ಮತ್ತಷ್ಟು ಕುತೂಹಲ ಹುಟ್ಟುಹಾಕಿದ ಬಿಹಾರ ಮತಗಟ್ಟೆ ಸಮೀಕ್ಷೆ
ನವದೆಹಲಿ, ನ 5: ಒಂದು ಕಾಲದಲ್ಲಿ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಚುನಾವಣೆಯೆಂದರೆ ಅದಕ್ಕೆ ರಕ್ತಸಿಕ್ತ ಅಧ್ಯಾಯವಿತ್ತು. ಆದರೆ ಈ ಬಾರಿಯ ಐದು ಹಂತದಲ್ಲಿ ನಡೆದ ಅಸೆಂಬ್ಲಿ ಚುನಾವಣೆ ಅತ್ಯಂತ ಶಾಂತಿಯುತವಾಗಿ ನಡೆಯಿತು. ಥಾಂಕ್ಸ್ ಟು ಚುನಾವಣಾ ಆಯೋಗ.
ಕೊನೆಯ ಹಂತದ ಚುನಾವಣೆ ಗುರುವಾರ ಮುಕ್ತಾಯಗೊಳ್ಳುತ್ತಿದ್ದಂತೇ ವಿವಿಧ ವಾಹಿನಿಗಳ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದೆ.
ಮಾಧ್ಯಮ/ವಾಹಿನಿಗಳ ಸಮೀಕ್ಷೆ ಎಷ್ಟರ ಮಟ್ಟಿಗೆ ನಂಬಲರ್ಹ ಎನ್ನುವುದು ನಂತರದ ಮಾತಾದರೂ, ಮತಗಟ್ಟೆ ಸಮೀಕ್ಷೆಯ ಬಗ್ಗೆ ಸಾರ್ವಜನಿಕರಿಗೆ ವಿಶೇಷ ಕುತೂಹಲ ಇದ್ದೇ ಇದೆ. (ಸಿವೋಟರ್ ಸಮೀಕ್ಷೆ)
ಬಿಹಾರ ಅಸೆಂಬ್ಲಿ ಚುನಾವಣೆಯ ಮತಗಟ್ಟೆ ಸಮೀಕ್ಷೆಯಲ್ಲಿ ವಿವಿಧ ವಾಹಿನಿಗಳು ನೀಡಿರುವ ಫಲಿತಾಂಶ ಬೇರೆ ಬೇರೆಯಾಗಿರುವುದರಿಂದ, ಭಾನುವಾರ (ನ 8) ನಡೆಯಲಿರುವ ಮತಎಣಿಕೆಯ ಮೇಲೆ ಎಲ್ಲರ ಕಣ್ಣು ಈಗ ನೆಟ್ಟಿದೆ.
ಒಟ್ಟು ಸ್ಥಾನಗಳು: 243
ಬಹುಮತಕ್ಕೆ ಬೇಕಾಗಿರುವುದು: 122
ವಿವಿಧ ವಾಹಿನಿಗಳ ಮತಗಟ್ಟೆ ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ ಸಿಗಲಿದೆ, ಮೋದಿ Vs ನಿತೀಶ್, ಲಾಲೂ ಕಾದಾಟದಲ್ಲಿ ಯಾರಿಗೆ ಬಿಹಾರ ಒಲಿಯಲಿದೆ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಟುಡೇಸ್ ಚಾಣಕ್ಯ
ಮತಗಟ್ಟೆ ಸಮೀಕ್ಷೆಯ ವಿಚಾರದಲ್ಲಿ ಹೆಚ್ಚುಕಮ್ಮಿ ಕರಾರುವಕ್ಕಾದ ಫಲಿತಾಂಶ ನೀಡುವುದರಲ್ಲಿ ಹೆಸರುವಾಸಿಯಾಗಿರುವ ಟುಡೇಸ್ ಚಾಣಕ್ಯ - ನ್ಯೂಸ್ 24 ಪ್ರಕಾರ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಜಯ ಲಭಿಸಲಿದೆ.
ಎನ್ಡಿಎ : 155
ಮಹಾಮೈತ್ರಿಕೂಟ : 83
ಇತರರು : 05

ಇಂಡಿಯಾ ಟುಡೇ - ಸಿಸಿರೋ
ಎನ್ಡಿಎ : 113-127
ಮಹಾಮೈತ್ರಿಕೂಟ : 111-123
ಇತರರು : 04-08

ಇಂಡಿಯಾ ಟಿವಿ - ಸಿವೋಟರ್
ಎನ್ಡಿಎ : 111
ಮಹಾಮೈತ್ರಿಕೂಟ : 122
ಇತರರು : 10

ನ್ಯೂಸ್ ನೇಶನ್
ಎನ್ಡಿಎ : 115-119
ಮಹಾಮೈತ್ರಿಕೂಟ : 120-124
ಇತರರು : 03 - 05

ಸಿಎನ್ ಎಕ್ಸ್ - ನ್ಯೂಸ್ ಎಕ್ಸ್
ಎನ್ಡಿಎ : 90-100
ಮಹಾಮೈತ್ರಿಕೂಟ : 130-140
ಇತರರು : 13-23

ಎಬಿಪಿ -ನೀಲ್ಸನ್
ಎನ್ಡಿಎ : 108
ಮಹಾಮೈತ್ರಿಕೂಟ : 130
ಇತರರು : 05

ಟೈಮ್ಸ್ ನೌ
ಎನ್ಡಿಎ : 111
ಮಹಾಮೈತ್ರಿಕೂಟ : 122
ಇತರರು : 10












Click it and Unblock the Notifications