Jharkhand Assembly Polls 2024: ಜಾರ್ಖಂಡ್‌ನಲ್ಲಿ ಜೆಎಂಎಂ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ
Jharkhand Assembly Polls 2024: ಈಗಾಗಲೇ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಲ್ಲದೆ, ಈಗಾಗಲೇ ಎಲ್ಲಾ ಪಕ್ಷಗಳಿಂದಲೂ ಅಭ್ಯರ್ಥಿಗಳ ಫೈನಲ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಇದೀಗ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಹಿತಿ, ವಿವರ ಇಲ್ಲಿದೆ ತಿಳಿಯಿರಿ.
ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ ನಾಲ್ಕನೇ ಪಟ್ಟಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇತ್ತೀಚೆಗಷ್ಟೇ ಬಿಜೆಪಿಯಿಂದ ಜೆಜೆಎಂ ಪಕ್ಷಕ್ಕೆ ಸೇರಿದ ಗಣೇಶ್ ಮೊಹ್ಲಿ ಅವರಿಗೆ ಸೆರೈಕೆಲಾ ವಿಧಾನಸಭಾ ಕ್ಷೇತ್ರದಿಂದ ಹಾಗೂ ಕುಂತಿ ಕ್ಷೇತ್ರದಿಂದ ರಾಮಸೂರ್ಯ ಮುಂಡಾ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಈಗಾಗಲೇ ಬಿಡುಗಡೆ ಮಾಡಲಾದ ಮೊದಲ ಪಟ್ಟಿಯಲ್ಲಿ 35 ಅಭ್ಯರ್ಥಿಳು, ಎರಡನೇ ಪಟ್ಟಿಯಲ್ಲಿ ಒಬ್ಬರಿಗೆ, ಮೂರನೇ ಪಟ್ಟಿಯಲ್ಲಿ ಐವರು ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗಿತ್ತು. ಒಟ್ಟಾರೆ ಇದುವರೆಗೂ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ 81 ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್ 13 & 20ರಂದು ಮತದಾನ ನಡೆಯಲಿದ್ದು, ನವೆಂಬರ್ 23ಕ್ಕೆ ಫಲಿತಾಂಶ ಹೊರಬೀಳಲಿದೆ.
ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಅಕ್ಟೋಬರ್ 23ರಂದು ಜಾರ್ಖಂಡ್ ಜಾರ್ಖಂಡ್ ಮುಕ್ತಿ ಮೂರ್ಚಾ (ಜೆಎಂಎಂ) ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಿದೆ. ಎಷ್ಟು ಸ್ಥಾನಗಳಿಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮುಂಬರುವ ವಿಧಾನಸಭಾ ಚುನಾವಣೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವು ತನ್ನ 35 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಗುಡೆ ಮಾಡಿದೆ. ಬರ್ಹೈತ್‌ನಿಂದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಗಂಡೇ ಕ್ಷೇತ್ರದಿಂದ ಕಲ್ಪನಾ ಸೊರೇನ್ ಅವರನ್ನು ಕಣಕ್ಕಿಳಿಸಿದೆ.
ಇನ್ನು 35 ಜೆಎಂಎಂ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿಯ ಸಹೋದರ ಬಸಂತ್ ಸೊರೇನ್ ದುಮ್ಕಾ, ಜಾರ್ಖಂಡ್ ವಿಧಾನಸಭಾ ಸ್ಪೀಕರ್ ರವೀಂದ್ರನಾಥ್ ಮಹತೋ ನಾಲಾ, ಸಚಿವ ಮಿಥಿಲೇಶ್ ಠಾಕೂರ್ ಗರ್ವಾ, ಸೋನು ಸುದಿವ್ಯಾ ಗಿರಿದಿಹ್ ಮತ್ತು ಬೇಬಿ ದೇವಿ ಡುಮ್ರಿಯಿಂದ ಸರ್ಧೆ ಮಾಡಲಿದ್ದಾರೆ.












Click it and Unblock the Notifications