ನಿವೃತ್ತ ಬಸ್ ಚಾಲಕನ ಮನೆಯಲ್ಲಿ ಪತ್ತೆಯಾಯ್ತು 28.5 ಕೋಟಿ ನಗದು, 20 ಕೋಟಿ ರೂ. ಚಿನ್ನ

ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿ ಮರಳು ಮತ್ತು ಕಲ್ಲು ಮಾಫಿಯಾ ವಿರುದ್ಧ ಸಮರ ಸಾರಿದ್ದ ಪೊಲೀಸರಿಗೆ ಸಿಕ್ಕಿದ್ದು ಕಲ್ಪನೆಗೂ ಮೀರಿದ ಬೇನಾಮಿ ಸಂಪತ್ತು. ನಿವೃತ್ತ ಸರ್ಕಾರಿ ಬಸ್ ಚಾಲಕನೊಬ್ಬನ ಮನೆ ಮೇಲೆ ಪೊಲೀಸರು ನಡೆಸಿದ ಹಠಾತ್ ದಾಳಿಯಲ್ಲಿ ಬರೋಬ್ಬರಿ 28.5 ಕೋಟಿ ರೂ. ನಗದು ಹಾಗೂ 20 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದು, ಇದು ಪೊಲೀಸರನ್ನೇ ಬೆಚ್ಚಿಬೇಳಿಸಿದೆ.

ಸಾಮಾನ್ಯ ಬಸ್‌ ಚಾಲಕನಾಗಿದ್ದ ವ್ಯಕ್ತಿಯೊಬ್ಬನ ಮನೆಯಲ್ಲಿ ಕುಬೇರನ ಸಂಪತ್ತೇ ಪತ್ತೆಯಾಗಿದ್ದು, ಇದು ಅಕ್ರಮ ಮರಳು ಗಣಿಗಾರಿಕೆ ಮತ್ತು ರಾಜಕೀಯ ನಂಟಿನ ಕರಾಳ ಮುಖವನ್ನು ಬಯಲು ಮಾಡಿದೆ.

Bengal Police Raid

28.5 ಕೋಟಿ ನಗದು, 15 ಕೆ.ಜಿ. ಚಿನ್ನ ವಶಕ್ಕೆ

ಬಿರ್ಭಮ್ ಜಿಲ್ಲೆಯ ಮರಳು ಮಾಫಿಯಾ ವಿರುದ್ಧ ಖಚಿತ ಮಾಹಿತಿಯನ್ನಾ ಇಟ್ಟುಕೊಂಡು ಬಂಗಾಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಿವೃತ್ತ ಸರ್ಕಾರಿ ಬಸ್ ಚಾಲಕ ಹಾಗೂ ಪ್ರಸ್ತುತ ಕಲ್ಲು ವ್ಯಾಪಾರಿಯಾಗಿರುವ ಮಿನಾರ್ ಎಂಬುವವರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ಕೋಟ್ಯಂತರ ರೂಪಾಯಿ ನಗದು ರಾಶಿ ಬಿದ್ದಿರುವುದು ಕಂಡುಬಂದಿದೆ.

ಮನೆಯಲ್ಲಿದ್ದ ನೋಟಿನ ಕಂತೆಗಳನ್ನ ಎಣಿಸಲು ಪೊಲೀಸರು, ಬ್ಯಾಂಕ್ ಸಿಬ್ಬಂದಿ ಹಾಗೂ ನೋಟು ಎಣಿಕೆ ಯಂತ್ರಗಳನ್ನೇ ತರಿಸಬೇಕಾಯಿತು ನೋಡಿ. ಕಾರ್ಯಾಚರಣೆ ಅಂತ್ಯದ ವೇಳೆಗೆ ಒಟ್ಟು 28.5 ಕೋಟಿ ರೂ. ನಗದು ಹಾಗೂ ಸುಮಾರು 15 ಕೆ.ಜಿ. ತೂಕದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡಿರುವ ಚಿನ್ನದ ಮೌಲ್ಯವೇ ಪ್ರಸ್ತುತ ಮಾರುಕಟ್ಟೆಯಲ್ಲಿ 20 ಕೋಟಿ ರೂ. ದಾಟಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಟಿಎಂಸಿ ಮುಖಂಡನ ಆಪ್ತನ ನಂಟು

