Akash Ambani: ₹10 ಕೋಟಿ ಕಾರಿಗೆ ಸೀಟ್ ಬೆಲ್ಟ್ ಇಲ್ವಾ?; ಅಂಬಾನಿ ಮಗನ ರೂಲ್ಸ್ ಬ್ರೇಕ್‌ಗೆ ನೆಟ್ಟಿಗರು ಹೇಳೋದೇನು?
Akash Ambani: ಯಾರೇ ಇರಲಿ ನಿಯಮದ ಪ್ರಕಾರ ಕಾರು ಚಾಲನೆ ಮಾಡುವವರು ಸೀಟ್ ಬೆಲ್ಟ್ ಧರಿಸಲೇಬೇಕಾಗುತ್ತದೆ. ಇದು ಚಾಲಕರಿಗೆ ರಕ್ಷಾ ಕವಚವಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಇದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಹಲವರು ಈ ನಿಯಮ ಉಲ್ಲಂಘಿಸಿ ಜೀವ ಕಳೆದುಕೊಂಡ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಇದೀಗ ದೇಶದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಅಂಬಾನಿ ಮಗ ಈ ನಿಯಮವನ್ನು ಉಲ್ಲಂಘನೆ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಡವರೇ ಇರಲಿ ಶ್ರೀಮಂತನೇ ಆಗಿರಲಿ ಕಾನೂನಿನ ಮುಂದೆ ಎಲ್ಲರೂ ಒಂದೆ ಹಾಗೂ ತಲೇಬಾಗಲೇಬೇಕಾಗುತ್ತದೆ. ಆದರೆ ಕೆಲವು ವೇಳೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ತಮ್ಮದೇನು ತಪ್ಪಿಲ್ಲ ಎನ್ನುವಂತೆ ನಟಿಸುವ ಮೂಲಕ ಶ್ರೀಮಂತರ ಮಕ್ಕಳು ಪೊಲೀಸರ ಮುಂದೆಯೇ ದರ್ಪ ತೋರಿರುವ ಘಟನೆಗಳು ನಡೆದಿವೆ. ಅಲ್ಲದೆ, ತಮಗಿಷ್ಟ ಬಂದಂತೆ ವಾಹನ ಚಾಲನೆ ಮಾಡಿ ನಿಯಮ ಉಲ್ಲಂಘಿಸಿರುವ ಉದಾಹರಣೆಗಳಿವೆ.

ಇದೀಗ ರೂಲ್ಸ್ ಬ್ರೇಕ್ ಮಾಡಿದ ಸಾಲಿಗೆ ವಿಶ್ವದ ಟಾಪ್ ಶ್ರೀಮಂತರ ಪಟ್ಟಿಯಲ್ಲಿರುವ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರ ಮಗ ಆಕಾಶ್ ಅಂಬಾನಿ ಸೇರಿದ್ದಾರೆ. 10,00,00,000 ಕೋಟಿ ರೂಪಾಯಿ ಮೌಲ್ಯದ ಕೆಂಪು ಬಣ್ಣದ ಐಷಾರಾಮಿ ಫೆರಾರಿ ಪುರೊಸಾಂಗೆ ಎಸ್‌ಯುವಿಯನ್ನು ಸೀಟ್ ಬೆಲ್ಟ್ ಧರಿಸದೆ ಓಡಿಸುತ್ತಿರುವ ದೃಶ್ಯ ಕಂಡುಬಂದಿದೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುದ್ದಿದ್ದು, ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಅಂಬಾನಿ ಅವರ ಕುಟುಂಬವು ಒಂದಲ್ಲ ಒಂದು ವಿಚಾರಕ್ಕೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಅನಂತ್ ಅಂಬಾನಿಯವರ ವಿವಾದ ಅದ್ಧೂರಿಯಾಗಿ ನಡೆದಿದ್ದು, ಈ ಮದುವೆಯ ಕಾರ್ಯಕ್ರಮವನ್ನು ಕೋಟಿ.. ಕೋಟಿ ಖರ್ಚು ಮಾಡಿ ಏರ್ಪಡು ಮಾಡಲಾಗಿತ್ತು. ಆಗ ಈ ವಿಚಾರ ಭಾರೀ ಚರ್ಚೆಯಾಗಿತ್ತು. ಇದೀಗ ಮುಖೇಶ್ ಅಂಬಾನಿಯವರ ಮತ್ತೊಬ್ಬ ಮಗ ಆಕಾಶ್ ಅಂಬಾನಿ ಕೋಟಿ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೇ ಕಾರು ಚಾಲನೆ ಮಾಡಿರುವ ವಿಚಾರ ಭಾರೀ ವೈರಲ್ ಆಗುತ್ತಿದೆ.
ಅಂಬಾನಿ ಕುಟುಂಬವು ಯಾವುದಾದರೂ ಕಾರ್ಯಕ್ರಮಕ್ಕೆ ಅಥವಾ ಹೊರಗಡೆ ಹೊರಟರೆ, ರೋಲ್ಸ್ ರಾಯ್ಸ್, ಮರ್ಸಿಡಿಸ್ ಮತ್ತು ರೇಂಜ್ ರೋವರ್‌ಗಳಂತಹ ಐಷಾರಾಮಿ ಕಾರುಗಳನ್ನೇ ಬಳಸುತ್ತಾರೆ. ಆದರೆ ಇದೀಗ ಮೊದಲ ಬಾರಿ ಆಕಾಶ್ ಅಂಬಾನಿ ನಿಯಮ ಉಲ್ಲಂಘಿಸಿ ಸುದ್ದಿಯಾಗಿದ್ದಾರೆ.
ಇನ್ನು ಆಕಾಶ್ ಅಂಬಾನಿ ಸೀಟ್ ಬೆಲ್ಟ್ ಧರಿಸದೇ ಫೆರಾರಿ ಪುರೊಸಾಂಗು ಕಾರು ಓಡಿಸುತ್ತಿರುವ ವಿಡಿಯೋವನ್ನು ಕಾರ್ ಜರ್ನಿ 99 ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ ಹಂಚಿಕೊಳ್ಳಲಾಗಿದೆ. ಭದ್ರತಾ ಸಿಬ್ಬಂದಿಯ ಕಾರು ಹಾಗೂ ಪೊಲೀಸ್ ಅಧಿಕಾರಿಗಳ ಕಾರು ಸಹ ಕೂಡ ಪಕ್ಕದಲ್ಲಿ ಬತ್ತಿರುವುದು ಇದರಲ್ಲಿ ಸೆರೆಯಾಗಿದೆ. ಇದನ್ನು ಗಮನಿಸಿದ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಲ್ಲಾರಿಗೂ ಮಾದರಿಯಾಗಬೇಕಾದವರೇ ಹೀಗೆ ನಿಯಮ ಉಲ್ಲಂಘನೆ ಮಾಡಿದರೆ ಹೇಗೆ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಮತ್ತೊಮಬ್ಬರು 10 ಕೋಟಿ ರೂಪಾ ಕಾರಿಟ್ಟಿದ್ದಾರೆ ಆದರೆ ಒಂದು ಸೀಟ್ ಬೆಲ್ಟ್ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications