ಯುಕೆಗೆ ಹಾರಿದ ಕಾಂಗ್ರೆಸ್ ಯುವರಾಜ: ಟ್ವಿಟ್ಟರ್ ನಲ್ಲಿ ಗುಸುಗುಸು

Posted By:
Subscribe to Oneindia Kannada

ಈ ಬಾರಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಖುದ್ದಾಗಿ ಹೊಸ ವರ್ಷದ ಶುಭಾಶಯ ಹೇಳಲು ಯಾರೂ ದೆಹಲಿಗೆ ಹೋಗುವ ಅವಶ್ಯಕತೆಯಿಲ್ಲ. ಯಾಕೆಂದರೆ ಯುವರಾಜರು ಸ್ವದೇಶದಲ್ಲಿ ಇರುವುದಿಲ್ಲ.

ಕೆಲವು ದಿನದ ಮಟ್ಟಿಗೆ ಯುರೋಪ್ ಗೆ ಹೋಗುತ್ತಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ರಾಹುಲ್ ಗಾಂಧಿ, ತನ್ನ 330 ಸಾವಿರ ಹಿಂಬಾಲಕರಿಗೆ ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ. (ಯುರೋಪ್ ವಿಮಾನ ಹತ್ತಿದ ರಾಹುಲ್ ಗಾಂಧಿ)

ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ 130ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ರಾಹುಲ್ ಗಾಂಧಿ ಬ್ರಿಟನ್ ನತ್ತ ಪ್ರಯಾಣಿಸಿದ್ದಾರೆ.

ರಾಹುಲ್ ಗಾಂಧಿ ಯುಕೆ ಟ್ರಿಪ್ ಬಗ್ಗೆ ಟ್ವಿಟ್ಟರ್ ನಲ್ಲಿ ಗುಸುಗುಸು ಆರಂಭವಾಗಿದೆ. ಬಹುಷಃ ಕಳೆದ ರಾತ್ರಿ ಯುರೋಪ್ ನಲ್ಲಿ ಇದುವರೆಗೆ ನೋಡದ ಪ್ರದೇಶ ರಾಹುಲ್ ಗಾಂಧಿಗೆ ಕನಸಿನಲ್ಲಿ ಬಂದಿರಬಹುದು, ಕನಸನ್ನು ಸಾಕಾರ ಮಾಡಲು ರಾಹುಲ್ ಲಂಡನ್ ನತ್ತ ಪ್ರಯಾಣಿಸುತ್ತಿರಬಹುದೆಂದು ವ್ಯಂಗ್ಯವಾಡಿದವರೂ ಇದ್ದಾರೆ.

ದೇಶ ಬಿಟ್ಟು ಹಾರಲು ಪಟಿಯಾಲ ಕೋರ್ಟ್ ನಿಮಗೆ ಅನುಮತಿ ನೀಡಿದೆಯೇ ಎಂದು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದವರೂ ಇದ್ದಾರೆ. ಕೆಲವೊಂದು ಹಾಸ್ಯಾಸ್ಪದ ಟ್ವೀಟ್ ಸಂದೇಶವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ರಾಹುಲ್ ಗಾಂಧಿ ಟ್ವೀಟ್

ಕೆಲವು ದಿನಗಳ ಮಟ್ಟಿಗೆ ಯುರೋಪ್ ಗೆ ಪ್ರಯಾಣಿಸುತ್ತಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ - ರಾಹುಲ್ ಗಾಂಧಿ ಟ್ವೀಟ್.

ಚೆನ್ನೈ ಸಂತ್ರಸ್ತರು

ಎಲ್ಲಿದೆ ಒಳ್ಳೆದಿನ? ಚೆನ್ನೈನ ಪ್ರವಾಹದ ಸಂತ್ರಸ್ತರ ಜೀವನ ಇನ್ನೂ ಸರಿದಾರಿಗೆ ಬರದಿರುವ ಈ ವೇಳೆಯಲ್ಲಿ, ರಾಹುಲ್ ಗಾಂಧಿ ಹೊಸವರ್ಷಾಚರಣೆಗೆ ಯುರೋಪ್ ಹೋಗುತ್ತಿದ್ದಾರೆ.

