Infosys Narayana Murthy: ಇನ್ಫೋಸಿಸ್ ನಾರಾಯಣ ಮೂರ್ತಿಗೆ ಶಾಕ್, ಕೋಟಿ..ಕೋಟಿ ಲಾಸ್!
ಕೆಲಸ ಮಾಡಿ... ಕೆಲಸ ಮಾಡಿ. ದೇಶ ಉದ್ಧಾರ ಆಗಬೇಕಂದ್ರೆ ಯುವಕರೆಲ್ಲಾ ವಾರಕ್ಕೆ ಏನಿಲ್ಲಾ ಅಂದರೂ 70 ಗಂಟೆಯಾದರೂ ಕೆಲಸ ಮಾಡಬೇಕು ಅಂತ ಹೇಳುತ್ತಲ್ಲೇ ಚರ್ಚೆಗೆ ಗ್ರಾಸವಾಗಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಕೋಟ್ಯಾಂತರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಜೀತಕ್ಕೆ ದುಡಿದಂತೆ ದುಡಿಯಬೇಕು ಎಂಬರ್ಥದಲ್ಲಿ ಮಾತನಾಡಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಮಾತುಗಳಿಗೆ ಯುವಕ ಹಾಗೂ ಯುವತಿಯರು ಕೆಂಡಾಮಂಡಲರಾಗಿದ್ದರು. ಇದೀಗ ನಾರಾಯಣ ಮೂರ್ತಿ ಅವರು ಕೆಲವೇ ನಿಮಿಷಗಳಲ್ಲಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದು. ತಾಸುಗಟ್ಟಲೆ ದುಡಿದರೂ ದುಡ್ಡು ಹೋಯ್ತಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ. ಇಷ್ಟಕ್ಕೂ ನಾರಾಯಣ ಮೂರ್ತಿ ಅವರು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದು ಹೇಗೆ, ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳುವಂತಹದ್ದು ಏನಾಯ್ತು ಎನ್ನುವ ವಿವರ ಇಲ್ಲಿದೆ.
ಇನ್ಫೋಸಿಸ್ ನಾರಾಯಣ ಮೂರ್ತಿ ಅವರನ್ನು ನೋಡಿದರೆ ಕೆಲವರು ಕೆಂಡಾಮಂಡಲರಾಗುತ್ತಿದ್ದಾರೆ. ಇದಕ್ಕೆ ಕಾರಣ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಕೆಲಸದ ಅವಧಿಯ ಬಗ್ಗೆ ಕೊಟ್ಟಿರುವ ಹೇಳಿಕೆ. ವಾರದಲ್ಲಿ ಎರಡು ದಿನ ರಜೆ ಕೊಡ್ತಾರೆ ಎನ್ನುವ ಕಾನ್ಸೆಪ್ಟ್ ನನಗೆ ಶಾಕ್ ಕೊಟ್ಟಿತ್ತು. ವಾರಕ್ಕೆ ಕನಿಷ್ಠ 70 ಗಂಟೆಯಾದರೂ ಕೆಲಸ ಮಾಡಬೇಕು. ಆಗ ಮಾತ್ರ ನಮ್ಮ ದೇಶ ಉದ್ಧಾರ ಆಗೋಕೆ ಸಾಧ್ಯ ಅಂತ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಹೇಳುತ್ತಿದ್ದಾರೆ. ಅದನ್ನು ನಾನು ಸಾಯುವ ವರೆಗೆ ಹೇಳ್ತೀನಿ ಅಂತ ಹೇಳುವ ಮೂಲಕ ಮತ್ತೆ ಮತ್ತೆ ಯುವ ಸಮೂಹಕ್ಕೆ ಅವರು ಟಾರ್ಗೆಟ್ ಆಗುತ್ತಿದ್ದಾರೆ. ಇದರ ನಡುವೆ ಇನ್ಫೋಸಿಸ್ ನಾರಾಯಣ ಮೂರ್ತಿ ಫ್ಯಾಮಿಲಿಗೆ ಕೋಟ್ಯಾಂತರ ರೂಪಾಯಿ ಲಾಸ್ ಆಗಿದೆ.

ಹೌದು ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಫ್ಯಾಮಿಲಿಗೆ ಇದೀಗ ದೊಡ್ಡ ಶಾಕ್ ಎದುರಾಗಿದೆ. ಈ ಮೂಲಕ ಇನ್ಫೋಸಿಸ್ ನಾರಾಯಣ ಅವರ ಫ್ಯಾಮಿಲಿಯು ಕೆಲವೇ ನಿಮಿಷಗಳಲ್ಲಿ ಬರೋಬ್ಬರಿ 1,800 ಕೋಟಿ ರೂಪಾಯಿಯನ್ನು ಕಳೆದುಕೊಂಡಿದೆ. ಷೇರುಮಾರುಕಟ್ಟೆಯಲ್ಲಿ ಲೆಕ್ಕಾಚಾರಗಳು ತಲೆಕೆಳಗಾದ ಬೆನ್ನಲ್ಲೇ ಅವರಿಗೆ ಕೋಟ್ಯಾಂತರ ರೂಪಾಯಿ ಲಾಸ್ ಆಗಿದೆ. ಷೇರು ಮಾರ್ಕೆಟ್‌ನಲ್ಲಿ ಇನ್ಫೋಸಿಸ್‌ನ ಷೇರುಗಳ ಬೆಲೆ ದಿಢೀರ್ ಕುಸಿತ ಕಂಡಿದೆ. ಇನ್ಫೋಸಿಸ್ ಷೇರುಗಳ ಮೇಲೆ ಹೊಡೆತ ಬಿದ್ದಿರೋದು ಅವರ ಇಡೀ ಕುಟುಂಬದವರ ಷೇರು ಬೆಲೆಯ ಮೇಲೆ ಹಾಗೂ ಹಣಕಾಸು ನಷ್ಟಕ್ಕೆ ಕಾರಣವಾಗಿದೆ. ಏಕಾಏಕಿ ಇನ್ಫೋಸಿಸ್‌ನ ಷೇರುಗಳು ಶೇ.6 ರಷ್ಟು ಕೆಳಕ್ಕೆ ಬಿದ್ದಿದೆ.
ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿ ಅವರ ಫ್ಯಾಮಿಲಿಯು ಶೇ.4.02ರಷ್ಟು ಪಾಲನ್ನು ಹೊಂದಿದೆ. ಇದರ ಬೆಲೆಯು ಬರೋಬ್ಬರಿ 32,152 ಕೋಟಿ ರೂಪಾಯಿ ಇದೆ. ಆದರೆ ಈಚೆಗೆ ಷೇರುಮಾರುಕಟ್ಟೆಯಲ್ಲಿ ಇನ್ಫೋಸಿಸ್ ಷೇರುಗಳು ಬರೋಬ್ಬರಿ ಶೇ 6ರಷ್ಟು ಕುಸಿತ ಕಂಡಿದ್ದು. ನಾರಾಯಣ ಮೂರ್ತಿ ಅವರ ಕುಟುಂಬದ ಷೇರಿನಲ್ಲಿ 1,800 ಕೋಟಿ ರೂಪಾಯಿ ನಷ್ಟವಾಗಿದೆ. ಈಗ ಅವರ ಷೇರು ಮೌಲ್ಯವು 30,300 ಕೋಟಿ ರೂಪಾಯಿಗೆ ಇಳಿದಿದ್ದು. ನಾರಾಯಣ ಮೂರ್ತಿ ಫ್ಯಾಮಿಲಿಗೆ ಶಾಕ್ ಆಗಿದೆ.

ಇನ್ಫೋಸಿಸ್ ಷೇರು ಯಾವ ರೀತಿ ಇದೆ ?
ಇನ್ಫೋಸಿಸ್ ಪ್ರತಿಷ್ಠಿತ ಸಂಸ್ಥೆಯಲ್ಲಿ ನಾರಾಯಣಮೂರ್ತಿ ಅವರು ಶೇ. 0.40 ರಷ್ಟು ಷೇರು ಹೊಂದಿದ್ದಾರೆ. ಪತ್ನಿ ಹಾಗೂ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಶೇ 0.92ರಷ್ಟು, ದಂಪತಿಗಳ ಪುತ್ರ ರೋಹನ್ ಮೂರ್ತಿ ಶೇ 1.62 ಮತ್ತು ಪುತ್ರಿ ಅಕ್ಷತಾ ಮೂರ್ತಿ ಶೇ1.04 ರಷ್ಟು ಷೇರು ಇದೆ. ಇನ್ನು ಈಚೆಗೆ ಮೊಮ್ಮಗನ ಹೆಸರಿನಲ್ಲೂ ಷೇರು ಹೂಡಿಕೆ ಮಾಡಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಮೊಮ್ಮಗನ ಹೆಸರಿನಲ್ಲೂ ಕೋಟ್ಯಾಂತರ ರೂಪಾಯಿ ಷೇರು ಇದೆ. ನಾರಾಯಣಮೂರ್ತಿ ಅವರ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿ ಹೆಸರಿನಲ್ಲಿ ಶೇ 0.04 ರಷ್ಟು ಷೇರು ಇದೆ.
100 ಗಂಟೆ ಮಾಡಬಹುದು: ಇಷ್ಟು ದಿನ ನಾರಾಯಣ ಮೂರ್ತಿ ಅವರು ಯುವಕರು 70 ಗಂಟೆ ಕೆಲಸ ಮಾಡಿ ಅಂತ ಹೇಳುತ್ತಿದ್ದರು. ಇದೀಗ ಕೋಟ್ಯಾಂತರ ರೂಪಾಯಿ ನಷ್ಟವಾಗಿರುವುದರಿಂದ ಮುಂದೆ 100 ಗಂಟೆ ಕೆಲಸ ಮಾಡೋಕೆ ಹೇಳಬಹುದು ಅಂತ ಜನ ನಾರಾಯಣ ಮೂರ್ತಿ ಅವರ ಕಾಲೆಳೆದಿದ್ದಾರೆ. ಇನ್ನೂ ಕೆಲವರು ಕರ್ಮ ರಿಟರ್ನ್ ಅಂತ ಹೇಳಿದ್ದಾರೆ.
ಹೌದು ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಇಷ್ಟು ದಿನ 70 ಗಂಟೆ ಕೆಲಸ ಮಾಡಿ ಅಂತ ಹೇಳುತ್ತಿದ್ದರು. ಬಹುಶಃ ಇನ್ಮುಂದೆ ಎಲ್ಲರಿಗೂ 100 ಗಂಟೆಯಾದರೂ ಕೆಲಸ ಮಾಡಿಸಬಹುದು ಅಂತ ವ್ಯಂಗ್ಯವಾಡಿದ್ದಾರೆ.
ಇನ್ನು ಕೆಲವರು ಇದು ಷೇರು ಕುಸಿತ. ಇಂದು ಕುಸಿದರೆ ನಾಳೆ ಬರುತ್ತೆ. ಈ ದುಡ್ಡೆಲ್ಲ ಅವರಿಗೆಲ್ಲ ಒಂದು ಲೆಕ್ಕವಾ ಅಂತಲೂ ಕೇಳಿದ್ದಾರೆ.












Click it and Unblock the Notifications