ಪತಂಜಲಿ ಕಂಪನಿಯ ಉತ್ತರಾಧಿಕಾರಿ ಘೋಷಿಸಿದ ರಾಮ್ ದೇವ್ ಬಾಬಾ
ನವದೆಹಲಿ, ಸೆಪ್ಟೆಂಬರ್ 30: ಸುಮಾರು ಹತ್ತು ಸಾವಿರ ಕೋಟಿ ರು. ಮೌಲ್ಯದ ಪತಂಜಲಿ ಕಂಪನಿಯನ್ನು ಮುನ್ನಡೆಸಬಲ್ಲ ಮುಂದಿನ ನಾಯಕರು ಯಾರು?
- ಈ ಪ್ರಶ್ನೆ ಪತಂಜಲಿ ಉತ್ಪನ್ನಗಳನ್ನು ಉಪಯೋಗಿಸುವ ಯಾವುದೇ ಗ್ರಾಹಕನಿಗೆ ಹುಟ್ಟಿದೆಯೋ ಇಲ್ಲವೋ? ಆದರೆ, ರಾಮ್ ದೇವ್ ಬಾಬಾ ಅವರಿಗಂತೂ ಹುಟ್ಟಿಕೊಂಡಿದೆ.

ಇತ್ತೀಚೆಗೆ ನಡೆದ ಟಾಕ್ ಷೋ ನಲ್ಲಿ ಈ ಬಗ್ಗೆ ಅವರು, ''ನನ್ನ ತರುವಾಯ ಪತಂಜಲಿ ಕಂಪನಿಯನ್ನು ಮುನ್ನೆಡೆಸುವ ಸಮರ್ಥರು ಯಾರೆಂದು ಯಾರಾದರೂ ಯೋಚಿಸಬಹುದು. ನಾನು ನನ್ನಂತೆಯೇ ಸಮರ್ಥರಾಗಿರುವ 500 ಜನರ ಶಿಷ್ಯರ ಪಡೆಯನ್ನು ಹೊಂದಿದ್ದೇನೆ. ಅವರು ನಾನು ಕಂಪನಿಯ ಮುಖ್ಯಸ್ಥನ ಸ್ಥಾನ ತ್ಯಜಿಸಿದ ಕೂಡಲೇ ಕಂಪನಿಯನ್ನು ಮುನ್ನಡೆಸುತ್ತಾರೆ'' ಎಂದಿದ್ದಾರೆ.
ಇಷ್ಟರಲ್ಲೇ, ಪತಂಜಲಿಯಿಂದ ಜೀನ್ಸ್, ಟೀ ಶರ್ಟ್, ಕುರ್ತಾ, ಶರ್ಟ್, ಸೂಟಿಂಗ್ಸ್, ಕ್ರೀಡಾ ಉತ್ಪನ್ನಗಳು ಹಾಗೂ ಯೋಗ ಉಡುಪುಗಳನ್ನು ಮಾರುಕಟ್ಟೆಗೆ ತರಲಿದೆ ಎಂದೂ ತಿಳಿಸಿದರು.












Click it and Unblock the Notifications