ ಡಿಎ ಮಿತ್ರ ಪಕ್ಷಗಳಿಗೆ ನೆರವಾಗುವ ಸಾಧ್ಯತೆಯಿದೆ.ಪಕ್ಷಗಳಿಗೆ ನೆರವಾಗುವ ಸಾಧ್ಯತೆಯಿದೆ. [ನಿತೀಶ್, ಲಾಲೂ ಜೋಡಿಯನ್ನು ಬೆಂಡೆತ್ತಿದ ಮೋದಿ]
* ಒಟ್ಟು ಮತದಾರರು: 1,45,85,177 (ಪುರುಷರು: 78,31,388; ಮಹಿಳೆಯರು: 66,86,718; ಲೈಂಗಿಕ ಅಲ್ಪಸಂಖ್ಯಾತರು: 599)
* ಅಭ್ಯರ್ಥಿಗಳು: 808 (71 ಮಹಿಳೆಯರು)
* ಅಭ್ಯರ್ಥಿಗಳ ಪೈಕಿ 215 ಮಂದಿ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ.
Bihar CM Nitish Kumar casts his vote in Patna #BiharPolls pic.twitter.com/BgxFUQS57e
— ANI (@ANI_news) October 28, 2015 ಪ್ರಮುಖ ಅಭ್ಯರ್ಥಿಗಳು : ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್, ತೇಜಸ್ವಿ ಪ್ರಸಾದ್, ಬಿಜೆಪಿ ನಾಯಕ ನಂದ ಕಿಶೋರ್ ಯಾದವ್, ಉಪ ಸ್ಪೀಕರ್ ಅಮರೇಂದ್ರ ಪ್ರತಾಪ್ ಸಿಂಗ್, ಬಿಜೆಪಿ ಮುಖ್ಯ ವಿಪ್ ಅರುಣ್ ಕುಮಾರ್ ಸಿನ್ಹಾ [ಅಂಕಿ ಅಂಶಗಳಲ್ಲಿ ಎರಡನೇ ಹಂತದ ಫೈಟ್]
* ಶ್ರೀಮಂತ ಅಭ್ಯರ್ಥಿ: ಬಿಕ್ರಾಮ್ ಕ್ಷೇತ್ರದ ರಮೇಶ್ ಶರ್ಮ 9,2853,54,696 (928 ಕೋಟಿ ರು), ಯುಗೇಶ್ವರ್ ಮಾಂಝಿ ಹಾಗೂ ಕುಮಾರ್ ರಾಜೀವ್ ಇಬ್ಬರು ಪಕ್ಷೇತರರು ಯಾವುದೇ ಆಸ್ತಿ ಇಲ್ಲ ಎಂದು ಘೋಷಿಸಿದ್ದಾರೆ. ಕೋಟ್ಯಾಧಿಪತಿಗಳ ಪೈಕಿ ಬಿಜೆಪಿಯ 26(34ರಲ್ಲಿ) ಮಂದಿ ಶ್ರೀಮಂತರಿದ್ದಾರೆ. ಬಿಎಸ್ ಪಿ ಹಾಗೂ ಜೆಡಿಯು ತಲಾ 13 ಶ್ರೀಮಂತ ಅಭ್ಯರ್ಥಿಗಳನ್ನು ಹೊಂದಿದೆ.
ವಯೋಮಿತಿ ಅಂತರ: 25 ರಿಂದ 50 ವರ್ಷ ವಯೋಮಿತಿಯ ಅಭ್ಯರ್ಥಿಗಳು ಶೇ 72ರಷ್ಟು 576.
51 ರಿಂದ 80 ವರ್ಷ ವಯೋಮಿತಿಯ ಅಭ್ಯರ್ಥಿಗಳು ಶೇ 28 ರಷ್ಟು 226.
Senior citizen who was bitten by monkey outside a polling booth in Bakhtiarpur, casts her vote #BiharPolls pic.twitter.com/ijvCXkfLor
— ANI (@ANI_news) October 28, 2015 ಪಕ್ಷವಾರು: ಬಿಜೆಪಿ 34, ಬಿಎಸ್ ಪಿ : 47, ಸಿಪಿಐ : 19, ಸಿಪಿಎಂ: 7, ಕಾಂಗ್ರೆಸ್ : 7, ಜೆಡಿಯು : 18, ಎನ್ ಸಿಪಿ: 2, ಎಲ್ ಜೆಪಿ: 10, ಆರ್ ಎಲ್ ಎಸ್ ಪಿ: 2, ಇತರೆ : 283. [ಮೊದಲ ಹಂತದ ಸಮರದ ಅಂಕಿ ಅಂಶ]
ಒಟ್ಟು 50 ಕ್ಷೇತ್ರ, 6 ಜಿಲ್ಲೆ: ಭೋಜ್ಪುರ್, ಬಾಕ್ಸಾರ್, ನಲಂದಾ, ಪಾಟ್ನಾ, ಸರಣ್, ವೈಶಾಲಿ.
ಮತದಾನ ಕೇಂದ್ರ: 14,170
* 243 ಅಸೆಂಬ್ಲಿ ಸ್ಥಾನಗಳ ಬಿಹಾರ ಚುನಾವಣೆ ಫಲಿತಾಂಶ ನವೆಂಬರ್ 8 (ಭಾನುವಾರ) ನಡೆಯಲಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications