Get Updates
Get notified of breaking news, exclusive insights, and must-see stories!

ಇಂಡಿಯಾ ಟುಡೇ ಸಮೀಕ್ಷೆ: ಯಾರೇ ಕೂಗಾಡಲಿ ವೋಟ್ ಶೇರಿಂಗ್ ನಲ್ಲಿ ಬಿಜೆಪಿಯೇ ನಂಬರ್ 1

ಸಾರ್ವತ್ರಿಕ ಚುನಾವಣೆಗೆ ಮುನ್ನ ವಿವಿಧ ವಾಹಿನಿಗಳು ನಡೆಸುತ್ತಿರುವ ಪೋಲ್ ಸರ್ವೇ ಅಥವಾ ಮೂಡ್ ಆಫ್ ದಿ ನೇಶನ್ ನಲ್ಲಿ, ಹಿಂದಿ ಬೆಲ್ಟ್ ಭಾಗದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದ್ದರೂ, ದೇಶದ ಇತರ ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆಯನ್ನು ಸಾಧಿಸುವ ಲಕ್ಷಣಗಳು ಕಾಣಿಸುತ್ತಿವೆ.

ಇಂಡಿಯಾ ಟುಡೇ - ಕಾರ್ವಿ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪ್ರಕಾರ, ಇದೀಗ ಲೋಕಸಭಾ ಚುನಾವಣೆ ನಡೆದರೆ, ದೇಶದ ಉತ್ತರ ಭಾಗವನ್ನೂ ಸೇರಿಸಿ, ಬಿಜೆಪಿ ಮೈತ್ರಿಕೂಟ ಪಡೆಯುವ ವೋಟ್ ಶೇರಿಂಗ್, ಇತರ ಪಕ್ಷಗಳಿಗಿಂತ ಹೆಚ್ಚಿದೆ.

ಸಮೀಕ್ಷೆಯಂತೆ, ದೆಹಲಿ, ಹರ್ಯಾಣ, ಪಂಜಾಬ್, ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಮೈತ್ರಿಕೂಟ ಗಳಿಸಬಹುದಾದ ಮತಪ್ರಮಾಣ, ಇತರ ಒಕ್ಕೂಟ ಪಕ್ಷಗಳಿಗಿಂತ ಹೆಚ್ಚಿದ್ದರೂ, ಅದು ಅಂತಿಮವಾಗಿ ಗಳಿಸಬಹುದಾದ ಸೀಟಿನಲ್ಲಿ ಹೇಗೆ ವ್ಯತ್ಯಾಸವನ್ನು ತರಬಲ್ಲದು ಎನ್ನುವುದಕ್ಕೆ ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

ದೇಶದ ಉತ್ತರಭಾಗದಲ್ಲಿ ಬಿಜೆಪಿ, ಕಳೆದ ಬಾರಿ (2014) ತೋರಿದ ಸಾಧನೆ ಪುನಾರವರ್ತನೆಯಾಗುವ ಸಾಧ್ಯತೆ ಕಮ್ಮಿ. ಪ್ರಮುಖವಾಗಿ, ಉತ್ತರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳು, ರಾಷ್ಟ್ರೀಯ ಪಕ್ಷಕ್ಕೆ ಭಾರೀ ಪೈಪೋಟಿಯನ್ನು ನೀಡಲಿದೆ.

ಯೋಗಿ ಆದಿತ್ಯನಾಥ್ ಉತ್ತಮ ಮುಖ್ಯಮಂತ್ರಿ

ಯೋಗಿ ಆದಿತ್ಯನಾಥ್ ಉತ್ತಮ ಮುಖ್ಯಮಂತ್ರಿ

ಸದ್ಯದ ದೇಶದ ಜನರ ಮೂಡ್ ಪ್ರಕಾರ, ದೇಶದ ಉತ್ತರ ಭಾಗದಲ್ಲಿ ಯುಪಿಎ ಮೈತ್ರಿಕೂಟ 20, ಎನ್ಡಿಎ 66, ಪ್ರಾದೇಶಿಕ ಪಕ್ಷಗಳು ಶೇ. 37% ಅಥವಾ 65 ಸೀಟನ್ನು ಪಡೆಯುವ ಸಾಧ್ಯತೆಯಿದೆ. ಯೋಗಿ ಆದಿತ್ಯನಾಥ್ ಉತ್ತಮ ಮುಖ್ಯಮಂತ್ರಿ ಎಂದು ಶೇ 40ರಷ್ಟು ಜನರು ವೋಟ್ ಮಾಡಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ.

