ಅಹಮದಾಬಾದ್ ಸ್ಫೋಟ, ಕರ್ನಾಟಕದಲ್ಲಿ ಆರೋಪಿ ಬಂಧನ

ಬೆಂಗಳೂರು, ಜೂನ್ 20 : 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಕರ್ನಾಟಕದಲ್ಲಿ ಸಿಕ್ಕಿಬಿದ್ದಿದ್ದಾನೆ. ಈತ ಇಂಡಿಯನ್ ಮುಜಾಹಿದ್ದೀನಿ ಉಗ್ರ ಸಂಘಟನೆಯ ಸದಸ್ಯನೆಂದು ಶಂಕಿಸಲಾಗಿದೆ.

ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಗುಜರಾತ್‌ನ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ನಾಸೀರ್ ರಂಗ್ರೇಜ್‌ನನ್ನು ಬಂಧಿಸಿ, ಗುಜರಾತ್‌ಗೆ ಕರೆದುಕೊಂಡು ಹೋಗಿದ್ದಾರೆ. ಸರಣಿ ಬಾಂಬ್ ಸ್ಫೋಟ ಪ್ರಕರಣದ ಬಳಿಕ ರಂಗ್ರೇಜ್ ತಲೆಮರೆಸಿಕೊಂಡಿದ್ದ. [ಅಹಮದಾಬಾದ್ ಸ್ಫೋಟ ಸಿಮಿ ಉಗ್ರನ ಬಂಧನ]

ahmedabad

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಆಲಂ ಜೆಬ್ ಅಫ್ರೀದಿ ಎಂಬ ಉಗ್ರನನ್ನು ಬಂಧಿಸಲಾಗಿತ್ತು. ಆತನ ವಿಚಾರಣೆ ಬಳಿಕ ನಾಸೀರ್ ರಂಗ್ರೇಜ್‌ ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಉಗ್ರನನ್ನು ಗುಜರಾತ್‌ಗೆ ಕರೆದುಕೊಂಡು ಹೋಗಲಾಗಿದೆ.

2008ರ ಜುಲೈ 26ರಂದು ಅಹಮದಾಬಾದ್‌ನ 21 ಕಡೆ 70 ನಿಮಿಷಗಳ ಅಂತದಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. 56 ಜನರು ಸ್ಫೋಟದಲ್ಲಿ ಮೃತಪಟ್ಟಿದ್ದರು. ಸ್ಫೋಟ ನಡೆಸುವ ಕುರಿತು ಉಗ್ರರು ಪೊಲೀಸರಿಗೆ ಇ ಮೇಲ್ ಕಳಿಸಿದ್ದರು. ಇ ಮೇಲ್ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಕೆಲವೇ ಕ್ಷಣಗಳಲ್ಲಿ ಬಾಂಬ್ ಸ್ಫೋಟಗೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+