ಕತುವಾ ಆಯ್ತು, ಈಗ ಉತ್ತರ ಪ್ರದೇಶದಲ್ಲಿ 8ರ ಬಾಲಕಿಯ ಅತ್ಯಾಚಾರ-ಕೊಲೆ!

Posted By:
Subscribe to Oneindia Kannada

ಇಟಾಹ್, ಏಪ್ರಿಲ್ 17: ಜಮ್ಮು-ಕಾಶ್ಮೀರದ ಕತುವಾದಲ್ಲಿ ಎಂಟು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಕುರಿತು ಇಡೀ ದೇಶವೂ ಮರುಗುತ್ತಿರುವಾಗ ಉತ್ತರ ಪ್ರದೇಶದಲ್ಲೂ ಇಂಥದೇ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ.

ಕತುವಾ ಅತ್ಯಾಚಾರ-ಕೊಲೆಯ ಸುತ್ತ ಹುಟ್ಟುವ ವಿಲಕ್ಷಣ ಅನುಮಾನ!

ಎಂಟು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 18 ವರ್ಷದ ಯುವಕನೊಬ್ಬ ಅತ್ಯಾಚಾರ ನಡೆಸಿದ ಘಟನೆ ನಿನ್ನೆ(ಏ.16) ರಾತ್ರಿ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ನಡೆದಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಕುಟುಂಬಸ್ಥರ ಜೊತೆ ಮದುವೆ ಕಾರ್ಯಕ್ರಮವೊಂದಕ್ಕೆ ಬ ಆಲಕಿ ತೆರಳಿದ್ದಳು. ಬಾಲಕಿಯ ತಂದೆ-ತಾಯಿ ಮದುವೆ ಮನೆಯಲ್ಲಿ ಬ್ಯುಸಿಯಾಗಿದ್ದರಿಂದ ಬಾಲಕಿ ಹೊರಗಡೆ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಯುವಕನೊಬ್ಬ ಆಕೆಯನ್ನು ಪಕ್ಕದ ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದುಕೊಂದು ಹೋಗಿದ್ದಾನೆ. ಮದುವೆ ಮನೆಯಲ್ಲಿ ಲೌಡ್ ಸ್ಪೀಕರ್ ಹಾಕಿದ್ದರಿಂದ ಮಗು ಕೂಗಿಕೊಂಡಿದ್ದು ಯಾರಿಗೂ ಕೇಳಿಸಿಲ್ಲ.

After Kathua, 8-year-old raped, murdered in UP

ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಾಲಕಿಯನ್ನು ಕೊಲೆಮಾಡಿದ್ದಾನೆ. ರಾತ್ರಿ ಸುಮಾರು 1.30 ರ ಸುಮಾರಿಗೆ ಬಾಲಕಿಯ ಅರೆನಗ್ನ ದೇಹ ಪತ್ತೆಯಾಗಿದ್ದು, ಆಕೆಯ ಶವದ ಪಕ್ಕ ಕುಡಿದು ಮಲಗಿದ್ದ ಸೋನು ಜಾಟವ್ ಎಂಬುವವನ್ನು ಬಂಧಿಸಲಾಗಿದೆ. ಆತನೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ದೂರು ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In yet another shocking incident of crime against a minor, an eight-year-old girl was allegedly raped and murdered in Uttar Pradesh's Etah district on Monday night.The incident took place when the victim had come to attend the wedding of a family cousin, where she went missing mid-way.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