ಸತತ 12 ಗಂಟೆ ಕಾರ್ಯಾಚರಣೆ: ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ
ಗುಂಟೂರು, ಆಗಸ್ಟ್ 16: ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಸತತ 12 ಗಂಟೆಗಳ ಕಾರ್ಯಾಚರಣೆಯ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಜೀವಂತವಾಗಿ ರಕ್ಷಿಸಿದ ಘಟನೆ ಆಂಧ್ರಪ್ರದೇಶ ಗುಂಟೂರಿನಲ್ಲಿ ನಡೆದಿದೆ.
ಗುಂಟೂರಿನ ಉಮ್ಮಿದಿವಾರಂ ಎಂಬ ಊರಿನ ಚಂದ್ರಶೇಖರ ಎಂಬ ಬಾಲಕ ಆಗಸ್ಟ್ 15 ರಂದು ಸಂಜೆ 4:30 ರ ಸಮಯಕ್ಕೆ ಇಲ್ಲಿನ ಕೊಳವೆ ಬಾವಿಯೊಂದಕ್ಕೆ ಬಿದ್ದಿದ್ದ.

ಕುಡಿಯುವ ನೀರಿಗಾಗಿ ತೋಡಿದ್ದ ಬಾವಿಯನ್ನು ಮುಚ್ಚದೇ ಬಿಟ್ಟ ಪರಿಣಾಮವೇ ಈ ಘಟನೆ ನಡೆದಿದೆ. ಮಗು ಬಾವಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯ ಗೃಹ ಸಚಿವ ಚಿನ್ನ ರಾಜಪ್ಪ ಮತ್ತು ಆರೋಗ್ಯ ಸಚಿವ ಕೆ.ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿ, ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿಗಳಿಗೆ ರಕ್ಷಣಾ ಕಾರ್ಯ ನಡೆಸುವಂತೆ ಆದೇಶಿಸಿದ್ದರು.
ಸತತ 12 ಗಂಟೆಗಳ ಕಾರ್ಯಾಚರಣೆಯ ನಂತರ ಇದೀಗ ಮಗುವನ್ನು ಜೀವಂತವಾಗಿ ಕೊಳವೆ ಬಾವಿಯಿಂದ ಹೊರತೆಗೆಯಲಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications