ಬಿಹಾರ ಚುನಾವಣಾಪೂರ್ವ ಸಮೀಕ್ಷೆ: ಜಿದ್ದಾಜಿದ್ದಿನ ಫೈಟ್

ನವದೆಹಲಿ, ಪಾಟ್ನಾ ಸೆ 16: ಎರಡು ತಿಂಗಳ ಹಿಂದಿನ ಬಿಹಾರದ ಮತದಾರರ ಅಭಿಪ್ರಾಯಕ್ಕೂ ಈಗಿನ ಜನಾಭಿಪ್ರಾಯಕ್ಕೂ ವ್ಯತ್ಯಾಸ ಕಂಡುಬರುತ್ತಿದ್ದರೂ, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮತ್ತು ಮಹಾಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಎಬಿಪಿ ನ್ಯೂಸ್ ಮತ್ತು ನೀಲ್ಸನ್ ಸಂಸ್ಥೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ನಿತೀಶ್ - ಲಾಲೂ ನೇತೃತ್ವದ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ ಸಿಗಲಿದೆ ಎಂದು ಹೇಳಲಾಗಿದೆ. (ಬಿಹಾರ ಮತದಾನದ ವೇಳಾಪಟ್ಟಿ)

ಜೊತೆಗೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಮ್ಯಾಜಿಕ್ ನಂಬರ್ ತಲುಪಲು ನಾಲ್ಕು ಸ್ಥಾನಗಳ ಕೊರತೆಯಾಗಲಿದೆ ಎಂದು ಎಬಿಪಿ ನೀಲ್ಸನ್ ತನ್ನ ಸಮೀಕ್ಷೆಯಲ್ಲಿ ಹೇಳಿದೆ.

ಆದರೆ, ಸಮೀಕ್ಷೆಯಲ್ಲಿ ವ್ಯಕ್ತವಾದ ಪ್ರಮುಖವಾದ ಅಂಶವೇನಂದರೆ, ಎರಡು ತಿಂಗಳ ಹಿಂದಿನ ಸಮೀಕ್ಷೆಗೂ, ಇತ್ತೀಚಿನ ಸಮೀಕ್ಷೆಗೂ ಹೋಲಿಸಿದರೆ ನಿತೀಶ್ ಕುಮಾರ್ ಬಣಕ್ಕೆ ಆರು ಸ್ಥಾನ ಕಮ್ಮಿ ಸಿಗಲಿದೆ ಮತ್ತು ಈ ಎಲ್ಲಾ 6 ಸ್ಥಾನಗಳು ಎನ್ಡಿಎ ಮೈತ್ರಿಕೂಟದ ಪಾಲಾಗಲಿದೆ ಎನ್ನುವುದು. (ಸಮೀಕ್ಷೆ: ನಿತೀಶ್ ಗೆ ಮುಖಭಂಗ)

ಸಮೀಕ್ಷೆಯ ಪ್ರಕಾರ ಈಗಲೂ ನಿತೀಶ್ ಕುಮಾರ್ ಜನಪ್ರಿಯ ಸಿಎಂ, ಮುಂದೆ ಓದಿ..

ಒಟ್ಟಾರೆ ವೋಟ್ ಶೇರ್

ಒಟ್ಟಾರೆ ವೋಟ್ ಶೇರ್

ಲೇಟೆಸ್ಟ್ ಸಮೀಕ್ಷೆ ಪ್ರಕಾರ ಜೆಡಿಯು ನೇತೃತ್ವದ ಮಹಾಮೈತ್ರಿಕೂಟಕ್ಕೆ ಶೇ. 43ರಷ್ಟು ಮತಗಳು ಬಂದರೆ, ಎನ್ಡಿಎ ಮೈತ್ರಿಕೂಟಕ್ಕೆ ಶೇ. 39ರಷ್ಟು ಮತಗಳೂ ಸಿಗುವ ಸಾಧ್ಯತೆಯಿದೆ. ಎರಡು ತಿಂಗಳ ಹಿಂದೆ ಎಬಿಪಿ ನಡೆಸಿದ ಸಮೀಕ್ಷೆಗೆ ಹೋಲಿಸಿದರೆ ಎನ್ಡಿಎಗೆ ಶೇಕಡಾ ಏಳರಷ್ಟು ಹೆಚ್ಚಿನ ಮತ ಲಭಿಸಲಿದೆ.

ನೆಕ್ ಟು ನೆಕ್ ಫೈಟ್

ನೆಕ್ ಟು ನೆಕ್ ಫೈಟ್

ಸಮೀಕ್ಷೆಯ ಪ್ರಕಾರ ಎರಡು ಮೈತ್ರಿಕೂಟಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡಲಿದೆ. ನಿತೀಶ್, ಲಾಲೂ ಮತ್ತು ಮೋದಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಬಿಹಾರದ ಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದಂತೆಯೇ ಜನಾಭಿಪ್ರಾಯ ಬದಲಾಗುವ ಸಾಧ್ಯತೆಯಿದೆ.

ಸಮೀಕ್ಷೆಯ ಪ್ರಕಾರ ನಿತೀಶ್ ಈಸ್ ಬೆಸ್ಟ್

ಸಮೀಕ್ಷೆಯ ಪ್ರಕಾರ ನಿತೀಶ್ ಈಸ್ ಬೆಸ್ಟ್

ಎಬಿಪಿ - ನೀಲ್ಸನ್ ಸಮೀಕ್ಷೆಯ ಪ್ರಕಾರ ಮುಖ್ಯಮಂತ್ರಿ ಆಯ್ಕೆಯಲ್ಲಿ ನಿತೀಶ್ ಕುಮಾರ್ ಈಗಲೂ ಮುಂದೆ ಇದ್ದಾರೆ. ನಂತರದ ಸ್ಥಾನ ಸುಶೀಲ್ ಕುಮಾರ್ ಮೋದಿ ಮತ್ತು ಲಾಲೂ ಪ್ರಸಾದ್ ಯಾದವ್ ಗೆ.

ಯಾರಿಗೆ ಎಷ್ಟು ಸ್ಥಾನ?

ಯಾರಿಗೆ ಎಷ್ಟು ಸ್ಥಾನ?

ಒಟ್ಟು ಸ್ಥಾನ : 243
ಮಹಾಮೈತ್ರಿಕೂಟ : 122
ಎನ್ಡಿಎ ಮೈತ್ರಿಕೂಟ 118
ಇತರರಿಗೆ ಕೇವಲ ಮೂರರಿಂದ ನಾಲ್ಕು ಸ್ಥಾನ ಲಭಿಸಲಿದೆ ಎಂದು ಸರ್ವೇಯಲ್ಲಿ ಹೇಳಲಾಗಿದೆ.

ಬಿಹಾರ ಚುನಾವಣೆ

ಬಿಹಾರ ಚುನಾವಣೆ

ಅಕ್ಟೋಬರ್ 12 ಮೊದಲ ಹಂತದ ಮತದಾನ, ಅಕ್ಟೋಬರ್ 16 ಎರಡನೇ ಹಂತದ ಮತದಾನ, ಅಕ್ಟೋಬರ್ 28 : ಮತದಾನ ಮೂರನೇ ಹಂತ, ನವೆಂಬರ್ 1 ನಾಲ್ಕನೇ ಹಂತಕ್ಕೆ ಮತದಾನ, ನವೆಂಬರ್ 5: 5ನೇ ಹಂತದ ಮತದಾನ. ನವೆಂಬರ್ 8 ಭಾನುವಾರ ಎಲ್ಲಾ ಹಂತದ ಮತ ಎಣಿಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+