• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಎಪಿ : ಬಾಲಕೃಷ್ಣನ್, ರವಿಕೃಷ್ಣಾ ರೆಡ್ಡಿ ಕಣಕ್ಕೆ

By Mahesh
|

ಬೆಂಗಳೂರು, ಮಾ.10: ಮುಂಬರುವ ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ತನ್ನ ನಾಲ್ಕನೇ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ತೆಹೆಲ್ಕಾ ಜರ್ನಲಿಸ್ಟ್ ಆಶೀಶ್ ಖೇತನ್, ಇನ್ಫೋಸಿಸ್ ನ ಮಾಜಿ ಸಿಎಫ್ ಒ ವಿ ಬಾಲಕೃಷ್ಣನ್ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ದೆಹಲಿ ಲೋಕಸಭೆಯ ಆರು ಕ್ಷೇತ್ರಗಳಲ್ಲಿ ಪತ್ರಕರ್ತರು ಸ್ಪರ್ಧಿಸುತ್ತಿರುವುದು ವಿಶೇಷ. ಅದರಲ್ಲೂ ತೆಹೆಲ್ಕಾ, gulail.com ಖ್ಯಾತಿ ಪತ್ರಕರ್ತ ಆಶೀಶ್ ಖೇತನ್ ಗೆ ಟಿಕೆಟ್ ನೀಡಲಾಗಿದೆ. ಪಂಜಾಬಿ ಕಾಮೆಡಿಯನ್ ಭಗವಂತ್ ಮನ್ ಹೆಸರು ಹೊಸ ಪಟ್ಟಿಯಲ್ಲಿದೆ. ಒಟ್ಟಾರೆ 131 ಅಭ್ಯರ್ಥಿಗಳನ್ನು ಅರವಿಂದ್ ಕೇಜ್ರಿವಾಲ್ ಅವರ ಜನ ಸಾಮಾನ್ಯರ ಪಕ್ಷ ಘೋಷಿಸಿದೆ.

ಕರ್ನಾಟಕದಲ್ಲಿ ಕಣದಲ್ಲಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು:

