Air India: ಏರ್ ಇಂಡಿಯಾ ಟಕೆಟ್ ದರದಲ್ಲಿ ಭರ್ಜರಿ ಆಫರ್ ಘೋಷಣೆ
Air India Good News: ಭಾರತದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಲ್ಲಿ ಏರ್ ಇಂಡಿಯಾ ಒಂದಾಗಿದೆ. ಇದೀಗ ಈ ಏರ್‌ಲೈನ್ಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದು, ಟಿಕೆಟ್ ದರದಲ್ಲಿ ಭರ್ಜರಿ ಆಫರ್ ಘೋಷಣೆ ಮಾಡಿದೆ. ಹಾಗಾದ್ರೆ ಕಾರಣ ಏನು ಹಾಗೂ ಟಿಕೆಟ್ ದರಗಳ ಅಂಕಿಅಂಶಗಳ ಸಹಿತ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತದ ಪ್ರತಿಷ್ಠಿತ ಏರ್‌ಲೈನ್ಸ್‌ನಲ್ಲಿ ಏರ್ ಇಂಡಿಯಾ ಕೂಡ ಒಂದಾಗಿದ್ದು, ಹಾಗಾಗ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಟಿಕೆಟ್‌ಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ಭರ್ಜರಿ ಆಫರ್ ಘೋಷಣೆ ಮಾಡಿದೆ. ದರಗಳು ಎಷ್ಟಿವೆ ಹಾಗೂ ಈ ದರಗಳು ಯಾರಿಗೆಲ್ಲ ಅನ್ವಯವಾಗಲಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಏರ್ ಇಂಡಿಯಾ ವಿಮಾನ ಟಿಕೆಟ್ ದರದಲ್ಲಿ ಭರ್ಜರಿ ಆಫರ್ ಘೋಷಿಸಿದ್ದು, ಬರೋಬ್ಬರಿ 50 ಲಕ್ಷ ಸೀಟುಗಳನ್ನು ಬುಕಿಂಗ್ ಮಾಡುವುದಕ್ಕೆ ಗ್ರಾಹಕರಿಗೆ ಈ ಆಫರ್ ಅನ್ನು ನೀಡಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈ ಆಫರ್‌ಗಳು ಅನ್ವಯ ಆಗಲಿವೆ ಅಂತಾ ವರದಿಯಾಗಿದೆ.
ಫ್ರೀಡಂ ಸೇಲ್ ಅಡಿಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಲ್ಲಿ 50 ಲಕ್ಷ ಸೀಟುಗಳನ್ನು ಆಫರ್ ಮಾಡುತ್ತಿದೆ. ದೇಶೀಯ ಪ್ರಯಾಣದ ಟಿಕೆಟ್ ದರಗಳು 1,279 ರೂಪಾಯಿಯಿಂದ ಆರಂಭ ಆಗಲಿದ್ದು, ಅಂತಾರಾಷ್ಟ್ರೀಯ ಟಿಕೆಟ್ ದರಗಳು 4,279 ರೂಪಾಯಿಯಿಂದ ಆರಂಭವಾಗಲಿವೆ.
ಏರ್ ಇಂಡಿಯಾವು ಯುಎಇಯ ಸ್ಥಳಗಳಿಗೂ ಆಫರ್ ದರದಲ್ಲಿ ಟಿಕೆಟ್ ಲಭ್ಯ ಇದ್ದು, ಭಾರತದಿಂದ ಅಬುಧಾಬಿ, ದುಬೈ, ಶಾರ್ಜಾ, ರಾಸ್ ಅಲ್ ಖೈಮಾ ಮುಂತಾದ ಸ್ಥಳಗಳಿಗೆ ಬುಕ್ ಮಾಡಬಹುದಾಗಿದೆ. ಆಗಸ್ಟ್ 10ರಿಂದಲೇ ಏರ್‌ಲೈನ್ಸ್ ವೆಬ್‌ಸೈಟ್ ಮತ್ತು ಆಪ್ ಮೂಲಕ ಆಫರ್ ಆರಂಭ ಆಗುದ್ದು, ಇದು ಆಗಸ್ಟ್ 15ರ ವರೆಗೂ ಇರಲಿದೆ.
ಪ್ರಯಾಣದ ಅವಕಾಶ ಎಲ್ಲಿವರೆಗೆ ಇರಲಿದೆ?: ಇನ್ನು ಫ್ರೀಡಂ ಸೇಲ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡಿದ ಪ್ರಯಾಣ ಇದೇ ಆಗಸ್ಟ್ 19ರಿಂದ 2026ರ ಮಾರ್ಚ್ 31ರ ವರೆಗಿನ ಪ್ರಯಾಣಕ್ಕೆ ಅನ್ವಯ ಆಗಲಿದೆ. ಆದ್ದರಿಂದ ಇದೀಗ ಒಂದು ವರ್ಷಕ್ಕಿಂತ ಮೊದಲೇ ವಿಮಾನದ ಟಿಕೆಟ್ ಬುಕ್ ಮಾಡಬಹುದು. ಓಣಂ, ಪೂಜಾ ರಜೆ, ಕ್ರಿಸ್‌ಮಸ್ ಸೇರಿ ಹಲವು ರಜಾದಿನಗಳು ಇದೇ ಅವಧಿಯಲ್ಲಿ ಬರಲಿದ್ದು, ಬುಕ್ ಮಾಡಿಕೊಂಡವರಿಗೆ ಪ್ರಯಾಣ ಮಾಡಲು ತುಂಬಾ ಸಹಾಯ ಆದಂತಾಗಲಿದೆ.
ವಿಮಾನಯಾನ ಸಂಸ್ಥೆಯ ಎಕ್ಸ್‌ಪ್ರೆಸ್ ಮೌಲ್ಯ ದರಗಳು ದೇಶೀಯ ಪ್ರಯಾಣಕ್ಕೆ ₹1,379ರಿಂದ ಆರಂಭವಾಗಲಿದ್ದು, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ₹4,479ರಿಂದ ಆರಂಭ ಆಗುತ್ತವೆ. ಈ ದರಗಳಲ್ಲಿ ಸಾಮಾನ್ಯ ಚೆಕ್-ಇನ್ ಬ್ಯಾಗೇಜ್ ಅಲವೆನ್ಸ್ ಸೇರಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸಶಸ್ತ್ರ ಪಡೆಗಳ ಸಿಬ್ಬಂದಿ ಹಾಗೂ ಅವರ ಅವಲಂಬಿತರಿಗೆ ವಿಶೇಷ ದರಗಳ ಜೊತೆಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ದೇಶದಲ್ಲಿ ಇದುವರೆಗೂ ವಿಮಾನ ಪ್ರಯಾಣದ ಮಾಡದವರು ತುಂಬಾ ಜನರಿದ್ದಾರೆ. ದೇಶದಲ್ಲಿ ಈವರೆಗೂ ಶೇಕಡ 85ಕ್ಕೂ ಅಧಿಕ ಜನರು ವಿಮಾನ ಪ್ರಯಾಣ ಮಾಡಿಲ್ಲ. ಉಡಾನ್ ಯೋಜನೆ ಜಾರಿಗೆ ಬರುವವರೆಗೂ ವಿಮಾನ ಪ್ರಯಾಣ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತ ಎನ್ನುವಂತಿತ್ತು. ಆದರೆ, ಇದೀಗ ಎಲ್ಲಾ ವರ್ಗದ ಜನರು ಸಹ ವಿಮಾನದಲ್ಲಿ ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ.
ಇದೀಗ ವಿಮಾನ ಪ್ರಯಾಣ ಟಿಕೆಟ್ ದರಗಳು ಕಡಿಮೆಯಾಗಿದ್ದು, ಒಮ್ಮೆಯೂ ಪ್ರತಿನಿತ್ಯ ಪ್ರಯಾಣ ಮಾಡುವವರಿಗೆ ಹಾಗೂ ವಿಮಾನದಲ್ಲಿ ಪ್ರಯಾಣ ಮಾಡದವರಿಗೆ ಉತ್ತಮ ಅವಕಾಶವಾಗಿದೆ. ಫ್ರೀಡಂ ಸೇಲ್ ಆಫರ್ ಅನ್ನು ಉಪಯೋಗಿಸಿಕೊಂಡು ವಿಮಾನದಲ್ಲಿ ಹೋಗುವುದಕ್ಕೆ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. ಈ ಆಫರ್ ಕೇವಲ 5 ದಿನಗಳು ಮಾತ್ರ ಚಾಲ್ತಿಯಲ್ಲಿರಲಿದೆ. ಆದ್ದರಿಂದ ನೀವೂ ಒಮ್ಮಯಾದರೂ ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದರೆ ಇದೇ ಉತ್ತಮ ಅವಕಾಶ ಆಗಿದೆ. ಯಾಕಂದ್ರೆ ಇಂತಹ ಆಫರ್ ಮತ್ತೆ ಯಾವಾಗ ಬರುತ್ತದೆಯೋ ಗೊತ್ತಿಲ್ಲ.
ಟಿಕೆಟ್ ದರದಲ್ಲಿ ಭರ್ಜರಿ ಆಫರ್
* ದೇಶೀಯ ಟಿಕೆಟ್ ದರ: 1,279 ರೂಪಾಯಿನಿಂದ ಆರಂಭ
* ಅಂತಾರಾಷ್ಟ್ರೀಯ ಟಿಕೆಟ್ ದರ: 4,279 ರೂಪಾಯಿನಿಂದ ಆರಂಭ
* ಬುಕಿಂಗ್ ಆರಂಭ ದಿನಾಂಕ: ಆಗಸ್ಟ್ 10
* ಆಫರ್ ಎಲ್ಲಿವರೆಗೂ: ಆಗಸ್ಟ್ 15
* ಎಷ್ಟು ಸೀಟ್‌ಗಳ ಆಫರ್: 50 ಲಕ್ಷ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications