ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಮತ್ತು IHG ನಡುವೆ 5 ಹೋಟೆಲ್‌ಗಳ ಒಪ್ಪಂದ; ಭಾರತಕ್ಕೆ ಲಗ್ಗೆ ಇಟ್ಟ ಕಿಂಪ್ಟನ್ ಬ್ರ್ಯಾಂಡ್

ನವದೆಹಲಿ: ಭಾರತದ ವಾಯುಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (AAHL) ಮತ್ತು ಜಾಗತಿಕವಾಗಿ ಪ್ರಸಿದ್ಧವಾಗಿರುವ ಐಎಚ್‌ಜಿ (IHG) ಹೋಟೆಲ್ಸ್ ಮತ್ತು ರೆಸಾರ್ಟ್ಸ್ ಸಂಸ್ಥೆಗಳು ದೇಶದ ಪ್ರಮುಖ ನಗರಗಳಲ್ಲಿ ಐದು ಹೊಸ ಹೋಟೆಲ್‌ಗಳನ್ನು ಅಭಿವೃದ್ಧಿಪಡಿಸಲು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಮೂಲಕ ವಿಶ್ವಪ್ರಸಿದ್ಧ ಐಷಾರಾಮಿ ಬ್ರ್ಯಾಂಡ್ 'ಕಿಂಪ್ಟನ್ ಹೋಟೆಲ್ಸ್ ಮತ್ತು ರೆಸ್ಟೋರೆಂಟ್ಸ್' ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಪದಾರ್ಪಣೆ ಮಾಡುತ್ತಿದೆ.

ಈ ಸಹಭಾಗಿತ್ವದ ಅಡಿಯಲ್ಲಿ ಜೈಪುರ, ನವಿ ಮುಂಬೈ, ಮಂಗಳೂರು ಮತ್ತು ತಿರುವನಂತಪುರಂ ಸೇರಿದಂತೆ ವಿವಿಧ ನಗರಗಳಲ್ಲಿ ಒಟ್ಟು 1,500 ಕೊಠಡಿಗಳನ್ನು ಒಳಗೊಂಡ ಹೋಟೆಲ್‌ಗಳನ್ನು ನಿರ್ಮಿಸಲಾಗುವುದು. ಇವು ಕೇವಲ ಹೋಟೆಲ್‌ಗಳಾಗಿರದೆ, ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಯೋಜಿಸಿರುವ ಏಕೀಕೃತ 'ಏರ್‌ಪೋರ್ಟ್ ಸಿಟಿ' ಮತ್ತು ಮಿಶ್ರ-ಬಳಕೆಯ ಅಭಿವೃದ್ಧಿ ಯೋಜನೆಗಳ ಪ್ರಮುಖ ಭಾಗವಾಗಿರಲಿವೆ. ಪ್ರವಾಸಿಗರು, ಉದ್ಯಮಿಗಳು ಮತ್ತು ವಿಮಾನ ನಿಲ್ದಾಣದ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

Adani

ಈ ಒಪ್ಪಂದದ ಪ್ರಕಾರ, ಜೈಪುರದಲ್ಲಿ ಹೈ-ಎಂಡ್ 'ಕಿಂಪ್ಟನ್' ಹೋಟೆಲ್ ನಿರ್ಮಾಣವಾಗಲಿದ್ದರೆ, ಉಳಿದ ಆಯಕಟ್ಟಿನ ಸ್ಥಳಗಳಲ್ಲಿ 'ಹಾಲಿಡೇ ಇನ್' ಮತ್ತು 'ಹಾಲಿಡೇ ಇನ್ ಎಕ್ಸ್‌ಪ್ರೆಸ್' ಹೋಟೆಲ್‌ಗಳು ತಲೆ ಎತ್ತಲಿವೆ. ಈ ಕುರಿತು ಮಾತನಾಡಿದ ಅದಾನಿ ಸಮೂಹದ ಪ್ರಣವ್ ಅದಾನಿ ಅವರು, "ಭಾರತದ ವಿಸ್ತರಿಸುತ್ತಿರುವ ವಾಯುಯಾನ ಪರಿಸರ ವ್ಯವಸ್ಥೆಯ ಸುತ್ತ ಸಮಗ್ರ ಪ್ರವಾಸ ಮತ್ತು ನಗರ ತಾಣಗಳನ್ನು ರಚಿಸುವ ನಮ್ಮ ದೂರದೃಷ್ಟಿಗೆ ಈ ಸಹಯೋಗವು ಪೂರಕವಾಗಿದೆ. ಪ್ರವಾಸ, ವಾಸ್ತವ್ಯ ಮತ್ತು ನಗರ ಜೀವನದ ಅನುಭವಗಳನ್ನು ಒಟ್ಟಾಗಿ ನೀಡುವ ವಿಶ್ವದರ್ಜೆಯ ತಾಣಗಳನ್ನು ನಿರ್ಮಿಸುವುದು ನಮ್ಮ ಗುರಿ," ಎಂದು ತಿಳಿಸಿದರು.

ಪ್ರಸ್ತುತ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಸಂಸ್ಥೆಯು ಮುಂಬೈ, ಅಹಮದಾಬಾದ್, ಲಕ್ನೋ, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ಸೇರಿದಂತೆ ದೇಶದ ಎಂಟು ಪ್ರಮುಖ ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿದೆ. ಇದರ ಜೊತೆಗೆ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಯೂ ವೇಗವಾಗಿ ನಡೆಯುತ್ತಿದೆ. ಸಂಸ್ಥೆಯು ಸುಮಾರು 663 ಎಕರೆ ಪ್ರದೇಶದಲ್ಲಿ 'ಏರ್‌ಪೋರ್ಟ್ ಸಿಟಿ' ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಐಎಚ್‌ಜಿ ಹೋಟೆಲ್ಸ್‌ನ ಸುದೀಪ್ ಜೈನ್ ಮಾತನಾಡಿ, "ಭಾರತದ ಹೋಟೆಲ್ ಉದ್ಯಮದಲ್ಲಿ, ವಿಶೇಷವಾಗಿ ವಿಮಾನ ನಿಲ್ದಾಣ ಕೇಂದ್ರಿತ ಅಭಿವೃದ್ಧಿಗಳಲ್ಲಿ ದೊಡ್ಡ ಅವಕಾಶಗಳಿವೆ. ಈ ಒಪ್ಪಂದದ ಮೂಲಕ ನಾವು ಭಾರತದಲ್ಲಿ ಕಿಂಪ್ಟನ್ ಬ್ರ್ಯಾಂಡ್ ಅನ್ನು ಪರಿಚಯಿಸುತ್ತಿರುವುದಕ್ಕೆ ಹೆಮ್ಮೆಯಿದೆ," ಎಂದರು. ಐಎಚ್‌ಜಿ ಸಂಸ್ಥೆಯು ಸದ್ಯ ಭಾರತದಲ್ಲಿ 52 ಹೋಟೆಲ್‌ಗಳನ್ನು ನಡೆಸುತ್ತಿದ್ದು, ಮುಂದಿನ 3-5 ವರ್ಷಗಳಲ್ಲಿ ಮತ್ತಷ್ಟು ಹೋಟೆಲ್‌ಗಳನ್ನು ತೆರೆಯುವ ಗುರಿ ಹೊಂದಿದೆ. ಭಾರತದಲ್ಲಿ ದೇಶೀಯ ಪ್ರವಾಸೋದ್ಯಮ ಮತ್ತು ವ್ಯಾಪಾರ ಉದ್ದೇಶದ ಪ್ರಯಾಣ ಹೆಚ್ಚಾಗುತ್ತಿರುವುದರಿಂದ ಈ ಹೋಟೆಲ್ ಸಮುಚ್ಚಯಗಳಿಗೆ ಭಾರಿ ಬೇಡಿಕೆ ಬರುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+