Abhijeet Dipke Video: ಅಜ್ಜಿ ಸಾವಿನ ವಿಚಾರದಲ್ಲಿ ಅಭಿಜೀತ್ ದೀಪ್ಕೆ ಸುಳ್ಳು; ವಿಡಿಯೋ ಮೂಲಕ ಸತ್ಯ ಬಯಲಿಗೆಳೆದ ದೆಹಲಿ ಪೊಲೀಸ್!

Abhijeet Dipke Video: ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹಾಗೂ ದೆಹಲಿ ಪೊಲೀಸರ ನಡುವೆ ನಡೆದಿರುವ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಲವು ವಿಷಯಗಳು ಚರ್ಚೆಯ ಮುನ್ನೆಲೆಗೆ ಬಂದಿದೆ. ಅದರಲ್ಲಿ ಮುಖ್ಯವಾಗಿ ಕಾಕ್ರೋಚ್ ಜನತಾ ಪಾರ್ಟಿಯ ಹೇಳುತ್ತಿರುವ ಸುಳ್ಳನ್ನು ದೆಹಲಿ ಪೊಲೀಸರು ಬಯಲಿಗೆಳೆದಿದ್ದಾರೆ.

ಅಭಿಜೀತ್ ದೀಪ್ಕೆ ಅವರ ತಾಯಿ ಈಚೆಗೆ ಮೃತಪಟ್ಟಿದ್ದಾರೆ. ಆದರೆ ದೆಹಲಿ ಪೊಲೀಸರ ವಿಳಂಬ ಧೋರಣೆಯಿಂದಲೇ ಅವರ ಅಜ್ಜಿ ಅವರ ಅಂತ್ಯಕ್ರಿಯೆಯಲ್ಲಿ ಅಭಿಜೀತ್ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ದೆಹಲಿಯ ಪೊಲೀಸರು ತಳ್ಳಿ ಹಾಕಿದ್ದಾರೆ. ಅಲ್ಲದೆ ಅಭಿಜೀತ್ ದೀಪ್ಕೆ ಅವರೊಂದಿಗೆ ನಡೆದಿರುವ ಸಂಭಾಷಣೆಯ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

Abhijeet Dipke Video Delhi Police Expose CJP Founder s Alleged Lies Over Grandmother s Death

ಅಭಿಜೀತ್ ದೀಪ್ಕೆ ಅವರ ಅಜ್ಜಿ ನಿಧನರಾದ ಸುದ್ದಿ ತಿಳಿದ ಬಳಿಕ, ಅವರಿಗೆ ಪ್ರಯಾಣದ ವ್ಯವಸ್ಥೆ ಮಾಡಿಕೊಡುವುದಾಗಿ ಪೊಲೀಸ್ ಅಧಿಕಾರಿ ಹೇಳಿರುವ ವಿಡಿಯೋವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಜೈಲಿನಿಂದ ಬಿಡುಗಡೆ ಮಾಡುವುದಕ್ಕೆ ವಿಳಂಬವಾಗಿದ್ದರಿಂದ ಅಭಿಜೀತ್ ದೀಪ್ಕೆ ಅವರ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದರು. ಈ ಆರೋಪಕ್ಕೆ ಪ್ರತ್ಯುತ್ತರವಾಗಿ ದೆಹಲಿ ಪೊಲೀಸರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ, ಪೊಲೀಸರ ಹೇಳಿಕೆಯನ್ನು ಅಭಿಜೀತ್ ದೀಪ್ಕೆ ಅವರು ಪ್ರಶ್ನಿಸಿದ್ದಾರೆ.

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಅಜ್ಜಿಯ ಸಾವಿನ ಸುದ್ದಿ ತಿಳಿದ ನಂತರ, ಅವರ ಅಂತ್ಯಕ್ರಿಯೆಯಲ್ಲಿ ವಿಳಂಬವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬ ಕುಟುಂಬದ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.

ದೆಹಲಿ ಪೊಲೀಸ್ ಪಿಆರ್‌ಒ ಮತ್ತು ಡಿಸಿಪಿ ನೇಹಾ ಯಾದವ್ ಅವರು, ಅಭಿಜೀತ್ ಅವರ ಅಜ್ಜಿ ಅವರ ಸಾವು ಮತ್ತು ಅಂತ್ಯಕ್ರಿಯೆಯ ಸಮಯವನ್ನು ತಿಳಿಸಿದ ನಂತರ ಅಧಿಕಾರಿಗಳು ಅವರಿಗೆ ಪದೇ ಪದೇ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಪೊಲೀಸರು ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಅವರಿಗೆ ಸಾರಿಗೆ ವ್ಯವಸ್ಥೆ ಮಾಡುವುದಾಗಿ ಹೇಳಿರುವುದು ಸಹ ಇದೆ. "ನೀವು ಎಲ್ಲಿಗಾದರೂ ಪ್ರಯಾಣಿಸಲು ಬಯಸಿದರೆ, ನಾವು ನಿಮಗೆ ಸಾರಿಗೆ ವ್ಯವಸ್ಥೆ ಮಾಡಬಹುದು, ಅದು ಬಸ್, ವಿಮಾನ ಅಥವಾ ಇನ್ನಾವುದೇ ವಿಧಾನದ ಮೂಲಕ' ಆಗಿರಲಿ ಎಂದು ಪೊಲೀಸ್ ಅಧಿಕಾರಿ ಹೇಳಿರುವುದು ವಿಡಿಯೋದಲ್ಲಿದೆ.

ದೆಹಲಿ ಪೊಲೀಸ್ ಅಧಿಕಾರಿಗಳು ಅಭಿಜೀತ್ ದೀಪ್ಕೆ ಅವರ ಅಧಿಕೃತ ಫೋನ್ ಮೂಲಕ ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ, ಸಹಾಯ ಮಾಡಲು ಸಹ ಮುಂದಾದರು. ಆದರೆ ಅಭಿಜೀತ್ ಅವರು "ಇಲ್ಲ, ಅದು ಸಾಧ್ಯವಿಲ್ಲ. ನಾನು ನನ್ನ ತಂದೆಯೊಂದಿಗೆ ಮಾತನಾಡಲು ಸಾಧ್ಯವಿಲ್ಲ' ಎಂದು ಪ್ರತಿಕ್ರಿಯಿಸಿದರು. "ಸರಿ. ನಾವು ಏನು ಮಾಡಬಹುದೆಂದು ನೋಡೋಣ' ಎಂದು ಅಧಿಕಾರಿ ಉತ್ತರಿಸಿದ್ದಾರೆ ಎನ್ನುವುದು ವಿಡಿಯೋದಲ್ಲಿದೆ.

ಅಭಿಜೀತ್ ದೀಪ್ಕೆ ಕುಟುಂಬ ಸದಸ್ಯರ ಆರೋಪವೇನು

ಅಭಿಜೀತ್ ಅವರ ಅಜ್ಜಿ ಮೃತಪಟ್ಟಿದ್ದಾರೆ. ಅವರನ್ನು ಬಿಡುಗಡೆ ಮಾಡಿ ಎನ್ನುವ ಮನವಿಗೆ ದೆಹಲಿ ಪೊಲೀಸರಿಂದ ಉತ್ತರ ಸಿಗಲಿಲ್ಲ ಎಂದು ಕುಟುಂಬ ಸದಸ್ಯರು ದೂರಿದ್ದಾರೆ. ಅಭಿಜೀತ್ ದೀಪ್ಕೆ ಅವರ ತಂದೆಯ ತಾಯಿ 85 ವರ್ಷದ ಸಾವಿತ್ರಿಬಾಯಿ ಶಂಕರರಾವ್ ದೀಪ್ಕೆ ಅವರು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಶನಿವಾರ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ನಡೆಯಿತು.

ಅಭಿಜೀತ್ ದೀಪಿಕೆ ಅವರನ್ನು ಅಂತ್ಯಕ್ರಿಯೆಗೆ ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡುವಂತೆ ಕುಟುಂಬದ ಸದಸ್ಯರು, ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ ಅವರ ಮನವಿಗಳಿಗೆ ಯಾವುದೇ ಉತ್ತರ ಬಂದಿಲ್ಲ ಎಂದು ಅವರ ಚಿಕ್ಕಪ್ಪ ವಿಲಾಸ್ ದೀಪ್ಕೆ ಅವರು ಆರೋಪಿಸಿದ್ದಾರೆ.

'ನನಗೆ ಫೋನ್ ಬಳಸಲು ಬಿಡಲಿಲ್ಲ' ಎಂದ ಅಭಿಜೀತ್

ಇನ್ನು ದೆಹಲಿ ಪೊಲೀಸರ ಹೇಳಿಕೆಯನ್ನು ಅಭಿಜೀತ್ ದೀಪ್ಕೆ ವಿರೋಧಿಸಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳು ತಮ್ಮ ಫೋನ್ ಕೊಡುವಂತೆ ಹಾಗೂ ತಮ್ಮ ವಕೀಲರೊಂದಿಗೆ ಮಾತನಾಡಬೇಕು ಎನ್ನುವ ಮನವಿಯನ್ನು ಪದೇ ಪದೇ ನಿರಾಕರಿಸಿದರು ವಿನಂತಿಸಿದರೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ದೆಹಲಿ ಪೊಲೀಸರ ವಿಡಿಯೋಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅಭಿಜೀತ್ ದೀಪ್ಕೆ ಅವರು, ನನ್ನ ಸೋದರ ಸಂಬಂಧಿಯ ಸಂಖ್ಯೆಯನ್ನು ಮರಳಿ ಪಡೆಯಲು ನಾನು ನನ್ನ ಫೋನ್ ಕೇಳುತ್ತಿದ್ದ ಭಾಗವನ್ನು ನೀವು ಏಕೆ ವಿಡಿಯೋದಲ್ಲಿ ಡಿಲೀಟ್ ಮಾಡಿದ್ದೀರಿ ಮತ್ತು ನನ್ನ ವಕೀಲರೊಂದಿಗೆ ಮಾತನಾಡಲು ನನಗೆ ಅವಕಾಶ ನೀಡುವಂತೆ ನಾನು ಕೇಳುತ್ತಿದ್ದೆ ಅದು ಇಲ್ಲ ಯಾಕೆ.

ನನ್ನ ಅಜ್ಜಿಯ ನಿಧನದ ಬಗ್ಗೆ ನನಗೆ ಮಾಹಿತಿ ನೀಡಿ ಮನೆಗೆ ಕರೆದುಕೊಂಡು ಹೋಗಲು ಈಗ ನೈತಿಕವಾಗಿ ಎತ್ತರದಲ್ಲಿದ್ದೇವೆ ಎಂದು ತೋರಿಸಿಕೊಳ್ಳಲು ಬಯಸುತ್ತಿರುವ ಅದೇ ದೆಹಲಿ ಪೊಲೀಸರು ಬೆಳಿಗ್ಗೆ 3:30 ಕ್ಕೆ ಬಂಧನ ದಾಖಲೆಗಳೊಂದಿಗೆ ನನ್ನ ಬಳಿಗೆ ಬಂದು, ನಾನು ಅವುಗಳಿಗೆ ಸಹಿ ಹಾಕಬೇಕೆಂದು ಒತ್ತಾಯಿಸಿದರು.

ಬೆಳಿಗ್ಗೆ 3:30 ಕ್ಕೆ ಆ ಎಲ್ಲಾ ಮಾನವೀಯತೆ ಎಲ್ಲಿಗೆ ಹೋಯಿತು? ನಾನು ನನ್ನ ಅಜ್ಜಿಯನ್ನು ಕಳೆದುಕೊಂಡಿದ್ದೇನೆ ಎಂದು ತಿಳಿದಿದ್ದರೂ, ಅವರು ಇನ್ನೂ ಬಂಧನ ದಾಖಲೆಗಳಿಗೆ ಸಹಿ ಹಾಕಬೇಕೆಂದು ಒತ್ತಾಯಿಸಿದರು. ನನ್ನ ವಕೀಲರೊಂದಿಗೆ ಮಾತನಾಡಲು ನನಗೆ ಅವಕಾಶ ನೀಡುವವರೆಗೂ ನಾನು ನಿರಾಕರಿಸಿದೆ ಎಂದೂ ಸಹ ಅಭಿಜೀತ್ ದೀಪ್ಕೆ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+