ಮೋದಿ ಜೊತೆ ಎಕ್ಸಿಟ್ ಪೋಲ್ ನಡೆಸಿದ ಮಾಧ್ಯಮಗಳಿಗೂ ಮುಖಭಂಗ
ನವದೆಹಲಿ, ನ 9: ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದ ಬಿಹಾರ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ನಿತೀಶ್, ಲಾಲೂ ಮತ್ತು ಮೋದಿ ನಡುವೆ ' ನಾನಾ ನೀನಾ'ಎನ್ನುವ ಜಿದ್ದಾಜಿದ್ದಿನ ಹೋರಾಟದಲ್ಲಿ ಮೋದಿ ಮುಖಭಂಗ ಅನುಭವಿಸಿದ್ದಾರೆ.
ಜೊತೆಗೆ, ವಿವಿಧ ವಾಹಿನಿಗಳು, ಮಾಧ್ಯಮಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಕೂಡಾ ಠುಸ್ ಆಗಿದೆ. ಬಹುಷಃ ಪ್ರಧಾನಿಯೊಬ್ಬರು ಈ ಮಟ್ಟಿಗೆ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಉದಾಹರಣೆಗಳು ಅಪರೂಪ ಎನ್ನುವಂತೆ ಪ್ರಧಾನಿ ಮೋದಿ ಬಿಹಾರದ ಚುನಾವಣಾ ಪ್ರಚಾರದ ಆಖಾಡಕ್ಕೆ ನೇರವಾಗಿ ಇಳಿದಿದ್ದರು. ಬಿಹಾರಕ್ಕೆ ಘೋಷಿಸಿದ್ದ ಲಕ್ಷ ಕೋಟಿ ರೂಪಾಯಿ ಸ್ಪೆಷಲ್ ಪ್ಯಾಕೇಜ್ ವರ್ಕೌಟ್ ಆಗಿಲ್ಲ.
ಲಾಲೂ ವಿರುದ್ದ ಡಿಎನ್ಎ ಪದಪ್ರಯೋಗ, ದಾದ್ರಿ ಘಟನೆ, ಅಸಹಿಷ್ಣುತೆ, ಸಿಕ್ಕಾಪಟ್ಟೆ ಕೈಕೊಟ್ಟ ಅಲ್ಪಸಂಖ್ಯಾತ ವೋಟ್ ಬ್ಯಾಂಕ್ ಮುಂತಾದ ರಾಜಕೀಯ ಲೆಕ್ಕಾಚಾರಗಳು, ಬಿಜೆಪಿ ನೇತೃತದ ಎನ್ಡಿಎ ಮೈತ್ರಿಕೂಟಕ್ಕೆ ಇನ್ನಿಲ್ಲದಂತೇ ಮುಜುಗರಕ್ಕೀಡಾಗುವಂತೆ ಮಾಡಿತು. (ಬಿಹಾರ: ನಿತೀಶ್ ಹ್ಯಾಟ್ರಿಕ್, ನಡೆಯಲಿಲ್ಲ ಮೋದಿ ಟ್ರಿಕ್)
ಪ್ರಾಥಮಿಕ ವರದಿ ಆಧರಿಸಿ ಬಿಜೆಪಿ ಹೆಡ್ ಕ್ವಾಟ್ರಸ್ ನಲ್ಲಿ ಪಟಾಕಿ ಹೊಡೆದಿದ್ದು ವ್ಯರ್ಥವಾಯಿತು, ನೂರು ಕೆಜಿ ಸ್ವೀಟ್ ಕಹಿಯಾಯಿತು, ಮೈತ್ರಿಕೂಟ ಬಯಸಿದರೆ ಮುಖ್ಯಮಂತ್ರಿಯಾಗಲು ಸಿದ್ದ ಎನ್ನುವ ಮಾಂಝಿ ಹೇಳಿಕೆ ನಗೆಪಟಾಲಿಗೆ ಗುರಿಯಾಯಿತು.
ಕೊನೆಯ ಹಂತದ ಚುನಾವಣೆ ಮುಗಿದ ಕೂಡಲೇ ವಿವಿಧ ಮಾಧ್ಯಮಗಳು, ವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಮಗುದೊಮ್ಮೆ ನಂಬಲರ್ಹವೇ ಎನ್ನುವಂತೆ ಬಿಹಾರದ ಮತದಾರ ಜನಾದೇಶ ನೀಡಿದ್ದಾನೆ.
ಏಕ್ಸಿಸ್ ಮಿಡಿಯಾ ಫಲಿತಾಂಶಕ್ಕೆ ಹತ್ತಿರವಾದ ಸಮೀಕ್ಷಾ ವರದಿಯನ್ನು ನೀಡಿತ್ತು. ಆದರೆ, ಸಿಎನ್ಎನ್ - ಐಬಿಎನ್ ಈ ವರದಿಯನ್ನು ಪ್ರಕಟಿಸಿರಲಿಲ್ಲ ಎಂದು ವರದಿಯಾಗಿದೆ.
ಬಿಹಾರ ಅಸೆಂಬ್ಲಿ ಚುನಾವಣೆ ಅಂತಿಮ ಫಲಿತಾಂಶ
ಒಟ್ಟು ಸ್ಥಾನಗಳು : 243d
ಬಹುಮತಕ್ಕೆ ಬೇಕಾಗಿರುವುದು : 122
ಎನ್ಡಿಎ ಮೈತ್ರಿಕೂಟ : 59
ಮಹಾಮೈತ್ರಿಕೂಟ : 178
ಇತರರು : 06
ಮಾಧ್ಯಮಗಳ ಮತಗಟ್ಟೆ ಸಮೀಕ್ಷೆ, ಹೊರಬಿದ್ದ ಫಲಿತಾಂಶ ಹೇಗಿತ್ತು, ಸ್ಲೈಡಿನಲ್ಲಿ..

