ಕೇಂದ್ರ ಬಜೆಟ್ 2015-16: ಯಾವುದು ಏರಿಕೆ? ಯಾವ್ದು ಇಳಿಕೆ?

ನವದೆಹಲಿ,ಫೆ.28: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ವಚ್ಛ ಭಾರತ್ ಯೋಜನೆಗಳಿಗೆ ಅನುಗುಣವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಎನ್ಡಿಎ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಶನಿವಾರ ಮಂಡಿಸಿದ್ದಾರೆ. ಯಾವ ವಸ್ತು ಬೆಲೆ ಏರಿದೆ? ಯಾವುದು ಕಡಿಮೆ?ಎಂಬ ಜನ ಸಾಮಾನ್ಯರ ಬಹು ನಿರೀಕ್ಷಿತ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ಮುಂಗಡ ಪತ್ರದಲ್ಲಿ ಪ್ರಮುಖವಾಗಿ ಸೇವಾ ತೆರಿಗೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಅಗತ್ಯ ವಸ್ತುಗಳ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಲಿದೆ. [ಅರುಣ್ ಜೇಟ್ಲಿ ಬಜೆಟ್‌ : ಯಾರು, ಏನು ಹೇಳಿದರು?] ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್‌ನಲ್ಲಿ ಸೇವಾ ತೆರಿಗೆಯನ್ನು ಶೇ.12.36ರಿಂದ ಶೇ.14ಕ್ಕೆ ಏರಿಕೆ ಮಾಡಿದ್ದಾರೆ. ವರ್ಷಾಂತ್ಯಕ್ಕೆ ಈ ಪ್ರಮಾಣ ಶೇ 18ಕ್ಕೇರಿದರೂ ಅಚ್ಚರಿಪಡಬೇಕಾಗಿಲ್ಲ.[ಜೇಟ್ಲಿ 2015 : ಪೂರ್ಣ ಪ್ರಮಾಣದ ಬಜೆಟ್ ಮುಖ್ಯಾಂಶಗಳು]

ಮಧ್ಯಮ ವರ್ಗದ ಜನ ಆಶೋತ್ತರಕ್ಕೆ ಅನುಗುಣವಾಗಿ ಬಜೆಟ್ ನಲ್ಲಿ ಏರಿಕೆ, ಇಳಿಕೆ ಮಾಡಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ ಅದರೆ, ದೈನಂದಿನ ಮನೆ ಹೊರಗಿನ 'ಆಹಾರ' ಜೇಬಿನ ಕತ್ತರಿ ಹಾಕಲಿದೆ. ಜೊತೆಗೆ ನಿರೀಕ್ಷೆಯಂತೆ ಪಾನ್ ಮಸಾಲ, ಸಿಗರೇಟ್, ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲಾಗಿದೆ.

Union Budget 2015-16

ಯಾವುದು ಏರಿಕೆ:
* ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಆಹಾರ ದರ ಏರಿಕೆ
* ಕಂಪ್ಯೂಟರ್ ಉಪಕರಣಗಳ ಆಮದು ಸುಂಕ ಏರಿಕೆ.
* ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ದರ ಏರಿಕೆ
* ಸಿಗರೇಟು, ಪಾನ್ ಮಸಾಲ ದರ ಏರಿಕೆ.
* ಸಿಗರೇಟಿನ ಮೇಲಿನ ಅಬಕಾರಿ ಸುಂಕ ಶೇ 72 ಯಥಾಸ್ಥಿತಿ ಮುಂದುವರಿಕೆ
* ಬ್ಯೂಟಿ ಪಾರ್ಲರ್, ಸೌಂದರ್ಯ ವರ್ಧಕಗಳ ದರ ಇಳಿಕೆ
* ಕ್ಲಬ್ ಗಳಲ್ಲಿ ಊಟ, ನೋಟ, ಆಟ ಎಲ್ಲವೂ ಕೈ ಕಚ್ಚಲಿದೆ.
* ಕ್ಲಬ್, ಜಿಮ್ ಗಳಲ್ಲಿ ಸದಸ್ಯತ್ವ ದರ ಏರಿಕೆ.
* ಕೋರಿಯರ್ ಸೇವೆ ದುಬಾರಿ
* ವಿಡಿಯೋ ಕೆಮೆರಾ, ಬಿಡಿ ಭಾಗಗಳು.
* ಏರ್ ಟಿಕೆಟ್ ಬುಕ್ಕಿಂಗ್, ಆನ್ ಲೈನ್ ಸೇವೆಗಳು.
* ಸಿಮೆಂಟ್, ಉಕ್ಕು ದರ ಏರಿಕೆ ನಿರೀಕ್ಷೆ
* ರೇಡಿಯೋ ಟ್ಯಾಕ್ಸಿ ಮೇಲೆ ಸೇವಾ ತೆರಿಗೆ ಹೇರಿಕೆ
* ಬಾಕ್ಸೈಟ್ ರಫ್ತು ತೆರಿಗೆ ಶೇ.20 ಯಥಾಸ್ಥಿತಿ.

