Get Updates
Get notified of breaking news, exclusive insights, and must-see stories!

Aditya L1 Launched: ಆದಿತ್ಯ ಎಲ್-1 ಉಡಾವಣೆ ಯಶಸ್ವಿ, ಸೂರ್ಯನತ್ತ ಭಾರತ

ಶ್ರೀಹರಿಕೋಟ, ಸೆಪ್ಟಂಬರ್ 2: ಚಂದ್ರಯಾನ - 3 ಯಶಸ್ಸಿನ ಬೆನ್ನಲ್ಲೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮೊಟ್ಟ ಮೊದಲ ಬಾರಿಗೆ ಕೈಗೊಂಡಿದ್ದ ಸೂರ್ಯಯಾನ ಯಶಸ್ಸಿನ ಹಾದಿಯಲ್ಲಿದ್ದು, ಆದಿತ್ಯ ಎಲ್-1 ಯಶಸ್ವಿಯಾಗಿ ಉಡಾವಣೆಯಾಗಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಆದಿತ್ಯ - ಎಲ್‌1 ಉಪಗ್ರಹವನ್ನು PSLV-C57 ರಾಕೆಟ್‌ನಲ್ಲಿ ಉಡಾವಣೆಯಾಗಿದೆ. ಈ ಮೂಲಕ ಭಾರತ ಕೈಗೊಂಡಿರುವ ಮೊಟ್ಟ ಮೊದಲ ಸೂರ್ಯಯಾನದ ಮೊದಲ ಹೆಜ್ಜೆಗೆ ಗೆಲುವು ಸಿಕ್ಕಂತಾಗಿದೆ.

Aditya L1 Successfully Launched: India Becomes First Asian Country to Orbit the Sun

ಇಂದು ಭೂಮಿಯಿಂದ ಹೊರಟ ‌ಆದಿತ್ಯ-ಎಲ್‌1 ಗಗನ ನೌಕೆಯು ಬರೋಬ್ಬರಿ 120 ರಿಂದ 125 ದಿನಗಳ ಬಳಿಕ ನಿಗದಿತ ಕಕ್ಷೆ ತಲುಪಲಿದೆ. ಅಂದರೆ ನಾಲ್ಕು ತಿಂಗಳು ಆದಿತ್ಯ-ಎಲ್‌1 ಯೋಜನೆಯ ಅವಧಿಯಾಗಿದ್ದು, ಜನವರಿ ಮೊದಲ ವಾರದಲ್ಲಿ ಸೂರ್ಯಯಾನದ ನೌಕೆಯು ಎಲ್-1 ಗೆ ಸೇರುವ ನಿರೀಕ್ಷೆ ಇದೆ.

Aditya L1 Successfully Launched: India Becomes First Asian Country to Orbit the Sun

ಆದಿತ್ಯ ಎಲ್‌- 1 ನೌಕೆಯನ್ನು ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಎಲ್‌1 ಎಂದು ಕರೆಯಲಾಗುವ ಸ್ಥಳದಲ್ಲಿ ನಿಯೋಜಿಸಲಾಗುತ್ತದೆ. ಅದು ಅಲ್ಲಿಂದಲೇ ಸೂರ್ಯನ ಕುರಿತು ಸಂಶೋಧನೆ ನಡೆಸಿ ಭೂಮಿಗೆ ಮಾಹಿತಿ ರವಾನಿಸಲಿದೆ.

ಆದಿತ್ಯ ಎಲ್‌- 1 ಉಡಾವಣೆಯ ಉದ್ದೇಶವೇನು?

ಸೂರ್ಯನ ಮೇಲೆ ಇರುವ ವಿವಿಧ ಪದರಗಳ ಸಂಶೋಧನೆ, ಕರೋನಾ ವಲಯದ ಅಧ್ಯಯನ, ವಿದ್ಯುತ್ ಕಾಂತೀಯ ವಲಯ ಸೇರಿ ಹಲವು ಅಧ್ಯಯನ ಹಾಗೂ ಎಲ್1 ಪಾಯಿಂಟ್‌ನಲ್ಲಿ ಕಣಗಳ ಅಧ್ಯಯನ ಮಾಡುವ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರವು ಆದಿತ್ಯ ಎಲ್‌- 1 ಗಗನ ನೌಕೆಯನ್ನು ಸೂರ್ಯನತ್ತ ಕಳುಹಿಸಿದೆ. ಇನ್ನು ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+