Holiday: ಇದೇ ವಾರದಲ್ಲಿ ಬ್ಯಾಂಕ್‌ಗಳಿಗೆ ನಾಲ್ಕು ದಿನ ರಜೆ: ಇಲ್ಲಿದೆ ವಿವರ
Bank Holiday: ದೇಶದ ಹಲವೆಡೆ ಇಲ್ಲಿಯವರೆಗೂ ಕಾರಣಾಂತರಗಳಿಂದ ಬ್ಯಾಂಕ್‌ಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಇದೀಗ ಇದೊಂದೇ ವಾರದಲ್ಲಿ ನಾಲ್ಕು ದಿನ ರಜೆಗಳು ಇರಲಿವೆ. ಹಾಗಾದ್ರೆ, ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಬ್ಯಾಂಕ್‌ಗಳು ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಂದು ಮುಚ್ಚಲ್ಪಡುತ್ತವೆ. ಆದರೆ, ಕೆಲವೆಡೆ ಸ್ಥಳೀಯ ರಜಾ ದಿನಗಳ ವೇಳೆ ಮುಚ್ಚಲಾಗುತ್ತದೆ. ಹಾಗೆಯೇ ಇದೀಗ ಇದೊಂದೇ ವಾರದಲ್ಲಿ ಬ್ಯಾಂಕ್‌ಗಳು ನಾಲ್ಕು ದಿನ ಮುಚ್ಚಲ್ಪಡಲಿವೆ.

ಆರ್‌ಬಿಐ ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್ ಪ್ರಕಾರ, ಇದೇ ವಾರ ಬ್ಯಾಂಕ್‌ಗಳಿಗೆ ನಾಲ್ಕು ರಜೆಗಳು ಇರಲಿವೆ. ಆದರೆ, ನಾಲ್ಕು ರಜೆಗಳು ಭಾರತದ ಕೆಲವು ಭಾಗಗಳ ಬ್ಯಾಂಕ್‌ಗಳಿಗೆ ಮಾತ್ರ ಅನ್ವಯ ಆಗುತ್ತವೆ. ಇವುಗಳನ್ನು ಪ್ರಾದೇಶಿಕ ರಜಾ ದಿನಗಳೆಂದು ಪರಿಗಣಿಸಲಾಗುತ್ತದೆ.
ಭಾರತದಲ್ಲಿ ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದ್ದು, ರಾಷ್ಟ್ರೀಯ, ಪ್ರಾದೇಶಿಕ ಮತ್ತು ಧಾರ್ಮಿಕ ಆಚರಣೆಗಳನ್ನು ಆಧರಿಸಿವೆ. ಇನ್ನೂ ಡಿಸೆಂಬರ್ 8 ರಿಂದ ಡಿಸೆಂಬರ್ 14ರ ವರೆಗಿನ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಎಸ್‌ಬಿಐ, ಪಂಜಾಬ್ ನ್ಯಷನಲ್ ಬ್ಯಾಂಕ್, ಐಸಿಐಸಿಐ, ಎಚ್‌ಡಿಎಫ್‌ಸಿ ಸೇರಿದಂತೆ ಇನ್ನಿತರ ಬ್ಯಾಂಕ್‌ಗಳಿಗೂ ರಜೆ ಇರಲಿದೆ.
* ಡಿಸೆಂಬರ್ 9ರಂದು ಸ್ಥಳೀಯ ಸರ್ಕಾರಿ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕೇರಳದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* ಡಿಸೆಂಬರ್ 12ರಂದು ಮೇಘಾಲಯದ ಶಿಲ್ಲಾಂಗ್ ಸೇರಿ ಮೇಘಾಲಯದ ಹಲವೆಡೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಪಾ ಟೋಗನ್ ನೆಂಗ್ಮಿಂಜಾ ಸಂಗ್ಮಾ ಅವರ ಪುಣ್ಯತಿಥಿಯ ಹಿನ್ನೆಲೆ ರಾಜ್ಯ ಸರ್ಕಾರ ಈ ರಜೆಯನ್ನು ಘೋಷಣೆ ಮಾಡಿದೆ. ಮೇಘಾಲಯ ಹೊರತುಪಡಿಸಿ ದೇಶದ ಉಳಿದ ಭಾಗಗಳಲ್ಲಿಈ ದಿನ ಬ್ಯಾಂಕುಗಳು ತೆರೆದಿರುತ್ತವೆ.
* ಡಿಸೆಂಬರ್ 13ರಂದು ಎರಡನೇ ಶನಿವಾರ ಹಿನ್ನೆಲೆ ಭಾರತದ ಎಲ್ಲಾ ಬ್ಯಾಂಕುಗಳಿಗೆ ರಜೆ ಇರಲಿದೆ. ಇನ್ನೂ ಡಿಸೆಂಬರ್ 14 ಭಾನುವಾರ ಕಾರಣ ಈ ದಿನವೂ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ಮೂಲಕ ಹಲವು ರಾಜ್ಯಗಳ ಬ್ಯಾಂಕ್‌ಗಳ ಸಿಬ್ಬಂದಿಗೆ ನಾಲ್ಕು ದಿನ ರಜೆ ಸಿಕ್ಕಂತಾಗಲಿದೆ.
ಸಾಮಾನ್ಯವಾಗಿ ಪ್ರಾದೇಶಿಕ ರಜಾ ದಿನಗಳು, ರಾಷ್ಟ್ರೀಯ ರಜಾ ದಿನಗಳು ಮತ್ತು ವಾರಾಂತ್ಯಗಳಲ್ಲಿ ಬ್ಯಾಂಕುಗಳು ಸಾಮಾನ್ಯವಾಗಿ ಮುಚ್ಚಲ್ಪಡುತ್ತವೆ. ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಪ್ರಾದೇಶಿಕ ರಜಾ ದಿನಗಳಂದು ಬ್ಯಾಂಕ್‌ಗಳು ಮುಚ್ಚುಲ್ಪಡುತ್ತವೆ. ಆದರೆ, ರಾಷ್ಟ್ರೀಯ ಹಬ್ಬಗಳ ಆಚರಣೆಗಳ ಸಮಯದಲ್ಲಿ ದೇಶಾದ್ಯಂತ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದರ ಹೊರತಾಗಿಯೂ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರಗಳಂದು ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ ನೀಡಲಾಗುತ್ತದೆ.
ಬ್ಯಾಂಕ್ ರಜಾದಿನಗಳಲ್ಲಿ ಹಣದ ವಹಿವಾಟು ನಡೆಸಲು ಗ್ರಾಹಕರು ಚಿಂತಿಸುವ ಅಗತ್ಯ ಇರುವುದಿಲ್ಲ. ರಜಾದಿನಗಳಲ್ಲಿಯೂ ಸಹ ಎಟಿಎಂ ಸೇವೆಗಳು 24x7 ಕಾರ್ಯನಿರ್ವಹಿಸುತ್ತವೆ. ಆನ್‌ಲೈನ್ ಮೂಲಕ UPI, IMPS, ನೆಟ್‌ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯ ಇರುತ್ತವೆ. ಒಂದು ವೇಳೆ ನೀವು ಬ್ಯಾಂಕ್‌ಗಳಲ್ಲೇ ಹಣದ ವ್ಯವಹಾರ ನಡೆಸಬೇಕೆಂದರೆ, ರಜೆಯ ಮುನ್ನ ದಿನ ಅಥವಾ ರಜೆ ಮುಗಿದ ಬಳಿಕ ನಿಮ್ಮ ಶಾಖೆಗೆ ಭೇಟಿ ನೀಡಬಹುದು.












Click it and Unblock the Notifications