• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೆವೆನಿಂಗ್ ಫೆಲೋಷಿಪ್, ಸ್ಕಾಲರ್ ಷಿಪ್ ಗೆ ಅರ್ಜಿ ಆಹ್ವಾನ

|

ನವದೆಹಲಿ, ಆಗಸ್ಟ್ 21: ಚೆವೆನಿಂಗ್ ವಿದ್ಯಾರ್ಥಿ ವೇತನ ಪಡೆಯಲು ಇದೀಗ ಅವಕಾಶ ದೊರಕಿದ್ದು, ಭವಿಷ್ಯದ ಬಗ್ಗೆ ಅದ್ಭುತವಾದ ಕನಸು ಕಟ್ಟಿಕೊಂಡವರು, ಭವಿಷ್ಯದ ಬಗ್ಗೆ ಮಹತ್ವಾಕಾಂಕ್ಷೆ ಇರಿಸಿಕೊಂಡ ನಾಯಕರು ಇದಕ್ಕೆ ಪ್ರಯತ್ನಿಸಬಹುದು. ಯುನೈಟೆಡ್ ಕಿಂಗ್ ಡಮ್ ನಲ್ಲಿ ಶಿಕ್ಷಣ ಪಡೆಯಲು ಚೆವೆನಿಂಗ್ ನೆರವಾಗುತ್ತದೆ.

ಆ ಮೂಲಕ ಜಾಗತಿಕ ಮಟ್ಟದಲ್ಲಿ ನೆಟ್ ವರ್ಕ್ ದೊರೆಯುತ್ತದೆ ಹಾಗೂ ಜೀವನವೇ ಬದಲಿಸುವಂಥ ಅನುಭವ ದಕ್ಕುತ್ತದೆ. ವೃತ್ತಿಪರ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಇದು ಸಹಕಾರಿ. ಯುಕೆ ಸರಕಾರ ಅಂತರರಾಷ್ಟ್ರೀಯ ಪ್ರಶಸ್ತಿ ಯೋಜನೆಯಾಗಿರುವ ಚೆವೆನಿಂಗ್, ಜಾಗತಿಕ ಮಟ್ಟದಲ್ಲಿ ನಾಯಕರನ್ನು ಪ್ರೋತ್ಸಾಹಿಸುವುದನ್ನೇ ಗುರಿ ಮಾಡಿಕೊಂಡಿದೆ.

ಇದಕ್ಕಾಗಿ ಎಫ್ ಸಿಒ (ಫಾರಿನ್ ಅಂಡ್ ಕಾಮನ್ ವೆಲ್ತ್ ಆಫೀಸ್) ಮತ್ತಿತರ ಸಹಯೋಗಿ ಸಂಸ್ಥೆಗಳು ಹಣಕಾಸು ಒದಗಿಸುತ್ತಿವೆ. ಚೆವೆನಿಂಗ್ ನಿಂದ ಎರಡು ಬಗೆಯ ಪ್ರಶಸಿ ನೀಡಲಾಗಿತ್ತಿದೆ. ಚೆವೆನಿಂಗ್ ಸ್ಕಾಲರ್ ಷಿಪ್ಸ್ ಹಾಗೂ ಚೆವೆನಿಂಗ್ ಫೆಲೋಷಿಪ್ಸ್. ಅಭ್ಯರ್ಥಿಗಳನ್ನು ಜಗತ್ತಿನಾದ್ಯಂತ ಇರುವ ಬ್ರಿಟಿಷ್ ಎಂಬೆಸಿ ಹಾಗೂ ಹೈಕಮಿಷನ್ ನಿಂದ ಆಯ್ಕೆ ಮಾಡಲಾಗುವುದು.

Applications open for Chevening Fellowships and Scholarships

ಚೆವೆನಿಂಗ್ ಕಾರ್ಯಕ್ರಮದಡಿ ಜಗತ್ತಿನಲ್ಲೇ ಅತಿ ಹೆಚ್ಚು ಮಂದಿ ಅಂದರೆ, ವರ್ಷಕ್ಕೆ ಭಾರತದಿಂದ ನೂರಿಪತ್ತು ಮಂದಿ ತನಕ ಸ್ಕಾಲರ್ಸ್/ಫೆಲ್ಲೋಸ್ ಪ್ರತಿ ವರ್ಷ ಯುನೈಟೆಡ್ ಕಿಂಗ್ ಡಮ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಚೆವೆನಿಂಗ್ ಸ್ಕಾಲರ್ ಷಿಪ್ಸ್ ಹಾಗೂ ಫೆಲೋಷಿಪ್ ಗೆ ಅರ್ಜಿಗಳನ್ನು 6ನೇ ಆಗಸ್ಟ್ 2018ರಿಂದ ಆಹ್ವಾನಿಸಲಾಗಿದೆ. 2019/2020ರಲ್ಲಿ ಯುನೈಟೆಡ್ ಕಿಂಗ್ ಡಮ್ ನಲ್ಲಿ ವ್ಯಾಸಂಗ ಮಾಡಬಹುದಾಗಿದೆ.

