'ಟೈಮ್' ಮುಖಪುಟದಲ್ಲಿ ಮೋದಿ 'ಇಂಡಿಯಾಸ್ ಡಿವೈಡರ್ ಇನ್ ಚೀಫ್'

ಅಮೆರಿಕದ ವಾರಪತ್ರಿಕೆ 'ಟೈಮ್'ನ ಮುಖಪುಟ ಲೇಖನವಾಗಿ ನರೇಂದ್ರ ಮೋದಿ ಅವರ ಬಗ್ಗೆ ಲೇಖನ ಬಂದಿದ್ದು, ಮೇ 20, 2019ರ ಸಂಚಿಕೆಯಲ್ಲಿ ನರೇಂದ್ರ ಮೋದಿ ಭಾವಚಿತ್ರವನ್ನು ಹಾಕಿ, ವಿವಾದಾತ್ಮಕ ವರದಿಯನ್ನು ಪ್ರಕಟಿಸಲಾಗಿದೆ. 'ಇಂಡಿಯಾಸ್ ಡಿವೈಡರ್ ಇನ್ ಚೀಫ್' ಎಂದು ಶೀರ್ಷಿಕೆ ನೀಡಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು ಉದ್ದೇಶಪೂರ್ವಕವಾಗಿ ಹಿಂದೂ ಮತ್ತು ಮುಸ್ಲಿಮರನ್ನು ವಿಭಜನೆ ಮಾಡುತ್ತಿದೆ. ಮೋದಿಯ ವಿಜಯವು ಅಪನಂಬಿಕೆಯ ಭಾವಾಭಿವ್ಯಕ್ತಿ. ನೆಹರೂ ಅವರ ಜಾತ್ಯತೀತತೆ, ಸಮಾಜವಾದದ ಮೇಲೆ ದಾಳಿ ನಡೆಸಲಾಗಿದೆ. ಮೋದಿ "ಕಾಂಗ್ರೆಸ್ ಮುಕ್ತ" ಭಾರತದ ಬಗ್ಗೆ ಮಾತನಾಡುತ್ತಾರೆ. ಹಿಂದೂ-ಮುಸ್ಲಿಮರ ಮಧ್ಯೆ ಸೋದರತ್ವ ಬೆಳೆಸುವ ಯಾವ ಇಚ್ಛೆಯನ್ನು ಅವರು ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.

ಹಿಂದೂ ರಾಷ್ಟ್ರೀಯವಾದದ ಬಗ್ಗೆ ಪ್ರಸ್ತಾವ ಮಾಡಿರುವ ವರದಿಯಲ್ಲಿ ಇಪ್ಪತ್ತೇಳು ವರ್ಷದ ಹಿಂದೆ ನಡೆದ ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಕೂಡ ಹೇಳಲಾಗಿದೆ. "ಗುಂಪು ಹಲ್ಲೆ" ಬಗ್ಗೆ ವರದಿಯಲ್ಲಿ ಪ್ರಶ್ನೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಮೋದಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಲೇಖನದಲ್ಲಿ ಆರೋಪ ಮಾಡಲಾಗಿದೆ.

Americas TIME magazine published controversial article about Modi

ಮೋದಿ ಅಧಿಕಾರಕ್ಕೆ ಬಂದ ಮೇಲೆ ಅಲ್ಪಸಂಖ್ಯಾತರು ಮತ್ತು ಅವರ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳಿಂದ ಕಾರ್ಪೊರೇಟ್ ಹೌಸ್ ಗಳು, ಮಾಧ್ಯಮ ಸಂಸ್ಥೆಗಳು ತಮ್ಮ ನಂಬಿಕೆ ಕಳೆದುಕೊಂಡಿವೆ. ಸ್ವತಂತ್ರ ಭಾರತದ ಸಾಧನೆಗಳಾದ, ಜಾತ್ಯತೀತತೆ, ಉದಾರೀಕರಣ ಹಾಗೂ ಮಾಧ್ಯಮ ಸ್ವಾತಂತ್ರ್ಯವನ್ನು ಒಂದು ಪಿತೂರಿಗೆ ಒಳಪಟ್ಟಂತೆ ಕಾಣುವಂತಾಗಿದೆ ಎನ್ನಲಾಗಿದೆ.

ನರೇಂದ್ರ ಮೋದಿ ಈ ಹಿಂದೆ ಮೇ 18, 2015ರಲ್ಲಿ ಟೈಮ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು. ಬಹು ಪ್ರಭಾವಿ 100 ವ್ಯಕ್ತಿಗಳ್ ಪಟ್ಟಿಯಲ್ಲಿ 2014, 2015 ಮತ್ತು 2017ರಲ್ಲಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+