ಮಾಡ್ಬಾರದ್ದನ್ನ ಮಾಡಿದ್ರೆ.. ಆಗ್ಬಾರದ್ದೇ ಆಗೋದು ಅನ್ನೋದಿಕ್ಕೆ ಈ ಘಟನೆಯೇ ಸಾಕ್ಷಿ-ವೈರಲ್ ವಿಡಿಯೋ ಇಲ್ಲಿದೆ ನೋಡಿ
Viral Video: ಹಳ್ಳಿಯ ಕಡೆ ಒಂದು ಗಾದೆ ಮಾತಿದೆ, ಮಾಡ್ಬರದ್ದನ್ನ ಮಾಡಿದ್ರೆ ಆಗ್ಬಾರದ್ದು ಆಗುತ್ತೆ ಅಂತಾ. ಹಾಗೆಯೇ ಯುವಕನೊಬ್ಬ ರೈಲಿನ ಮೇಲೆ ಹತ್ತಿ ರೀಲ್ಸ್ ಮಾಡಲು ಹೋಗಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ರೈಲು ಚಾಲನೆಯಲ್ಲಿರುವಾಗ ನಿಯಮದ ಪ್ರಕಾರ ಪ್ರಯಾಣಿಕರು ಡೋರ್ ಬಳಿ ಬರುವಂತಿಲ್ಲ ಹಾಗೂ ಕೂರುವಂತಿಲ್ಲ. ಆದರೆ ಇಲ್ಲೊಬ್ಬ ಯುವಕ ಚಲಿಸುತ್ತಿರುವ ರೈಲಿನ ಮೇಲೆ ಹತ್ತುವ ಮೂಲಕ ರೀಲ್ಸ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತನಿಗೆ ಪಕ್ಕದಲ್ಲಿದ್ದ ವಿದ್ಯುತ್ ತಂತಿ ತಾಗಿ ಕೆಳಗೆ ಬಿದ್ದಿದ್ದಾನೆ. ಸದ್ಯ ಆ ಯುವಕ ಪ್ರಣಾಪಾಯದಿಂದ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಈ ಘಟನೆ ನಡೆದಿದ್ದು ಎಲ್ಲಿ ಎನ್ನುವ ನಿಖರ ಮಾಹಿತಿ ಇನ್ನೂ ತಿಳಿದುಬರಬೇಕಿದೆ.

ಇತ್ತೀಚಿನ ದಿನಗಳಲ್ಲಿ ಯುವಜನರು ರೀಲ್ಸ್ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಸೇಫ್ ಅಲ್ಲದ ಸ್ಥಳಗಳಲ್ಲೇ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಇದರಿಂದ ಹಲವರು ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. ತುಂಬಿ ಹರಿಯುವ ಜಲಪಾತಗಳಲ್ಲಿ, ಚಲಿಸುವ ಬಸ್, ಕಾರುಗಳ ಮೇಲೆ, ಅಷ್ಟೇ ಅಲ್ಲದೆ, ಚಲಿಸುವ ರೈಲುಗಳ ಡೋರ್‌ಗಳ ಬಳಿ ಬಂದು ಹೊರಗಡೆ ತಲೆಯಿಡ್ಡು ರೀಲ್ಸ್ ಮಾಡಿ ಹುಚ್ಚಾಟ ಮೆರೆಯುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ.
రీల్స్ పిచ్చిలో ఓ యువకుడికి తృటిలో తప్పిన ప్రమాదం...
— ChotaNews (@ChotaNewsTelugu) September 25, 2024
ఓ యువకుడు రీల్స్ కోసం వెళ్తున్న ట్రైన్ పైకి ప్రమాదకరంగా ఎక్కాడు. అదే సమయంలో కరెంటు వైర్లు తాకడంతో మంటలు చెలరేగాయి. శరీరంలో కొంత బాగం కాలి తృటిలో ప్రమాదం నుండి బయటపడ్డాడు. pic.twitter.com/7ITcBdcbw4
ಮತ್ತೊಂದೆಡೆ ಮಹಾನಗರಗಳಲ್ಲಿ ಯುವಕರು ಬೈಕ್ ವ್ಹೀಲಿಂಗ್ ಮೂಲಕ ಹುಚ್ಚಾಟ ರೀಲ್ಸ್ ಮಾಡುವ ಘಟನೆಗಳು ನಡೆಯುತ್ತಲೇ ಇವೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇವೆ. ಇನ್ನು ಪೊಲೀಸರು ಇಂತಹವರ ವಿರುದ್ಧ ಸಮರ ಸಾರಿ ಸೂಕ್ತ ಕ್ರಮ ಕೈಗೊಳ್ಳುತ್ತಲೇ ಇದ್ದಾರೆ. ಆದರೆ ಅಪಾಯದ ಸ್ಥಳಗಳಲ್ಲಿ ಯುವಕ, ಯುವತಿಯರ ರೀಲ್ಸ್ ಹುಚ್ಚಾಟಗಳು ಮಾತ್ರ ನಿಲ್ಲುತ್ತಿಲ್ಲ.
ಅಪಾಯದ ಸ್ಥಳಗಳಲ್ಲಿ ರೀಲ್ಸ್ ಮಾಡುವ ಮುನ್ನ ಮನೆಯವರ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಯಾಕೆಂದರೆ ಯಾವಾಗ ಮನೆಗೆ ಬರುತ್ತಾರೆಯೋ ಎಂದು ಪೋಷಕರು ಮಕ್ಕಳ ದಾರಿಯನ್ನೇ ಕಾಯುತ್ತಿರುತ್ತಾರೆ. ಆದ್ದರಿಂದ ಇಂತಹ ಹುಚ್ಚಾಟಗಳನ್ನು ನಿಲ್ಲಿಸಿ ಅಂತಲೂ ಪೊಲೀಸರು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಲೇ ಇರುತ್ತಾರೆ. ಇನ್ನು ರೈಲು ಹತ್ತಲು ಹೋಗಿ ಹುಚ್ಚಾಟ ಮೆರೆದು ಕೊನೆಗೆ ಯುವಕನೋರ್ವ ಪೇಚಿಗೆ ಸಿಲುಕಿರುವ ವಿಡಿಯೋ ಇಲ್ಲಿದೆ ನೋಡಿ.












Click it and Unblock the Notifications