1.ಚೆವೆನಿಂಗ್ ಸೈಬರ್ ಸೆಕ್ಯೂರಿಟಿ ಫೆಲೋಷಿಪ್

ತಮ್ಮ ವೃತ್ತಿ ಬದುಕಿನ ಮಧ್ಯಮ ಘಟ್ಟದಲ್ಲಿರುವ ವೃತ್ತಿಪರರಿಗಾಗಿ ಈ ಫೆಲೋಷಿಪ್ ಇದೆ. ಭಾರತದಲ್ಲಿ ಸೈಬರ್ ಸೆಕ್ಯೂರಿಟಿ ಅಥವಾ ಸೈಬರ್ ನೀತಿ ಕ್ಷೇತ್ರದಲ್ಲಿ ನಾಯಕತ್ವ ಸಾಮರ್ಥ್ಯ ಪ್ರದರ್ಶಿಸಿದವರನ್ನು ಆಯ್ಕೆ ಮಾಡಲಾಗುವುದು. 6ನೇ ಆಗಸ್ಟ್ 2018ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್ 10, 2018ರೊಳಗೆ ಸಲ್ಲಿಕೆ ಆಗಬೇಕು.

2. ಚೆವೆನಿಂಗ್ ವಿಜ್ಞಾನ ಮತ್ತು ಆವಿಷ್ಕಾರ ನಾಯಕತ್ವ ಫೇಲೋಷಿಪ್ (ಸಿಆರ್ ಐಎಸ್ ಪಿ)

ವಿಜ್ಞಾನ, ಆವಿಷ್ಕಾರ ಮತ್ತು ಉದ್ಯಮದ ಕ್ಷೇತ್ರದಲ್ಲಿ ಉತ್ತಮ ಸಾಮರ್ಥ್ಯ ಹೊಂದಿದ, ತಮ್ಮ ವೃತ್ತಿ ಬದುಕಿನ ಮಧ್ಯಮ ಘಟ್ಟದಲ್ಲಿರುವ ಭಾರತ ಮತ್ತು ಶ್ರೀಲಂಕಾದ ವೃತ್ತಿಪರರಿಗಾಗಿ ಈ ಫೆಲೋಷಿಪ್ ಇದೆ. ಇದು 2019ರ ಏಪ್ರಿಲ್ ಆರಂಭವಾಗುತ್ತದೆ.

3. ಚೆವೆನಿಂಗ್ ದಕ್ಷಿಣ ಏಷ್ಯಾ ಪತ್ರಿಕೋದ್ಯಮ ಫೆಲೋಷಿಪ್

ದಕ್ಷಿಣ ಏಷ್ಯಾದ ದೇಶಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶದ ತಮ್ಮ ವೃತ್ತಿ ಬದುಕಿನ ಮಧ್ಯಮ ಘಟ್ಟದಲ್ಲಿರುವ ಪತ್ರಕರ್ತರಿಗಾಗಿ ಮೀಸಲಾಗಿದೆ. 6ನೇ ಆಗಸ್ಟ್ 2018ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್ 10, 2018ರೊಳಗೆ ಸಲ್ಲಿಕೆ ಆಗಬೇಕು. ಈ ಪ್ರೋಗ್ರಾಮ್ 2019ರ ಮಾರ್ಚ್ ನಿಂದ ಆರಂಭವಾಗುತ್ತದೆ.

4. ಚೆವೆನಿಂಗ್ ಫೈನಾನ್ಷಿಯಲ್ ಸರ್ವೀಸಸ್ ಫೆಲೋಷಿಪ್

ಫೈನಾನ್ಸ್ ವಲಯದಲ್ಲಿ ಕಾರ್ಯ ನಿರ್ವಹಿಸುವ, ತಮ್ಮ ವೃತ್ತಿ ಬದುಕಿನ ಮಧ್ಯಮ ಘಟ್ಟದಲ್ಲಿರುವ ಭಾರತೀಯರಿಗಾಗಿ ಇದು ಮೀಸಲು. ಈ ಪ್ರೋಗ್ರಾಮ್ 2019ರ ಮೇನಿಂದ ಆರಂಭವಾಗುತ್ತದೆ. ಸರಕಾರಿ ಅಥವಾ ಖಾಸಗಿ ವಲಯದ ಅಭ್ಯರ್ಥಿಗಳು ಅರ್ಜಿ ಹಾಕಿಕೊಳ್ಳಬಹುದು. 6ನೇ ಆಗಸ್ಟ್ 2018ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್ 10, 2018ರೊಳಗೆ ಸಲ್ಲಿಕೆ ಆಗಬೇಕು.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು scholarship ಸುದ್ದಿಗಳುView All

English summary
Chevening Scholarships are for ambitious future leaders who believe they can fly. If you have a strong vision for your future, Chevening can provide you with a UK education, a strong global network and a life-changing experience, which could bring you closer to your professional dreams.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more