ಬುಧವಾರ ದೇಶದಲ್ಲಿ ಅತಿ ಹೆಚ್ಚು ಉಷ್ಣಾಂಶವಿರುವ ಪ್ರದೇಶಗಳಿವು

ನವದೆಹಲಿ, ಏ.10: ದೇಶದೆಲ್ಲೆಡೆ ಬಿಸಿಲ ಝಳ ಜೋರಾಗಿದೆ. ದೆಹಲಿ, ಕರ್ನಾಟಕ ಸೇರಿದಂತೆ ಕೆಲವು ಭಾಗಗಳಲ್ಲಿ ಮಳೆಯಾದರೂ ಕೂಡ ಗರಿಷ್ಠ ಉಷ್ಣಾಂಶ ಮಾತ್ರ ಹಾಗೆಯೇ ಇದೆ.

ಇನ್ನೊಂದೆಡೆ ಚುನಾವಣೆಯೂ ಕೂಡ ಸನ್ನಿಹಿತವಾಗಿದ್ದು, ಬಿಸಿಲಿನಲ್ಲಿಯೇ ಎಲ್ಲಾ ಪಕ್ಷದ ಅಭ್ಯರ್ಥಿಗಳು ಹಾಗೂ ಮುಖಂಡರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಮಕ್ಕಳಿಗೆ ಬೇಸಿಗೆ ರಜೆ ಇದ್ದರೂ ಹೊರಗೆಲ್ಲೂ ಪ್ರವಾಸಕ್ಕೆ ಹೋಗಲು ಸಾಧ್ಯವಾಗದಷ್ಟು ಬಿಸಿಲು ಏರುತ್ತಿದೆ. ದೇಶದ ಬಹುತೇಕ ಭಾಗಗಳಲ್ಲಿ ಅತಿ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗಿದೆ.

april 10 top ten hottest places across the plains of india

ಮಹಾರಾಷ್ಟ್ರ, ರಾಜಸ್ತಾನ, ಮಧ್ಯಪ್ರದೇಶ ಅಷ್ಟೇ ಅಲ್ಲದೆ ಉತ್ತರ ಪ್ರದೇಶದಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ಗರಿಷ್ಠ ಉಷ್ಣಾಂಶ 44.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ನಾಗಪುರ-ಮಹಾರಾಷ್ಟ್ರ: 44.1 ಡಿಗ್ರಿ ಸೆಲ್ಸಿಯಸ್
ಬಾಂದಾ-ಉತ್ತರ ಪ್ರದೇಶ:43.8 ಡಿಗ್ರಿ ಸೆಲ್ಸಿಯಸ್
ಖರಗೌನ್-ಮಧ್ಯಪ್ರದೇಶ:43.5 ಡಿಗ್ರಿ ಸೆಲ್ಸಿಯಸ್
ಆದಿಲಾಬಾದ್-ತೆಲಂಗಾಣ:43.3 ಡಿಗ್ರಿ ಸೆಲ್ಸಿಯಸ್
ವರ್ಧಾ-ಮಹಾರಾಷ್ಟ್ರ: 43.2 ಡಿಗ್ರಿ ಸೆಲ್ಸಿಯಸ್
ಅಕೋಲಾ-ಮಹಾರಾಷ್ಟ್ರ:43.1 ಡಿಗ್ರಿ ಸೆಲ್ಸಿಯಸ್
ಬ್ರಹ್ಮಪುರಿ-ಮಹಾರಾಷ್ಟ್ರ:43.0 ಡಿಗ್ರಿ ಸೆಲ್ಸಿಯಸ್
ಕಲಬುರಗಿ-ಕರ್ನಾಟಕ:43.0 ಡಿಗ್ರಿ ಸೆಲ್ಸಿಯಸ್
ಖಜುರಾಹೋ-ಮಧ್ಯಪ್ರದೇಶ: 43.0 ಡಿಗ್ರಿ ಸೆಲ್ಸಿಯಸ್
ಫಲೋದಿ-ರಾಜಸ್ತಾನ:43.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಸ್ಕೈಮೆಟ್ ವೆದರ್ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+