* ಬೆಂಗಳೂರು ಉತ್ತರ: ಪ್ರೊ. ಬಾಬು ಮ್ಯಾಥ್ಯೂ

* ಬೆಂಗಳೂರು ಕೇಂದ್ರ: ವಿ. ಬಾಲಕೃಷ್ಣನ್

* ಬೆಂಗಳೂರು ದಕ್ಷಿಣ: ನೀನಾ ಪಿ. ನಾಯಕ್

* ಬೆಂಗಳೂರು ಗ್ರಾಮಾಂತರ : ರವಿಕೃಷ್ಣಾ ರೆಡ್ಡಿ

* ಚಿಕ್ಕಬಳ್ಳಾಪುರ: ಕೆ. ಅರ್ಕೇಶ್

* ದಕ್ಷಿಣ ಕನ್ನಡ: ಎಂ.ಆರ್ ವಾಸುದೇವ

* ಗುಲ್ಬರ್ಗಾ(ಎಸ್ ಸಿ): ಡಾ. ಬಿ.ಟಿ ಲಲಿತಾ ನಾಯಕ್

* ಹುಬ್ಬಳ್ಳಿ-ಧಾರವಾಡ: ಹೇಮಂತ್ ಕುಮಾರ್

* ಬೀದರ್ : ಚಂದ್ರಕಾಂತ್ ಕುಲಕರ್ಣಿ

* ರಾಯಚೂರು: ಭೀಮರಾಯ

* ಕೋಲಾರ (ಎಸ್ ಸಿ) : ಕೋಟಿಗಾನಹಳ್ಳಿ ರಾಮಯ್ಯ

* ಶಿವಮೊಗ್ಗ : ಶ್ರೀಧರ್ ಕಲ್ಲಹಳ್ಳಿ

* ಚಿಕ್ಕೋಡಿ: ಅಶ್ಫಕ್ ಅಹಮದ್ ಮಡಿಕಿ

ಆಮ್ ಆದ್ಮಿ ಪಕ್ಷದ 61 ಅಭ್ಯರ್ಥಿಗಳ 4ನೇ ಪಟ್ಟಿ ವಿವರ ಇಲ್ಲಿದೆ

ವಿ ಬಾಲಕೃಷ್ಣನ್ : ಇನ್ಫೋಸಿಸ್ ತೊರೆದ ಮೇಲೆ ಅರವಿಂದ್ ಕೇಜ್ರಿವಾಲ್ ಅವರ ಜನ ಸಾಮಾನ್ಯರ ಪಕ್ಷ ಸೇರಿದ ಇನ್ಫೋಸಿಸ್ ನ ಮಾಜಿ ಸಿಎಫ್ ಒ ವಿ. ಬಾಲಕೃಷ್ಣನ್ ಅವರನ್ನು ಚುನಾವಣೆ ಕಣಕ್ಕಿಳಿಸಲು ಆಮ್ ಆದ್ಮಿ ಪಕ್ಷ ಚಿಂತನೆ ನಡೆಸಿತ್ತು. ಆದರೆ, ಚುನಾವಣೆ ಸ್ಪರ್ಧಿಸುವ ಬಗ್ಗೆ ಬಾಲಕೃಷ್ಣನ್ ಇನ್ನೂ ನಿರ್ಧಾರ ಕೈಗೊಂಡಿರಲಿಲ್ಲ. ಒಂದು ವೇಳೆ ಬಾಲ ಕಣಕ್ಕಿಳಿದರೆ ಇನ್ಫೋಸಿಸ್ ನ ಇಬ್ಬರು ಅತಿರಥ ಮಹಾರಥರು ಚುನಾವಣೆ ಕಣಕ್ಕೆ ಶೋಭೆ ತರುತ್ತಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.

ಅಂದುಕೊಂಡಂತೆ ಬಾಲಕೃಷ್ಣನ್ ಅವರಿಗೆ ಬೆಂಗಳೂರಿನ ಕೇಂದ್ರ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ. 60 ರ ದಶಕದಲ್ಲಿ ಬಾಲಕೃಷ್ಣನ್ ಅವರ ತಂದೆಯವರು ತಮಿಳುನಾಡಿನ ವೆಲ್ಲೂರಿನಲ್ಲಿ ಡಿಎಂಕೆ ಪಕ್ಷದ ಮುಖಂಡರಾಗಿದ್ದರು. ಹೀಗಾಗಿ ಬಾಲಕೃಷ್ಣನ್ ಅವರಿಗೂ ರಾಜಕೀಯ ನಂಟು ಇದ್ದೇ ಇದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆದಿರುವ ಮತ್ತೊಬ್ಬ ಮಾಜಿ ಇನ್ಫೋಸಿಸ್ ಅಧಿಕಾರಿ ನಂದನ್ ನಿಲೇಕಣಿ ಅವರು ತಮ್ಮ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. [ಕಾಂಗ್ರೆಸ್ ಸೇರಿದ ನಂದನ್ ]

'ಐಐಟಿ ಪದವಿಧರರೊಬ್ಬರ ಅತ್ಯಂತ ಯಶಸ್ವಿ ಕಂಪನಿ ಎಂದರೆ ಆಮ್ ಆದ್ಮಿ ಪಕ್ಷ. ದೇಶದಲ್ಲಿ ನಡೆಯುತ್ತಿರುವ ಈ ಕ್ರಾಂತಿಯಲ್ಲಿ ಭಾಗವಹಿಸಲು ನಾನು ಬಯಸುತ್ತೇನೆ. ಕೇವಲ 10 ರೂ. ಕೊಟ್ಟು ನಾನು ಪಕ್ಷದ ಸದಸ್ಯನಾಗಿದ್ದೇನೆ. ಎಎಪಿ ಜನ ಸಾಮಾನ್ಯರ ಒಳಿತಿಗೆ ಸಾಕಷ್ಟು ಕೆಲಸಗಳನ್ನು ಮಾಡಲಿದೆ ಎಂಬ ವಿಶ್ವಾಸ ನನಗಿದೆ'' ಎಂದು ಅವರು ಎಎಪಿ ಪಕ್ಷ ಸೇರಿದಾಗ ಬಾಲಕೃಷ್ಣನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
AAP announces 4th list for LS polls: Former Infosys CFO V Balakrishnan to be AAP candidate from Bangalore Central and journalist Ashish Khetan from New Delhi constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X