ಪೊಲೀಸರ ವಶದಲ್ಲಿರುವ ನಿವೃತ್ತ ಚಾಲಕ ಮಿನಾರ್ ಸಾಮಾನ್ಯ ವ್ಯಕ್ತಿಯಲ್ಲ ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ. ಈತ ಪ್ರಸ್ತುತ ತಲೆಮರೆಸಿಕೊಂಡಿರುವ ಮರಳು ಮಾಫಿಯಾ ಕುಖ್ಯಾತ ಟಿಲ್ಲು ಮೊಂಡಲ್ ಅಲಿಯಾಸ್ ಮೊಹಮ್ಮದ್ ನಜೀಬುದ್ದೀನ್ ಎಂಬಾತನ ಸೋದರ ಮಾವನಾಗಿದ್ದಾನೆ. ಈ ಟಿಲ್ಲು ಮೊಂಡಲ್, ಬಿರ್ಭಮ್ ಜಿಲ್ಲೆಯ ಪ್ರಬಲ ತೃಣಮೂಲ ಕಾಂಗ್ರೆಸ್ ಮುಖಂಡ ಅನುಬ್ರತಾ ಮೊಂಡಲ್ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸರ್ಕಾರಿ ಬಸ್ ಚಾಲಕನಾಗಿ ಸೇವೆಯಿಂದ ನಿವೃತ್ತಿಯಾದ ನಂತರ ಮಿನಾರ್, ತನ್ನ ಅಳಿಯನ ರಾಜಕೀಯ ಪ್ರಭಾವ ಬಳಸಿ ಕಲ್ಲು ಮತ್ತು ಮರಳು ಗಣಿಗಾರಿಕೆ ದಂಧೆಗೆ ಇಳಿದಿದ್ದ. ಈ ಹಿಂದೆ ಹಸು ಸಾಗಣೆ ಹಗರಣಕ್ಕೆ ಸಂಬಂಧಿಸಿದ ಬಹುಕೋಟಿ ಅಕ್ರಮದ ಪ್ರಕರಣದಲ್ಲೂ ಮಿನಾರ್‌ನನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ಮಿನಾರ್ ಮತ್ತು ಪುತ್ರನ ಬಂಧನ, ತೀವ್ರ ವಿಚಾರಣೆ

ಭಾರೀ ಮೊತ್ತದ ನಗದು ಮತ್ತು ಚಿನ್ನ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಮಿನಾರ್ ಮತ್ತು ಆತನ ಪುತ್ರನನ್ನು ತಕ್ಷಣವೇ ಬಂಧಿಸಿದ್ದಾರೆ. ಈ ಸಂಪತ್ತು ಕೇವಲ ಮರಳು ಮಾಫಿಯಾದ್ದೋ ಅಥವಾ ರಾಜಕೀಯ ನಾಯಕರು ಅಕ್ರಮವಾಗಿ ಇಲ್ಲಿ ಇರಿಸಿದ್ದರೋ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಜಿಲ್ಲೆಯ ಇತರ ರಹಸ್ಯ ಸ್ಥಳಗಳಲ್ಲೂ ಇದೇ ರೀತಿ ಕೋಟ್ಯಂತರ ರೂಪಾಯಿ ಅಡಗಿಸಿಟ್ಟಿರುವ ಶಂಕೆ ಇದ್ದು, ಶೋಧ ಕಾರ್ಯ ಮುಂದುವರಿದಿದೆ.

ಪೊಲೀಸರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ಮರಳು ಮತ್ತು ಕಲ್ಲು ಮಾಫಿಯಾ ವಿರುದ್ಧ ಬಿರ್ಭಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿಬ್ಬಂದಿ ಕೈಗೊಂಡ ಈ ದಿಟ್ಟ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಾರ್ವಜನಿಕ ಸಂಪನ್ಮೂಲಗಳನ್ನು ಲೂಟಿ ಮಾಡಿ, ರಾಜಕೀಯ ಪ್ರಭಾವದ ನೆರಳಿನಲ್ಲಿ ಅಕ್ರಮ ಸಂಪತ್ತು ಕ್ರೂಢೀಕರಿಸಿರುವ ಮಾಫಿಯಾ ಸಿಂಡಿಕೇಟ್‌ಗಳ ವಿರುದ್ಧ 'ಶೂನ್ಯ ಸಹಿಷ್ಣುತೆ ನೀತಿ'ಯಡಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+