75ನೇ ಸ್ವಾತಂತ್ರ್ಯ ದಿನಾಚರಣೆ: ಅಪೋಲೊ ಹಾಸ್ಪಿಟಲ್ಸ್ ಲಸಿಕೆ ಆಫರ್
ಬೆಂಗಳೂರು, ಆಗಸ್ಟ್ 11: ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಅಪೊಲೊ ಹಾಸ್ಪಿಟಲ್ಸ್, ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದು, ಕೋವಾಕ್ಸಿನ್ ಲಸಿಕೆಗಾಗಿ ವಿಶೇಷ ಸ್ವಾತಂತ್ರ್ಯದ ಆಫರ್‍ನೀಡುವ ಮೂಲಕ ಲಸಿಕೆ ಅಭಿಯಾನವನ್ನು ಮುಂದಕ್ಕೆ ಒಯ್ಯಲಿದೆ. ಸಾಂಕ್ರಾಮಿಕ ರೋಗಕ್ಕೆ ಒಂದೂವರೆ ವರ್ಷ ಕಳೆದರೂ, ದೇಶವು ಇನ್ನೂ ನೊವೆಲ್ ಕೊರೋನಾ ವೈರಸ್‍ನೊಂದಿಗೆ ಹೋರಾಡುತ್ತಿದೆ.
ಲಸಿಕೆ ಕಾರ್ಯಕ್ರಮವು ವೈರಸ್ ಹರಡುವಿಕೆ ಮತ್ತು ಅದರ ರೂಪಾಂತರಗಳನ್ನು ತಡೆಯುವ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿದ್ದು, ಜನರನ್ನು ಸೋಂಕು ತಗುಲದಂತೆ ಮತ್ತು ವೈರಸ್ ಹರಡದಂತೆ ರಕ್ಷಿಸುತ್ತದೆ ಹಾಗೂ ಗಂಭೀರ ಅನಾರೋಗ್ಯವನ್ನು ತಡೆಯುತ್ತದೆ. ವಿಶೇಷ ಸ್ವಾತಂತ್ರ್ಯೋತ್ಸವ ಆಫರ್‌ನಡಿಯಲ್ಲಿ, ಅಪೊಲೊ ಆಸ್ಪತ್ರೆಗಳು ಕೋವಾಕ್ಸಿನ್ ಲಸಿಕೆಯನ್ನು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ನಿಗದಿಪಡಿಸಿದ ಗರಿಷ್ಠ ಬೆಲೆಯಾದ ರೂ. 1,410ರ (ಜಿಎಸ್‍ಟಿ ಮತ್ತು ಸೇವಾ ಶುಲ್ಕವನ್ನು ಒಳಗೊಂಡಂತೆ) ಬದಲಾಗಿ ಯಾವುದೇ ಲಾಭವಿಲ್ಲದೇ ರೂ. 1,250ರ ಬೆಲೆಯಲ್ಲಿ ಯಾವುದೇ ಹೆಚ್ಚುವರಿ ಸೇವಾ ಶುಲ್ಕವಿಲ್ಲದೆ ವಿತರಿಸಲು ನಿರ್ಧರಿಸಿದೆ.

ಸಿಇಒ ಪಿ.ಕೆ. ಡೇವಿಸನ್
ಈ ಬಗ್ಗೆ ವಿವರ ನೀಡಿದ ಅಪೋಲೋ ಹಾಸ್ಪಿಟಲ್ಸ್ ಬೆಂಗಳೂರು ಇದರ ಕರ್ನಾಟಕ ಪ್ರದೇಶ ಸಿಇಒ ಪಿ.ಕೆ. ಡೇವಿಸನ್, "ಅಪೋಲೋ ಆಸ್ಪತ್ರೆಗಳು ಯಾವಾಗಲೂ ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿವೆ ಮತ್ತು ನಾವು ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ, ರಾಷ್ಟ್ರೀಯ ಲಸಿಕೆ ಅಭಿಯಾನದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುವುದು ಅತ್ಯಗತ್ಯ. ಸಂಪೂರ್ಣ ವ್ಯಾಕ್ಸಿನೇಷನ್ ಪ್ರಸರಣ ಸರಪಣಿಯನ್ನು ಮುರಿಯಲು ಮತ್ತು ಸಮುದಾಯದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಕೋವಿಡ್ ವಿರುದ್ಧದ ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುವುದು ನಮ್ಮ ಪ್ರಾಥಮಿಕ ಗುರಿಯಾಗಿದೆ ಇದರಿಂದ ಅವರು ರೋಗದಿಂದ ರಕ್ಷಣೆ ಪಡೆಯಬಹುದು ಮತ್ತು ನಾವು ಸಹಜ ಸ್ಥಿತಿಗೆ ಮರಳುವಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬಹುದು. ಈ ಉದ್ದೇಶಕ್ಕಾಗಿ ನಾವು ಯಾವುದೇ ಸೇವಾ ಶುಲ್ಕವನ್ನು ತೆಗೆದುಕೊಳ್ಳುತ್ತಿಲ್ಲ. ಇದು ಲಸಿಕೆ ತೆಗೆದುಕೊಳ್ಳಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುತ್ತದೆ ಎನ್ನುವುದು ನಮ್ಮ ಭಾವನೆ" ಎಂದು ಹೇಳಿದರು.

