ಮದುವೆಯಲ್ಲಿ ಸುರಿಯಿತು ₹20 ಲಕ್ಷ ನೋಟಿನ ಮಳೆ! ವಿಡಿಯೋ ವೈರಲ್‌

ಮದುವೆಗೆ ಗಿಫ್ಟ್‌ ಕೊಡೋದು, ಒಂದಿಷ್ಟು ಹಣವನ್ನು ಕವರ್‌ನಲ್ಲಿಟ್ಟು ಕೊಡೋದು ಸಾಮಾನ್ಯ. ವರದಕ್ಷಿಣೆಗೆ ಹಣ ಜೋಡಿಸೋದು ಕೂಡ ಆಗಾಗ ಕೇಳಿರ್ತೀವಿ. ಆದ್ರೆ ಎಲ್ಲಾದ್ರೂ ಮದುವೇಲಿ ಹಣದ ಮಳೆ ಸುರಿದಿರೋದು ಕೇಳಿದ್ದೀರಾ? ಇಂತಾ ಹುಬ್ಬೇರಿಸೋ ವಿಚಾರ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಬರೋಬ್ಬರಿ 20 ಲಕ್ಷ ರೂಪಾಯಿ ನೋಟುಗಳನ್ನು ಗಾಳಿಯಲ್ಲಿ ಚೆಲ್ಲಾಡಿರುವ ವಿಡಿಯೋವೊಂದು ಸಖತ್‌ ವೈರಲ್‌ ಆಗಿದೆ.

ಉತ್ತರ ಪ್ರದೇಶದಲ್ಲಿ ನಡೆದಿರುವ ಮದುವೆಯೊಂದರಲ್ಲಿ ಈ ರೀತಿ ಹಣದ ಮಳೆ ಸುರಿಸಿದ್ದಾರೆ ಎಂದು ವರದಿಯಾಗಿದೆ. ಮದುವೆಗೆ ಬಂದಿದ್ದ ಅತಿಥಿಗಳು ದಿಬ್ಬಣದ ಮೆರವಣಿಗೆ ವೇಳೆ ಜೆಸಿಬಿಗಳ ಮೇಲೆ ನಿಂತು ಕಂತೆ ಕಂತೆ ನೋಟುಗಳನ್ನು ಚೆಲ್ಲಾಡಿದ್ದಾರೆ. ಇದರ ಮೌಲ್ಯ ಬರೋಬ್ಬರಿ 20 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.

A Video Of 20 lakh Rupees Notes Being Thrown At A Wedding Has Gone Viral

ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ಇಂತದ್ದೊಂದು ಮದುವೆ ನಡೆದಿದೆ ಎಂದು ವರದಿಯಾಗಿದೆ. ಮದುವೆಗೆ ಬಂದಿದ್ದ ಅತಿಥಿಗಳೇ 20 ಲಕ್ಷ ರೂಪಾಯಿಯನ್ನು ಮೇಲಿಂದ ಬಿಸಾಡಿದ್ದಾರೆ ಎಂದು ಹೇಳಲಾಗಿದೆ. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಇನ್ನು ವಿಡಿಯೋದಲ್ಲಿ ಜನರು ಜೆಸಿಬಿಗಳ ಮೇಲೆ ಹಾಗೂ ಬಿಲ್ಡಿಂಗ್‌ಗಳ ಮೇಲೆ ನಿಂತು ಹಣ ಎಸೆದಿದ್ದಾರೆ.

ವರನ ಕಡೆಯ ಅತಿಥಿಗಳು ಈ ಹಣದ ಮಳೆ ಸುರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮದುವೆಯ ಮೆರವಣಿಗೆ ನಡೆಯುತ್ತಿದ್ದಾಗ ಕೆಲವು ಅತಿಥಿಗಳು ಅಕ್ಕಪಕ್ಕದ ಮನೆಗಳ ಟೆರೇಸ್ ಹತ್ತಿದರೆ, ಇನ್ನೂ ಕೆಲವರು ಜೆಸಿಬಿಗಳನ್ನು ಕರೆಸಿ ಅದರ ಮೇಲೆ ಹತ್ತು ನಿಂತು ಹಣ ಚೆಲ್ಲಿದ್ದಾರೆ.

100, 200 ಹಾಗೂ 500 ರೂಪಾಯಿಯ ನೋಟುಗಳ ಕಂತೆಯನ್ನು ಗಾಳಿಗೆ ತೂರಿ ಬಿಸಾಡಿದ್ದಾರೆ. ಇದನ್ನು ಅಲ್ಲಿದ್ದ ಕೆಲವರು ಮುಗಿಬಿದ್ದು ಆಯ್ದುಕೊಂಡಿರುವುದು ಕೂಡ ಕಂಡುಬಂದಿದೆ. ವೈರಲ್ ಆಗಿರುವ ವಿಡಿಯೋ ಅಫ್ಜಲ್ ಮತ್ತು ಅರ್ಮಾನ್ ಎಂಬುವವರ ಮದುವೆಯದ್ದು ಎಂದು ಹೇಳಲಾಗಿದೆ.

ವೈರಲ್‌ ಆಗಿರುವ ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಣವನ್ನು ಹೀಗೆ ಬಿಸಾಡುವ ಬದಲಿಗೆ ಅಗತ್ಯವಿರುವವರಿಗೆ ಹಂಚಬೇಕಿತ್ತು ಎಂದು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ಮೊದಲು ಆದಾಯ ತೆರಿಗೆ ಅಧಿಕಾರಿಗಳಿಗೆ ಫೋನ್‌ ಮಾಡ್ರೋ ಎಂದು ಜೋಕ್‌ ಕೂಡ ಮಾಡಿದ್ದಾರೆ.

ಈ ವಿಡಿಯೋಗಳನ್ನು ಕಂಡು ಜನ ಶಾಕ್‌ ಆಗಿದ್ದು, ಕಣ್ಣಲ್ಲಿ ಇಷ್ಟೊಂದು ಹಣ ಒಟ್ಟಿಗೆ ನೋಡೋಕೆ ಆಗಲಿಲ್ಲ. ಅದನ್ನು ಗಾಳಿಗೆ ತೂರಿ ಬಿಟ್ಟು ನಮ್ಮ ಹೊಟ್ಟೆ ಉರುಸ್ತಿದ್ದೀರಲ್ರೋ ಎಂದು ನೊಂದುಕೊಂಡಿದ್ದಾರೆ. ಆದರೆ, ಆ ನೋಟುಗಳು ನಕಲಿಯೋ ಅಸಲಿಯೋ ಎಂಬುದು ತಿಳಿದುಬಂದಿಲ್ಲ.

ನಮ್‌ ಮದುವೆಗೆ ಬರೋ ಅತಿಥಿಗಳು ಚೆನ್ನಾಗಿ ತಿಂದು ತೇಗಿ ಹೋಗ್ತಾರೆ. ಇದ್ರೆ ಇಂತ ಅತಿಥಿಗಳೇ ಇರಬೇಕು ಎಂದು ಆಸೆ ಬಿಚ್ಚಿಟ್ಟಿದ್ದಾರೆ. ಅಷ್ಟು ಹಣ ಬಿಸಾಡುವ ಬದಲು ಅದೇ ಹಣದಲ್ಲಿ ನಾಲ್ಕು ಮದುವೆ ಆಗಬಹುದಿತ್ತು ಎಂದೂ ಕೆಲವರು ಕಾಲೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+