ಟುಡೇಸ್ ಚಾಣಕ್ಯ
ಮತಗಟ್ಟೆ ಸಮೀಕ್ಷೆ ವಿಚಾರದಲ್ಲಿ ಹೆಚ್ಚುಕಮ್ಮಿ ಹತ್ತಿರದ ಫಲಿತಾಂಶ ನೀಡುವುದಕ್ಕೆ ಹೆಸರು ಪಡೆದಿದ್ದ ಚಾಣಕ್ಯ ವರದಿ ಈ ಬಾರಿ ಕಂಪ್ಲೀಟ್ ಉಲ್ಟಾ ಹೊಡೆದಿದೆ. ಎನ್ಡಿಎ ಮೈತ್ರಿಕೂಟಕ್ಕೆ 155 ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಚಾಣಕ್ಯ ಸಮೀಕ್ಷೆಯಲ್ಲಿ ಹೇಳಲಾಗಿತ್ತು, ಆದರೆ ಮೈತ್ರಿಕೂಟಕ್ಕೆ ಲಭಿಸಿದ್ದು 59 ಸ್ಥಾನ. ಜೊತೆಗೆ, ಮಹಾಮೈತ್ರಿಕೂಟಕ್ಕೆ 83 ಸ್ಥಾನದ ಸಾಧ್ಯತೆಯಿಂದಿತ್ತು, ಆದರೆ ಮಹಾಮೈತ್ರಿಕೂಟಕ್ಕೆ 178 ಸ್ಥಾನ ಲಭಿಸಿದೆ.

ಇಂಡಿಯಾ ಟುಡೇ - ಸಿಸಿರೋ
ಹೇಳಿದ್ದು
ಎನ್ಡಿಎ : 113-127
ಮಹಾಮೈತ್ರಿಕೂಟ : 111-123
ಇತರರು : 04-08
ಸಿಸಿರೋ ಸಹಭಾಗಿತ್ವದೊಂದಿಎ ಇಂಡಿಯಾ ಟುಡೇ ನಡೆಸಿದ ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆ ಹುಸಿಯಾಯಿತು. ಯಾವ ಮೈತ್ರಿಕೂಟಕ್ಕೂ ವಾಹಿನಿ ನೀಡಿದ್ದ ಸಮೀಕ್ಷೆ ಹತ್ತಿರವಾಗಿಲ್ಲ.

ಇಂಡಿಯಾ ಟಿವಿ - ಸಿವೋಟರ್
ಹೇಳಿದ್ದು
ಎನ್ಡಿಎ : 111
ಮಹಾಮೈತ್ರಿಕೂಟ : 122
ಇತರರು : 10
ಸಮೀಕ್ಷೆಯ ವಿಚಾರದಲ್ಲಿ ಹಲವಾರು ಫಲಿತಾಂಶಗಳನ್ನು ನೀಡಿರುವ ಇತಿಹಾಸ ಹೊಂದಿರುವ ಇಂಡಿಯಾ ಟಿವಿ - ಸಿವೋಟರ್ ಸಮೀಕ್ಷೆ ಬಿಹಾರ ಅಸೆಂಬ್ಲಿ ಚುನಾವಣೆಯ ವಿಚಾರದಲ್ಲಿ ಹತ್ತಿರಕ್ಕೆ ದೂರವಾಗಿದೆ.

ನ್ಯೂಸ್ ನೇಶನ್ - ಸಿಎನ್ ಎಕ್ಸ್ - ನ್ಯೂಸ್ ಎಕ್ಸ್
ನ್ಯೂಸ್ ನೇಶನ್ ಹೇಳಿದ್ದು
ಎನ್ಡಿಎ : 115-119
ಮಹಾಮೈತ್ರಿಕೂಟ : 120-124
ಇತರರು : 03 - 05
ಸಿಎನ್ ಎಕ್ಸ್ - ನ್ಯೂಸ್ ಎಕ್ಸ್ ಹೇಳಿದ್ದು
ಎನ್ಡಿಎ : 90-100
ಮಹಾಮೈತ್ರಿಕೂಟ : 130-140
ಇತರರು : 13-23

ಎಬಿಪಿ -ನೀಲ್ಸನ್ ಮತ್ತು ಟೈಮ್ಸ್ ನೌ
ಎಬಿಪಿ -ನೀಲ್ಸನ್
ಎನ್ಡಿಎ : 108
ಮಹಾಮೈತ್ರಿಕೂಟ : 130
ಇತರರು : 05
ಟೈಮ್ಸ್ ನೌ
ಎನ್ಡಿಎ : 111
ಮಹಾಮೈತ್ರಿಕೂಟ : 122
ಇತರರು : 10











Click it and Unblock the Notifications