ಕೋವಾಕ್ಸಿನ್‍ಗೆ ಫ್ರೀಡಂ ಆಫರ್ 2021
ಕೋವಾಕ್ಸಿನ್‍ಗೆ ಫ್ರೀಡಂ ಆಫರ್ 2021ರ 12 ನೇ ಆಗಸ್ಟ್‌ನಿಂದ ಆಗಸ್ಟ್ 21 ರವರೆಗೆ ಇರುತ್ತದೆ. ಈ ಆಫರ್ ಮೊದಲ ಮತ್ತು ಎರಡನೇ ಡೋಸ್ ಎರಡಕ್ಕೂ ಮಾನ್ಯವಾಗಿರುತ್ತದೆ. ಮತ್ತು ಮೊದಲ ಡೋಸ್‍ನ ನಂತರ, ಮುಂದಿನ ಡೋಸ್‍ಗೆ ಅದೇ ದರವನ್ನು ಖಾತರಿಪಡಿಸಲಾಗುತ್ತದೆ. ಅಪೊಲೊ ಲಸಿಕೆ ಕೇಂದ್ರಗಳು ಬೆಳಿಗ್ಗೆ 8 ರಿಂದ ರಾತ್ರಿ 8ರ ವರೆಗೆ ತೆರೆದಿರುತ್ತವೆ. ಈ ಅವಧಿಯಲ್ಲಿ ಮತ್ತು ಕೋವಿಡ್ ಲಸಿಕೆ ಕುರಿತು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ತಮ್ಮ ಹತ್ತಿರದ ಅಪೊಲೊ ವ್ಯಾಕ್ಸಿನೇಷನ್ ಸೆಂಟರ್‌ಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು.

ಮೂರು ಲಸಿಕೆಗಳು ಲಭ್ಯ 2ಕ್ಕೆ ಆಫರ್
ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕ್ ಸಂಸ್ಥೆಗಳು ಸಂಶೋಧಿಸಿದ ಮತ್ತು ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಹೈದ್ರಾಬಾದಿನ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಇದಲ್ಲದೆ, ಭಾರತದಾದ್ಯಂತ ಅಪೋಲೋ ಆಸ್ಪತ್ರೆಯ 80 ಕೇಂದ್ರಗಳಲ್ಲಿ 10 ಲಕ್ಷ ಜನರಿಗೆ ಸ್ಪುಟ್ನಿಕ್-ವಿ ಲಸಿಕೆಯನ್ನು ವಿತರಿಸುವ ಗುರಿ ಹೊಂದಲಾಗಿದೆ.

ಸ್ಪುಟ್ನಿಕ್-ವಿ ಲಸಿಕೆಗೆ 995 ರೂಪಾಯಿ
ಮೊದಲ ಶ್ರೇಣಿ ಕಾರ್ಮಿಕರು, ಕಾರ್ಪೋರೇಟ್ ಉದ್ಯೋಗಿಗಳು ಮತ್ತು ಆದ್ಯತೆ ವಲಯವನ್ನು ಗುರುತಿಸಿ ಲಸಿಕೆ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ನೀಡುತ್ತಿರುವ ಸ್ಪುಟ್ನಿಕ್-ವಿ ಲಸಿಕೆಗೆ 995 ರೂಪಾಯಿ ಹಾಗೂ ಲಸಿಕೆ ವಿತರಣೆಗೆ 200 ರೂಪಾಯಿ ಸೇವಾ ಶುಲ್ಕ ವಿಧಿಸಲಾಗುತ್ತದೆ. ಒಂದು ಡೋಸ್ ಲಸಿಕೆಗೆ ಒಟ್ಟು 1,195 ರೂಪಾಯಿ ತೆಗೆದುಕೊಳ್ಳಲಾಗುತ್ತದೆ ಎಂದು ಅಪೋಲೋ ಗ್ರೂಪ್ ಆಫ್ ಹಾಸ್ಪಿಟಲ್ ಸ್ಪಷ್ಟಪಡಿಸಿದೆ.












Click it and Unblock the Notifications