ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ವೈದ್ಯ ದಂಪತಿ ಶವವಾಗಿ ಪತ್ತೆ

ಹೈದರಾಬಾದ್, ಅ. 21: ಕಳೆದೆರಡು ತಿಂಗಳ ಹಿಂದೆ ಮದುವೆಯಾಗಿದ್ದ ಯುವ ವೈದ್ಯ ದಂಪತಿ ಶುಕ್ರವಾರ ಹೈದರಾಬಾದ್‌ನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವಿದ್ಯುತ್ ಅವಘಡ ಸಾವಿಗೆ ಕಾರಣ ಎನ್ನಲಾಗಿದೆ.

ಸ್ನಾನಗೃಹದ ಗೀಸರ್‌ ವಿದ್ಯುತ್ ತಂತಿಯಲ್ಲಿ ಅವಘಡ ಸಂಭವಿಸಿ ಉಂಟಾದ ವಿದ್ಯುತ್ ಶಾಕ್ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಲಾಂಗರ್‌ಹೌಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ಯುವತಿಗೆ ಮೊದಲು ಗೀಸರ್‌ನಿಂದ ವಿದ್ಯುತ್ ಶಾಕ್ ತಗುಲಿದೆ. ಪತ್ನಿ ಉಮ್ಮೆ ಮೊಹಿಮೀನ್ ಸೈಮಾ ಅವರನ್ನು ರಕ್ಷಿಸಲು ಪ್ರಯತ್ನಿಸಿದಾಗ ಪತಿಗೂ ಶಾಕ್ ತಗುಲಿದೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.

A Doctor Couple Just Married Found Dead At Hyderabad Home

ಮೃತ ಸೈಯದ್ ನಿಸಾರುದ್ದೀನ್ (26) ಸೂರ್ಯಪೇಟ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಅವರ ಪತ್ನಿ ಉಮ್ಮೆ ಮೊಹಿಮೀನ್ ಸೈಮಾ (22) ಡೆಕ್ಕನ್ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ಈ ದಂಪತಿ ಖಾದರ್‌ಬಾಗ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು.

"ನಾವು ಮನೆಯೊಳಗೆ ಹೋಗಿ, ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದೇವೆ. ಏನೋ ತಪ್ಪಾಗಿದೆ ಎಂದು ಅನುಮಾನ ಬಂದು ಕಿಟಕಿಯ ಮೂಲಕ ನೋಡಿದಾಗ ದಂಪತಿ ಸಾವನ್ನಪ್ಪಿರುವುದು ಕಾಣಿಸಿತು" ಎಂದು ಮೃತ ನವವಿವಾಹಿತೆ ಉಮ್ಮೆ ಮೊಹಿಮೀನ್ ಸೈಮಾ (22) ಅವರ ತಂದೆ ಹೇಳಿದ್ದಾರೆ.

ಡಾ ಸೈಯದ್ ನಿಸಾರುದ್ದೀನ್ ಮತ್ತು ಅವರ ಪತ್ನಿ ಉಮ್ಮೆ ಮೊಹಿಮೀನ್ ಸೈಮಾ ಬುಧವಾರ ರಾತ್ರಿ ಸೂರ್ಯಪೇಟೆಯಿಂದ ಹಿಂತಿರುಗಿದ್ದರು. ಗುರುವಾರ ಬೆಳಗ್ಗೆ ಸೈಮಾ ತನ್ನ ತಂದೆಯೊಂದಿಗೆ ಮಾತನಾಡಿ ನಂತರ ಕರೆ ಮಾಡುವುದಾಗಿ ಹೇಳಿ ಕರೆ ಕಟ್ ಮಾಡಿದ್ದರು. ಆದರೆ, ಮತ್ತೆ ಮಗಳು ಕರೆ ಮಾಡಲೇ ಇಲ್ಲ. ಇಬ್ಬರೂ ಕೆಲಸಕ್ಕೆ ಹೋಗಿರಬೇಕು ಎಂದು ತಂದೆ ಊಹಿಸಿದ್ದರು. ಆದರೆ, ಸಂಜೆಯ ನಂತರ ಇಬ್ಬರು ಕರೆಗಳಿಗೆ ಉತ್ತರಿಸದಿದ್ದಾಗ ಆತಂಕದಿಂದ ಕುಟುಂಬ ಸದಸ್ಯಯರು ಅಪಾರ್ಟ್ಮೆಂಟ್‌ಗೆ ಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+