'ಮೇ 4ರಿಂದ ವಿಮಾನ ಹಾರಾಟದ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ'
ನವದೆಹಲಿ, ಏಪ್ರಿಲ್ 20: ವಿಮಾನ ಟಿಕೆಟ್ ಬುಕಿಂಗ್‌ಗಳನ್ನು ನಿಲ್ಲಿಸಿ ಎಂದು ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಸರ್ಕಾರವು ಲಾಕ್‌ಡೌನ್ ನಿರ್ಬಂಧಗಳನ್ನು ರದ್ದುಪಡಿಸಿದ ನಂತರ ಮೇ 4ರಿಂದ ವಿಮಾನ ಹಾರಾಟವನ್ನು ಪುನರಾರಂಭಿಸಲು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.
ಹೀಗಾಗಿ ವಿಮಾನಯಾನ ಸಂಸ್ಥೆಗಳು ಯಾವುದೇ ಹೊಸ ಬುಕಿಂಗ್ ತೆಗೆದುಕೊಳ್ಳುವುದನ್ನು ತಡೆಯಬೇಕು ಎಂದು ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಭಾನುವಾರ (ಏಪ್ರಿಲ್ 19) ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳು ಮೇಲೆ ವಿವರಿಸಿದಂತೆ ಟಿಕೆಟ್ ಕಾಯ್ದಿರಿಸುವುದನ್ನು ತಪ್ಪಿಸಲು ನಿರ್ದೇಶಿಸಲಾಗಿದೆ. ಕಾರ್ಯಾಚರಣೆಯನ್ನು ಪುನರಾರಂಭಿಸಲು ಅವರಿಗೆ ಸಾಕಷ್ಟು ಸೂಚನೆ ಮತ್ತು ಸಮಯವನ್ನು ನೀಡಲಾಗುವುದು ಎಂದು ವಿಮಾನಯಾನ ಸಂಸ್ಥೆಗಳು ಗಮನಿಸಬಹುದು ಎಂದು ಅದು ಹೇಳಿದೆ.
ಡಿಜಿಸಿಎ ಹೊರಡಿಸಿರುವ ಹೇಳಿಕೆಯಲ್ಲಿ 2020ರ ಮೇ 4ರಂದು ವಿಮಾನಯಾನ ಸಂಸ್ಥೆಗಳಿಗೆ ಪ್ರಯಾಣದ ಟಿಕೆಟ್ ಕಾಯ್ದಿರಿಸುವಿಕೆಯನ್ನು ಪ್ರಾರಂಭಿಸಲು ಯಾವುದೇ ನಿರ್ದೇಶನ / ಕ್ಲಿಯರೆನ್ಸ್ ಇರಲಿಲ್ಲ.
ಈ ನಿಟ್ಟಿನಲ್ಲಿ ದೇಶೀಯ / ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ. ಆದಾಗ್ಯೂ ವಿಮಾನಯಾನ ಸಂಸ್ಥೆಗಳು ಪ್ರಯಾಣಕ್ಕಾಗಿ ಟಿಕೆಟ್ ಕಾಯ್ದಿರಿಸಲು ಪ್ರಾರಂಭಿಸಿವೆ ಎಂದು ಗಮನಿಸಲಾಗಿದೆ.












Click it and Unblock the Notifications