ಸಂಸತ್ ಅಧಿವೇಶನ

ಸಂಸತ್ ಚಳಿಗಾಲದ ಅಧಿವೇಶನದ ವೇಳೆ ರಾಹುಲ್ ಗಾಂಧಿ ಯುರೋಪ್ ಗೆ ಪ್ರಯಾಣಿಸಿದ್ದರೆ ಚೆನ್ನಾಗಿರುತ್ತಿತ್ತು.

ನ್ಯಾಷನಲ್ ಹೆರಾಲ್ಡ್ ಕೇಸ್

ನೀವು ಭಾರತಕ್ಕೆ ವಾಪಸ್ ಬರುವುದಿಲ್ಲ ಎಂದು ಪ್ರಾಮಿಸ್ ಮಾಡಿದರೆ ಸುಬ್ರಮಣಿಯನ್ ಸ್ವಾಮಿಯವರಿಗೆ ನ್ಯಾಷನಲ್ ಹೆರಾಲ್ಡ್ ಕೇಸ್ ಹಿಂದಕ್ಕೆ ಪಡೆಯಲು ಮನವಿ ಮಾಡಿಕೊಳ್ಳಬಹುದು.

ಫೆಬ್ರವರಿಗೆ ಮುನ್ನ ದೇಶಕ್ಕೆ ವಾಪಸ್ ಬನ್ನಿ

20.2.2016ರ ಮುನ್ನ ಭಾರತಕ್ಕೆ ವಾಪಸ್ ಬರಲು ಮರೆಯದಿರಿ ಹ್ಯಾಪ್ಪಿ ನ್ಯೂ ನ್ಯಾಷನಲ್ ಹೆರಾಲ್ಡ್ ಈಯರ್ 2016.

ಯಾವಗಲೂ ರಜೆಯಲ್ಲಿ

ಯಾವಾಗಲೂ ಗ್ರಾಮೀಣ ಪ್ರವಾಸೋದ್ಯಮದ ರಜೆಯಲ್ಲಿರುವ ರಾಹುಲ್ ಗೆ ಮತ್ತೆ ರಜೆ ಏಕೆ?

ಇದು ರಾಹುಲ್ ಮತ್ತೆ ಮೋದಿಗಿರುವ ವ್ಯತ್ಯಾಸ

ಪ್ರದಾನಿ ಮೋದಿ ಒಂದೇ ದಿನ ಮೂರು ದೇಶ ಕವರ್ ಮಾಡುತ್ತಾರೆ, ಇದು ಮೋದಿ ಮತ್ತು ರಾಹುಲ್ ಗಾಂಧಿಗಿರುವ ವ್ಯತ್ಯಾಸ.

ಸ್ವಚ್ಚ ಭಾರತ್

ಸ್ವಚ್ಚ ಭಾರತ್ ಪ್ರಾಜೆಕ್ಟ್ ಸರಿಯಾಗಿ ಕಾರ್ಯ ನಿರ್ವಹಿಸುವಂತಾಗಲು ರಾಹುಲ್ ಯುಕೆಗೆ ಪ್ರಯಾಣಿಸುತ್ತಿದ್ದಾರಾ?

ರಾಹುಲ್ ಗಾಂಧಿ

ರಾಹುಲ್ ಗಾಂಧಿ ವಿದೇಶ ಪ್ರವಾಸ ಹೀಗಿರುತ್ತೆ

ವಾರ್ಷಿಕ ಲಾಂಡ್ರಿ

ವಾರ್ಷಿಕ ಲಾಂಡ್ರಿಗಾಗಿ ರಾಹುಲ್ ಬಹುಷಃ ಯುಕೆಗೆ ಪ್ರಯಾಣಿಸುತ್ತಿರಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
AICC Vice President Rahul Gandhi tweeted that he will be travelling to Europe for New Year. As expected, Twitterati tweeted back with questions and comments.
Please Wait while comments are loading...