ಅರ್ಧ ದಾರಿ ಕ್ರಮಿಸಿದ ಕೋವ್ಯಾಕ್ಸಿನ್ ಕೊರೊನಾ ಲಸಿಕೆ 3ನೇ ಹಂತದ ಪ್ರಯೋಗ

ಹೈದರಾಬಾದ್, ಡಿಸೆಂಬರ್ 22: ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಮೂರನೇ ಪ್ರಯೋಗ ಅರ್ಧದಾರಿ ಕ್ರಮಿಸಿದೆ. ಇದುವರೆಗೂ 13 ಸಾವಿರ ಮಂದಿ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿದೆ.ಔಷಧೀಯ ಕಂಪನಿ ತಯಾರಿಸಿರುವ ಸ್ವದೇಶಿ ಕೊವಿಡ್-19 ಲಸಿಕೆ ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗಕ್ಕಾಗಿ 26 ಸಾವಿರ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಈ ಪೈಕಿ ಅರ್ಧದಷ್ಟು ಅಂದರೆ ಸುಮಾರು 13 ಸಾವಿರ ಸ್ವಯಂ ಸೇವಕರ ಮೇಲೆ ಈಗಾಗಲೇ ಯಶಸ್ವಿಯಾಗಿ ಲಸಿಕೆ ಪ್ರಯೋಗಿಸಲಾಗಿದೆ. ಇದರೊಂದಿಗೆ ದೇಶದ ಹಲವೆಡೆ ಕೋವಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಗುರಿ ಸಾಧನೆಯತ್ತ ಮುಂದಾಗಿದೆ.

ದೇಶಾದ್ಯಂತ 26 ಸಾವಿರ ಸ್ವಯಂ ಸೇವಕರಿಗೆ ಲಸಿಕೆ ನೀಡುವ ಗುರಿಯೊಂದಿಗೆ ನವೆಂಬರ್ ಮಧ್ಯಭಾಗದಿಂದ ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗ ಆರಂಭವಾಯಿತು. ಇದು ದೇಶದ ಮೊದಲ ಮತ್ತು ಮೂರನೇ ಹಂತದ ಅತ್ಯಂತ ಪರಿಣಾಮಕಾರಿ ಕೊವಿಡ್- 19 ಲಸಿಕೆಯ ಅಧ್ಯಯನವಾಗಿದೆ.

ಲಸಿಕೆ ಸುರಕ್ಷಿತ, ಹೆಚ್ಚು ಪರಿಣಾಮಕಾರಿ

ಲಸಿಕೆ ಸುರಕ್ಷಿತ, ಹೆಚ್ಚು ಪರಿಣಾಮಕಾರಿ

ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಭಾರತೀಯ ಲಸಿಕೆಯನ್ನು ಹೊರತರುವಲ್ಲಿ ನಮಗೆ ಸಹಾಯ ಮಾಡಿದ ಎಲ್ಲಾ 13000 ಸ್ವಯಂಸೇವಕರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿರುವ ಭಾರತ್ ಬಯೋಟೆಕ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುಚಿತ್ರಾ ಎಲಾ ಶೀಘ್ರದಲ್ಲಿಯೇ 26 ಸಾವಿರ ಜನರ ಮೇಲೆ ಪ್ರಯೋಗ ಮಾಡಲಾಗುವುದು ಎಂದಿದ್ದಾರೆ. ಇದು ಭಾರತದಲ್ಲಿ ಇದುವರೆಗೆ ನಡೆದ ಅಭೂತಪೂರ್ವ ಲಸಿಕೆ ಪ್ರಯೋಗವಾಗಿದೆ ಮತ್ತು ಲಸಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಅತೀವ ಸಂತೋಷವಾಗುತ್ತಿದೆ.

ಸಾವಿರ ವಿಷಯಗಳಲ್ಲಿ ಕೋವ್ಯಾಕ್ಸಿನ್ ದಕ್ಷತೆ ಮೌಲ್ಯಮಾಪನ

ಸಾವಿರ ವಿಷಯಗಳಲ್ಲಿ ಕೋವ್ಯಾಕ್ಸಿನ್ ದಕ್ಷತೆ ಮೌಲ್ಯಮಾಪನ

ಈ ಹಿಂದಿನ ಹಂತ 1 ಮತ್ತು ಹಂತ 2ರ ಕ್ಲಿನಿಕಲ್ ಪ್ರಯೋಗಗಳಲ್ಲಿ ಅಂದಾಜು 1 ಸಾವಿರ ವಿಷಯಗಳಲ್ಲಿ ಕೋವಾಕ್ಸಿನ್ ದಕ್ಷತೆಯನ್ನು ಮೌಲ್ಯಮಾಪನ ಮಾಡಲಾಗಿತ್ತು.ಇದು ಸುರಕ್ಷತೆಯ ಭರವಸೆ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಯ ಫಲಿತಾಂಶ ನೀಡಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಶೀಲಿಸಿದ ವೈಜ್ಞಾನಿಕ ನಿಯತಕಾಲಿಕಗಳಲ್ಲಿಯೂ ಈ ಪ್ರಯೋಗ ಸ್ವೀಕರಿಸಲ್ಪಟ್ಟಿತ್ತು.

ದೇಶದ ಮೊದಲ ಲಸಿಕೆ

ದೇಶದ ಮೊದಲ ಲಸಿಕೆ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) - ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸುತ್ತಿರುವ ಭಾರತ್ ಬಯೋಟೆಕ್ ಕೊವಾಕ್ಸಿನ್ ದೇಶದ ಮೊದಲ ಲಸಿಕೆಯಾಗಿದೆ.

ರೂಪಾಂತರ ವೈರಸ್‌ಗೂ ಲಸಿಕೆ

ರೂಪಾಂತರ ವೈರಸ್‌ಗೂ ಲಸಿಕೆ

ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ತೀವ್ರ ಸಾಂಕ್ರಾಮಿಕ ಸ್ವರೂಪ ಹೊಂದಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರಕ್ಕೆ ಆರು ವಾರಗಳಲ್ಲಿ ಲಸಿಕೆ ಸಿದ್ಧಪಡಿಸಬಹುದು ಎಂದು ಬಯೋಎನ್‌ಟೆಕ್ ಸಂಸ್ಥೆ ಹೇಳಿದೆ. ಬ್ರಿಟನ್‌ನಲ್ಲಿ ರೂಪಾಂತರ ತಳಿಯ ವಿರುದ್ಧ ತನ್ನ ಲಸಿಕೆ ಪರಿಣಾಮಕಾರಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕರೊಬ್ಬರು ಹೇಳಿದ್ದಾರೆ. ವೈಜ್ಞಾನಿಕವಾಗಿ ಈ ಲಸಿಕೆಯಲ್ಲಿನ ಅತೀವ ಪ್ರತಿರಕ್ಷಣಾ ಸಾಮರ್ಥ್ಯವು ಹೊಸ ಕೊರೊನಾ ವೈರಸ್ ಸ್ವರೂಪವನ್ನು ಸಮರ್ಥವಾಗಿ ಎದುರಿಸಬಲ್ಲ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+