ಯಾವುದು ಇಳಿಕೆ:

* ಹಣ್ಣು ತರಕಾರಿಗಳಿಗೆ ಸೇವಾ ತೆರಿಗೆ ಇಲ್ಲ
* ಎಲ್ ಸಿಡಿ ಟಿವಿ ಸುಂಕ ವಿನಾಯಿತಿ.
* ಸೋಪು ಹಾಗೂ ತೈಲ ಉತ್ಪನ್ನಗಳ ದರ ಇಳಿಕೆ
* ಪಾದರಕ್ಷೆಗಳ ಮೇಲಿನ ಅಬಕಾರಿ ಸುಂಕ ಶೇ 12 ರಿಂದ ಶೇ 6ಕ್ಕೆ ಇಳಿಕೆ, 1000 ರೂ.ಮೇಲ್ಪಟ್ಟ ಚರ್ಮದ ಪಾದರಕ್ಷೆ
* ಎಲ್ ಇಡಿ ಪ್ಯಾನೆಲ್ ಮೇಲಿನ ಕಸ್ಟಮ್ ಸುಂಕ ಇಲ್ಲ (19 ಇಂಚಿನ ತನಕ), ಎಲ್ಇಡಿ, ಎಲ್ ಸಿಡಿ ಬೆಲೆ ಇಳಿಕೆ
* ಕ್ರೀಡಾ ಉತ್ಪನ್ನಗಳ ಮೇಲಿನ ಸುಂಕ ಇಳಿಕೆ
* ವಜ್ರ ಮತ್ತು ಅತ್ಯಮೂಲ್ಯ ಹರಳುಗಳ ದರ ಇಳಿಕೆ
* ರೆಡಿಮೇಡ್ ಹಾಗೂ ಬ್ರಾಂಡೆಡ್ ಬಟ್ಟೆಗಳ ದರ ಇಳಿಕೆ
* ಸೌರಶಕ್ತಿ ಉತ್ಪನ್ನಗಳ ಯೂನಿಟ್ ದರ ಇಳಿಕೆ.
* ಮುದ್ರಣ ಮಾಧ್ಯಮಕ್ಕೆ ಯಾವುದೇ ಸೇವಾ ತೆರಿಗೆ ಇಲ್ಲ
* ಉಕ್ಕಿನ ಉತ್ಪನ್ನಗಳ ದರ ಇಳಿಕೆ.
* ಪ್ಯಾಕೇಜಿಂಗ್ ಯಂತ್ರೋಪಕರಣಗಳ ಮೇಲಿನ ಅಬಕಾರಿ ಸುಂಕ ಶೇ 6 ರಷ್ಟು ಇಳಿಕೆ.
* ಮೀಥೈಲ್ ಆಲ್ಕೋಹಾಲ್ ಮೇಲಿನ ಕಸ್ಟಮ್ ಸುಂಕ ಶೇ 5ರಷ್ಟು ಇಳಿಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+