ಬಿಜೆಪಿ ಮೈತ್ರಿಕೂಟ

ಬಿಜೆಪಿ ಮೈತ್ರಿಕೂಟ

ಸರ್ವೇ ಪ್ರಕಾರ, ಬಿಜೆಪಿ ಮೈತ್ರಿಕೂಟ ಅಸ್ಸಾಂ, ಬಿಹಾರ, ಒರಿಸ್ಸಾ, ಜಾರ್ಖಂಡ ಮತ್ತು ಪಶ್ಚಿಮ ಬಂಗಾಳದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳಲಿದೆ. 19 ರಾಜ್ಯದ, 97 ಲೋಕಸಭಾ ಕ್ಷೇತ್ರದ, 13,179 ಮತದಾರರ ಅಭಿಪ್ರಾಯವನ್ನು ಪಡೆದು, ಈ ಸಮೀಕ್ಷೆಯನ್ನು ಸಿದ್ದಪಡಿಸಲಾಗಿದೆ.

ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ

ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ

ಸಮೀಕ್ಷೆ ಪ್ರಕಾರ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಶೇ. 46 ಮತಪ್ರಮಾಣ ಸಿಗುವ ಸಾಧ್ಯತೆಯಿದೆ. ಆದರೆ, ಯುಪಿಎ ಮೈತ್ರಿಕೂಟ, ದೇಶದ ಪಶ್ಚಿಮ ಭಾಗದಲ್ಲಿ ಗಮನಾರ್ಹ ಸಾಧನೆ ತೋರುವ ಸಾಧ್ಯತೆಯಿದ್ದು ಶೇ. 42 ವೋಟ್ ಶೇರಿಂಗ್ ಪಡೆಯಲಿದೆ. ಈ ಭಾಗದಲ್ಲಿ ಪ್ರಾದೇಶಿಕ ಪಕ್ಷಗಳು ಉತ್ತಮ ಸಾಧನೆ ತೋರುವ ಸಾಧ್ಯತೆ ಕಮ್ಮಿ.

ದೇಶದ ದಕ್ಷಿಣಭಾಗ

ದೇಶದ ದಕ್ಷಿಣಭಾಗ

ಆದರೆ, ದೇಶದ ದಕ್ಷಿಣಭಾಗದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆಯಾಗಲಿದೆ. ಎನ್ಡಿಎ ಮೈತ್ರಿಕೂಟ ಶೇ. 18 ಪಡೆಯುವ ಸಾಧ್ಯತೆಯಿದ್ದರೆ, ಇತರರು ಶೇ. 43 ಮತಪ್ರಮಾಣ ಪಡೆಯುವ ಸಾಧ್ಯತೆಯಿದೆ ಎನ್ನುವುದು ಸಮೀಕ್ಷೆಯಲ್ಲಿ ಹೊರಬಂದ ಅಂಶ. ಅಂದರೆ ಒಟ್ಟಾರೆಯಾಗಿ ಈ ಭಾಗದಲ್ಲಿ ಬಿಜೆಪಿ 26, ಇತರರು 78 ಸೀಟು ಗೆಲ್ಲುವ ಸಾಧ್ಯತೆಯಿದೆ.

ಅಸ್ಸಾಂ, ಬಿಹಾರ, ಒರಿಸ್ಸಾ, ಪ.ಬಂಗಾಳ, ಜಾರ್ಖಂಡ್

ಅಸ್ಸಾಂ, ಬಿಹಾರ, ಒರಿಸ್ಸಾ, ಪ.ಬಂಗಾಳ, ಜಾರ್ಖಂಡ್

ದೇಶದ ಇತರ ಭಾಗದಲ್ಲಿ (ಅಸ್ಸಾಂ, ಬಿಹಾರ, ಒರಿಸ್ಸಾ, ಪ.ಬಂಗಾಳ, ಜಾರ್ಖಂಡ್) ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಲಿದೆ. ಸರ್ವೇ ಪ್ರಕಾರ, ಬಿಜೆಪಿ ಶೇ. 37, ಯುಪಿಎ ಶೇ. 25 ಮತಪ್ರಮಾಣವನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಇತರರು ಪಡೆಯಬಹುದಾದ ಲೆಕ್ಕಾಚಾರವಾದ ಶೇ. 38 ನಿರ್ಣಾಯಕವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+