ಅ.3 ರಂದು ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟನೆ

ಶಿಮ್ಲಾ, ಅಕ್ಟೋಬರ್ 1: ವಿಶ್ವದ ಅತಿ ಉದ್ದವಾದ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಮಾಚಲ ಪ್ರದೇಶದ ಅಟಲ್ ಸುರಂಗ ಮಾರ್ಗವನ್ನು ಅ.3 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಧಾಟಿಸಲಿದ್ದಾರೆ.

ಈ ಬಗ್ಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಹೈ ರಾಮ್ ಠಾಕೂರ್ ಮಾಹಿತಿ ನೀಡಿದ್ದು, ಅಂದು ಪ್ರಧಾನಿ ಮೋದಿ ಅವರು ಮನಾಲಿಗೆ ಭೇಟಿ ನೀಡುತ್ತಿದ್ದು, ಬಳಿಕ ಲಾಹೌಲ್ ಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಬರೋಬ್ಬರಿ 10 ಸಾವಿರ ಅಡಿಗಿಂತ ಹೆಚ್ಚು ಉದ್ದವಾಗಿರುವ ವಿಶ್ವದ ಅತಿ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಅಟಲ್ ಸುರಂಗ ಮಾರ್ಗ ಪಾತ್ರವಾಗಿದೆ.

Atal Tunnel: PM Modi To Open Worlds Longest Underground Highway

ಈ ಸುರಂಗದಿಂದಾಗಿ ಮನಾಲಿ-ಲೇಹ್ ನಡುವಿನ ಪ್ರಯಾಣದ ಅಂತರ 46 ಕಿ.ಮೀನಷ್ಟು ಕಡಿಮೆಯಾಗಲಿದ್ದು 4 ಗಂಟೆಗಳ ಉಳಿತಾಯವಾಗಲಿದೆ. ಚಳಿಗಾಲದಲ್ಲಿ ರೋಹ್ಟಾಂಗ್ ಪಾಸ್ 6 ತಿಂಗಳುಗಳ ಕಾಲ ಮುಚ್ಚಿರುವುದರಿಂದ ಮನಾಲಿ-ಸರ್ಚು-ಲೇಹ್ ರಸ್ತೆಯೂ ಬಂದ್ ಆಗುತ್ತದೆ. ಹಾಗಾಗಿ ಈ ಸುರಂಗ ಮಾರ್ಗವು ಲೇಹ್-ಮನಾಲಿಯನ್ನು ಸಂಪರ್ಕಿಸುವಲ್ಲಿ ಪ್ರಧಾನ ಪಾತ್ರವಹಿಸಲಿದೆ.

ಸುರಂಗದಲ್ಲಿ ಏನೇನಿದೆ?
-9.2 ಕಿ.ಮೀ ಉದ್ದವಿರುವ ಈ ಸುರಂಗದಲ್ಲಿ ಪ್ರತಿ 60 ಮೀಟರ್‌ಗಳಿಗೆ ಸಿಸಿಟಿವಿ ಕ್ಯಾಮರಾ ಮತ್ತು ಸುರಂಗದ ಒಳಗೆ ಪ್ರತಿ 500 ಮೀಟರ್‌ಗೆ ತುರ್ತು ನಿರ್ಗಮನ ಬಾಗಿಲುಗಳಿವೆ.
-ಅಗ್ನಿ ಅನಾಹುತಗಳಿಂದ ಕಾಪಾಡಲು ಫೈರ್ ಹೈಡ್ರಾಂಟ್ಸ್ ಅಳವಡಿಸಲಾಗಿದೆ.
-ಸುರಂಗದ ಅಗಲ 10.5 ಮೀಟರ್, ಎರಡು ಬದಲಿಯಲ್ಲಿಯೂ 1 ಮೀಟರ್‌ನಷ್ಟು ಫೂಟ್‌ಪಾತ್ ಇದೆ.
- ಯೋಜನೆಯನ್ನು 1983ರಲ್ಲಿ ಇಂದಿರಾ ಗಾಂಧಿ ಸರ್ಕಾರ ರೂಪಿಸಿತ್ತು. ಬಳಿಕ ಜೂನ್ 2000ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸುರಂಗ ಕಾರ್ಯವನ್ನು ಘೋಷಿಸಿ, ಶಂಕು ಸ್ಥಾಪನೆ ಮಾಡಿದ್ದರು. ಸುರಂಗದ ಕೆಲಸ ಪದೇ ಪದೇ ನಿಂತು ಹೋಗಿ ನಂತರ 2010ರ ಜೂನ್‌ನಲ್ಲಿ ಪ್ರಾರಂಭವಾಯಿತು.
-ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಜನ್ಮದಿನಾಚರಣೆ ನೆನಪಿಗಾಗಿ 2019 ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ರೋಹ್ಟಾಂಗ್ ಮಾರ್ಗವನ್ನು ಅಟಲ್ ಸುರಂಗ ಎಂದು ಮರುನಾಮಕರಣ ಮಾಡಿದರು.
-ಈ ಸುರಂಗವು ಮನಾಲಿಯನ್ನು ಲಾಹೌಲ್ ಕಣಿವೆಯೊಂದಿಗೆ ಸಂಪರ್ಕಿಸುತ್ತದೆ. ಮತ್ತು ಮನಾಲಿ-ರೋಹ್ಟಾಂಗ್ ಪಾಸ್ ಸರ್ಚು-ಲೇಹ್ ರಸ್ತೆಯನ್ನು ಕ್ರಮಿಸುವುದನ್ನು 46 ಕಿಲೋಮೀಟರ್ ಕಡಿಮೆ ಮಾಡುತ್ತದೆ. 8.8 ಕಿ.ಮೀ ಉದ್ದದ ಸುರಂಗವು ಸಮುದ್ರ ಮಟ್ಟದಿಂದ 3 ಸಾವಿರ ಮೀಟರ್ ಎತ್ತರದಲ್ಲಿದೆ. ಇದು 10.5 ಮೀಟರ್ ಅಗಲದ ಸಿಂಗಲ್ ಟ್ಯೂಬ್-ಲೇನ್ ಸುರಂಗವಾಗಿದ್ದು, ಒಳಗಡೆ ಅಗ್ನಿ ನಿರೋಧಕ ತುರ್ತು ಸುರಂಗವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+